More

    ‘ಅತ್ಯಾಚಾರಿ ಬಿಲ್‌ ಕ್ಲಿಂಟನ್‌ ಬಹುದಿನಗಳ ನಂತರ ತಮ್ಮ ಹಾಸಿಗೆ ಮೇಲೆ ಮಲಗಿದರು’ ಎಂದ ಬಿಬಿಸಿ ನಿರೂಪಕಿ!

    ನ್ಯೂಯಾರ್ಕ್‌: ಕೆಲವೊಮ್ಮ ವರದಿಗಾರರು, ನಿರೂಪಕರು ತಿಳಿಯದೇ ಮಾಡುವ ಎಡವಟ್ಟುಗಳು ಅಷ್ಟಿಷ್ಟಲ್ಲ. ಅಂಥದ್ದೇ ಒಂದು ಎಡವಟ್ಟನ್ನು ಬಿಬಿಸಿ ನಿರೂಪಕಿ ಮಾಡಿದ್ದು, ಇದೀಗ ಸಕತ್‌ ವೈರಲ್‌ ಆಗಿದೆ.

    ಬಿಲ್ ಕ್ಲಿಂಟನ್ ಹೆಸರು ಕೇಳದವರು ಬಲು ಅಪರೂಪ ಎಂದೇ ಹೇಳಬೇಕು. 1993-2001ರವರೆಗೂ ಅಮೆರಿಕದ ಅಧ್ಯಕ್ಷರಾಗಿದ್ದವರು. ಬೇರೆ ಯಾವುದೋ ಪ್ರಕರಣದಲ್ಲಿ ಇವರ ಹೆಸರನ್ನು ಹೇಳುವ ಮೂಲಕ ನಿರೂಪಕಿ ಪೇಚಿಗೆ ಸಿಲುಕಿದ್ದಾರೆ, ಅದೂ ಅತ್ಯಾಚಾರ ಪ್ರಕರಣದಲ್ಲಿ ಇವರ ಹೆಸರನ್ನು ಆಕೆ ಹೇಳಿದ್ದಾಳೆ. ‘ಅತ್ಯಾಚಾರಿ ಬಿಲ್‌ ಕ್ಲಿಂಟನ್‌ ಬಹುದಿನಗಳನಂತರ ತಮ್ಮ ಹಾಸಿಗೆ ಮೇಲೆ ಮಲಗಿದರು’ ಎಂದಿರುವ ನಿರೂಪಕಿ ಅವರ ಮನೆಯನ್ನು ತೋರಿಸಿದ್ದಾಳೆ.

    Bill Cosby

    ಅಷ್ಟಕ್ಕೂ ಈ ಎಡವಟ್ಟು ಆಗಲು ಕಾರಣವೇನೆಂದರೆ, ಬಿಲ್ ಕಾಸ್ಬಿ ಒಬ್ಬ ಸ್ಟಾಂಡ್-ಅಪ್ ಕಾಮೆಡಿಯನ್ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ. ಈತನ ಜೈಲು ಶಿಕ್ಷೆಯ ಅವಧಿ ಮುಗಿದಿದ್ದು, ಜೈಲಿನಿಂದ ಬಿಡುಗಡೆಯಾಗಲಿದ್ದ. ಬಿಲ್‌ ಕಾಸ್ಬಿ ಕೂಡ ಪ್ರಸಿದ್ಧ ವ್ಯಕ್ತಿಯಾಗಿರುವ ಕಾರಣ, ಈ ನಿರೂಪಕಿ ಬಿಲ್‌ ಹೆಸರನ್ನಷ್ಟೇ ಕೇಳಿ ಬಿಲ್‌ ಕ್ಲಿಂಟನ್‌ ಎಂದುಕೊಂಡುಬಿಟ್ಟಿದ್ದಾಳೆ!

    ಇಬ್ಬರಲ್ಲೂ ಮೊದಲ ಹೆಸರು ‘ಬಿಲ್’ ಬಿಟ್ಟರೆ ಬೇರೇನೂ ಸಾಮ್ಯತೆ ಇಲ್ಲ. ಆದರೆ ನಿರೂಪಕಿ ಹಾವ್‌ ಎಡ್ವರ್ಡ್ಸ್ ಎಂಬಾಕೆ ಎಡವಟ್ಟುಮಾಡಿಕೊಂಡು ‘ಕಳೆದ ಎರಡು ವರ್ಷಗಳಿಂದ ಬಿಲ್ ಕ್ಲಿಂಟನ್ ಜೈಲನ್ನು ತಮ್ಮ ಮನೆ ಮಾಡಿಕೊಂಡಿದ್ದರು. ಅಲ್ಲಿಯೇ ಮಲಗಿದ್ದರು, ಈಗ ತಮ್ಮ ಮನೆಯ ಹಾಸಿಗೆಯ ಮೇಲೆ ಮಲಗಲಿದ್ದಾರೆ’ ಎಂದಿದ್ದಾಳೆ. ಅಷ್ಟಾದರೂ ಆಕೆಗೆ ತಾನು ಹೇಳುತ್ತಿರುವುದು ತಪ್ಪು ಎಂಬುದು ತಿಳಿಯದೇ ಇಲ್ಲ.
    ಸ್ಟುಡಿಯೋದಲ್ಲಿದ್ದ ನಿರೂಪಕ ಕಾಸ್ಬಿ ಅವರಿಗೆ ಈ ಎಡವಟ್ಟು ತಿಳಿದು ತಕ್ಷಣವೇ ಕ್ಷಮೆ ಕೋರಿದರು. ಆದ್ದರಿಂದ ಹೆಚ್ಚಿನ ಅನಾಹುತವಾಗಲಿಲ್ಲ. ಆದರೂ ನಿರೂಪಕಿಯ ಎಡವಟ್ಟು ಇದೀಗ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ.

    ಇಲ್ಲಿದೆ ನೋಡಿ ವಿಡಿಯೋ:

    ಅನ್‌ಲಾಕ್‌ 3.0ಗೆ ಕ್ಷಣಗಣನೆ: ಏನೇನಾಗಬಹುದು? ಇಲ್ಲಿದೆ ನೋಡಿ ಡಿಟೇಲ್ಸ್‌…

    ಸಿಡಿ ಲೇಡಿ ಹುಡುಕಿ ಹೊರಟ್ರು ಜಾರಕಿಹೊಳಿ- ಊರಿಗೆ ಬಂದ್ರೂ ಮನೆಗೆ ಬಂದಿಲ್ಲ: ಎಲ್ಲವೂ ನಿಗೂಢ!

    ರಾತ್ರೋರಾತ್ರಿ ಒಂದು ಕಿ.ಮೀ ಉದ್ದದ ರಸ್ತೆ ‘ಕಳುವು’: ಹೀಗೊಂದು ವಿಚಿತ್ರ ಘಟನೆ- ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts