More

    ಬಿಜೆಪಿ ಟಿಕೆಟ್ ಬಿಕ್ಕಟ್ಟು ಶಮನ- ಅಧಿಕೃತ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆ?

    ಬೆಂಗಳೂರು: ಸಂಘಟನೆಯೇ ಮುಖ್ಯವೆಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಮುನಿರತ್ನ ಅವರಿಗೆ ಮನವರಿಕೆಯಾಗಿದೆ.

    ಇದರೊಂದಿಗೆ ಬಿಜೆಪಿ ಟಿಕೆಟ್ ಬಿಕ್ಕಟ್ಟು ಬಗೆಹರಿದಿದ್ದು, ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿನಗರ (ಆರ್​.ಆರ್​.ನಗರ) ಕ್ಷೇತ್ರಗಳಿಗೆ ಅಧಿಕೃತ ಪಟ್ಟಿಯನ್ನು ವರಿಷ್ಠರು ಇಂದು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

    ಕಚೇರಿಗೆ ಮುನಿರತ್ನ ದೌಡು
    ಪಕ್ಷದ ರಾಜ್ಯ ಕಚೇರಿಗೆ ಮುನಿರತ್ನ ದೌಡಾಯಿಸಿ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹಾಗೂ ದಕ್ಷಿಣ ಭಾರತ ಉಸ್ತುವಾರಿ ಸಿ.ಟಿ.ರವಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರೊಂದಿಗೆ ಚರ್ಚಿಸಿದರು.

    ಇದನ್ನೂ ಓದಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕಾಂಗ್ರೆಸ್ ಮುಖಂಡರ ಸಂಚು: ಆರೋಪ ಪಟ್ಟಿ ಸಲ್ಲಿಸಿದ ಸಿಸಿಬಿ

    ಪಕ್ಷಕ್ಕೆ ನಿಷ್ಠನಾಗಿ ಜವಾಬ್ದಾರಿ ನಿರ್ವಹಿಸುವೆ, ಟಿಕೆಟ್ ಬೇಡಿಕೆಯನ್ನು ಈಡೇರಿಸಿ ಎಂಬ ಮನವಿ ಮಂಡಿಸಿದರು. ಅಲ್ಲದೆ, ಪಕ್ಷದ ಸಂಘಟನೆ ಬಲವರ್ಧನೆಗೆ ಅನುಕೂಲವಾಗುವ ವಿಚಾರಗಳನ್ನು ವಿವರಿಸಿದರು ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

    ಬಿಕ್ಕಟ್ಟು ಇತ್ಯರ್ಥ
    ಸಂಘಟನೆಯ ಹಿರಿಯ ಮುಖಂಡರನ್ನು ಮುನಿರತ್ನ ಭೇಟಿಯಾಗಿದ್ದರಿಂದ ಬಿಕ್ಕಟ್ಟು ಇತ್ಯರ್ಥವಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಮುನಿರತ್ನ ಸಂಘಟನೆಯ ಪ್ರಮುಖರ ಭೇಟಿಯಾಗಿ ಮಾತುಕತೆ ನಡೆಸಿದ್ದಿಲ್ಲ. ಹೀಗಾಗಿ ಸಂಘಟನೆಯ ಮಹತ್ವ ಅರಿವಾಗಲೆಂದು ವರಿಷ್ಠರು ಅಧಿಕೃತ ಹೆಸರು ಘೋಷಣೆಗೆ ವಿಳಂಬ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

    ಉಸಿರಾಟದ ಸಮಸ್ಯೆ: ರಾಷ್ಟ್ರಪತಿ ಪದಕ ಪುರಸ್ಕೃತ ನಿವೃತ್ತ ಎಸ್​ಪಿ ನೂರುಲ್ಲಾ ವಿಧಿವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts