More

    ಬಿಬಿಸಿಯಲ್ಲಿ ಇನ್ನು ಜೆಫ್ರಿ ಬಾಯ್ಕಟ್ ಕಾಮೆಂಟರಿ ಕೇಳಲ್ಲ!

    ಲಂಡನ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೆಫ್ರಿ ಬಾಯ್ಕಟ್ ತಮ್ಮದೇ ವಿಶಿಷ್ಟ ಧ್ವನಿ ಮತ್ತು ವಿಶೇಷ ಶೈಲಿಯ ಕ್ರಿಕೆಟ್ ಕಾಮೆಂಟರಿಯಿಂದ ಜನಪ್ರಿಯರು. 79 ವರ್ಷದ ಅವರು ಕಳೆದ 14 ವರ್ಷಗಳಿಂದಲೂ ಬಿಬಿಸಿಯಲ್ಲಿ ಪ್ರಸಾರವಾಗುವ ಟೆಸ್ಟ್ ಪಂದ್ಯಗಳಿಗೆ ಕಾಮೆಂಟರಿ ನೀಡುವ ವಿಶೇಷ ಒಪ್ಪಂದವನ್ನು ಹೊಂದಿದ್ದರು. ಆದರೆ ಈ ಬಾರಿ ಕರೊನಾ ವೈರಸ್ ಭೀತಿಯಿಂದಾಗಿ ಅವರು ಬಿಬಿಸಿ ಜತೆಗೆ ವೀಕ್ಷಕವಿವರಣೆಕಾರರಾಗಿ ಮುಂದುವರಿಯದಿರಲು ನಿರ್ಧರಿಸಿದ್ದಾರೆ.

    ಇದನ್ನೂ ಓದಿ: ಎಂದೆಂದಿಗೂ ಆನಂದ್‌ ಅಭಿಮಾನಿಯಾಗಿರುವೆ ಎಂದು ಸಹ-ಪ್ರಯಾಣಿಕ ಹೇಳಿದ್ದೇಕೆ?

    ಮುಂದಿನ ತಿಂಗಳು ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಆತಿಥೇಯ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಗೊಳ್ಳುವುದಕ್ಕೆ ಮುನ್ನ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ‘14 ವರ್ಷಗಳ ಅಪೂರ್ವ ಸಂಬಂಧಕ್ಕಾಗಿ ಬಿಬಿಸಿ ತಂಡಕ್ಕೆ ನನ್ನ ಕೃತಜ್ಞತೆಗಳು. ನಾನು ಈ ಸಮಯವನ್ನು ಆನಂದಿಸಿದ್ದೇನೆ ಮತ್ತು ಕ್ರಿಕೆಟ್ ಆಟವನ್ನು ಉತ್ಸಾಹದಿಂದ ಪ್ರೀತಿಸಿದ್ದೇನೆ. ನನ್ನ ಕಾಮೆಂಟರಿಯನ್ನು ಆನಂದಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಕಾಮೆಂಟರಿ ಕೆಟ್ಟದಾಗಿಲ್ಲ ಎಂದವರಿಗೂ ಧನ್ಯವಾದಗಳು’ ಎಂದು ಬಾಯ್ಕಟ್ ಶನಿವಾರ ಟ್ವೀಟಿಸಿದ್ದಾರೆ.

    ಇದನ್ನೂ ಓದಿ: ಐಪಿಎಲ್ ತಂಡಗಳ ತವರಲ್ಲಿ ಕರೊನಾರ್ಭಟ!

    ‘ಬಿಬಿಸಿ ಜತೆಗಿನ ನನ್ನ ಒಪ್ಪಂದ ಕಳೆದ ಬೇಸಗೆಯಲ್ಲೇ ಕೊನೆಗೊಂಡಿದೆ. ನಾನು ಒಪ್ಪಂದವನ್ನು ಮುಂದುವರಿಸಲು ಇಷ್ಟಪಡುತ್ತಿದ್ದೆ. ಆದರೆ ನಾನೀಗ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಕೋವಿಡ್-19ರಿಂದಾಗಿ ನಾವಿಬ್ಬರೂ ಒಪ್ಪಂದವನ್ನು ವಿಸ್ತರಿಸುತ್ತಿಲ್ಲ’ ಎಂದು ಬಾಯ್ಕಟ್ ವಿವರಿಸಿದ್ದಾರೆ. ತಮ್ಮ ವಯಸ್ಸು ಮತ್ತು ಹೃದಯದ ಬೈಪಾಸ್ ಸರ್ಜರಿ ಕೂಡ ಕಾಮೆಂಟರಿಯಲ್ಲಿ ಮುಂದುವರಿಯದಿರುವ ನಿರ್ಧಾರಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ವರ್ಕೌಟ್ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವ ದೀಪಿಕಾ ಪಲ್ಲಿಕಲ್

    ಇಂಗ್ಲೆಂಡ್-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯನ್ನು ಜೈವಿಕ-ಸುರಕ್ಷಾ ವಾತಾವರಣದಲ್ಲಿ ಆಡಲಾಗುತ್ತಿದೆ. ಈ ವೇಳೆ ಅಲ್ಲಿ ವೀಕ್ಷಕವಿವರಣೆ ನೀಡಲು ನನ್ನ ವಯಸ್ಸು ಅಡ್ಡಿಯಾಗಿದೆ. ಜೈವಿಕ-ಸುರಕ್ಷಾ ಪ್ರದೇಶದಲ್ಲಿ ಇಡೀ ದಿನ ಬಂಧಿಯಾಗಿರುವುದು ನನಗೆ ಈ ವಯಸ್ಸಿನಲ್ಲಿ ಸಾಧ್ಯವಾಗದು. ಅಲ್ಲಿನ ವೀಕ್ಷಕವಿವರಣೆಕಾರರು ಮತ್ತು ಇತರರು ನನ್ನ ಸ್ನೇಹಿತರಾಗಿದ್ದರೂ, ಅವರೊಂದಿಗೆ ಆ ಕಿರು ಸ್ಥಳದಲ್ಲಿ ಹೆಚ್ಚಿನ ಸಮಯ ಕಳೆಯುವುದು ಸಾಧ್ಯವಾಗದು ಎಂದು ಬಾಯ್ಕಟ್ ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts