More

    ಬಿಳಿಗಿರಿರಂಗನಬೆಟ್ಟದ ಕಾಡಿನ ನಡುವೆ ಸಿಲುಕಿದ ಅಪ್ಪ-ಮಗ: ಹೀರೋ ಆಗಿ ಬಂದ ಪೊಲೀಸ್​

    ಚಾಮರಾಜನಗರ: ಚಾಮರಾಜನಗರದ ಬಿಳಿಗಿರಿರಂಗನಬೆಟ್ಟದ ದಟ್ಟ ಕಾನನದ ನಡುವೆ ಸಿಲುಕಿ ಒಡ್ಡಾಡುತ್ತಾ ಆರೇಳು ಗಂಟೆ ಜೀವಭಯದಿಂದ ಕಳೆದ ಅಪ್ಪ-ಮಗನನ್ನು ರಕ್ಷಿಸಿದ ಪೊಲೀಸ್‍ ಇನ್ಸ್​ಪೆಕ್ಟರ್​ ಇದೀಗ ಭಾರಿ ಶ್ಲಾಘನೆಗೆ ಒಳಗಾಗಿದ್ದಾರೆ.

    ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ದಟ್ಟ ಅರಣ್ಯದ ಹಳ್ಳವೊಂದರಲ್ಲಿ ಸಿಲುಕಿಕೊಂಡು ಕಾರಿನೊಳಗೆ ರಾತ್ರಿ ಸಿಲುಕಿಕೊಂಡಿದ್ದ ಬೆಂಗಳೂರು ನಿವಾಸಿ ಉದ್ಯಮಿ ಎನ್‍. ರೂಪೇಶ್‍ ಕುಮಾರ್ ರೆಡ್ಡಿ, ಅವರ ಮಗ ತೇಜೇಶ್ವರ ಹಾಗೂ ಚಾಲಕ ಕೇಶವ ಅವರನ್ನು ಚಾಮರಾಜನಗರ ಡಿಸಿಐಬಿ ಇನ್ಸ್​ಪೆಕ್ಟರ್​ ಮಹದೇವಶೆಟ್ಟಿ ಮತ್ತು ತಂಡದವರು ರಕ್ಷಿಸಿದ್ದಾರೆ.

    ಅಷ್ಟಕ್ಕೂ ಆಗಿದ್ದೇನೆಂದರೆ, ರೂಪೇಶ್‍ ಕುಮಾರ್ ಅವರು ತಮ್ಮ ಮಗನೊಂದಿಗೆ ಸೆ. 16ರಂದು ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ ಹೋಗಿದ್ದರು. ಅಂದು ರಾತ್ರಿ ಕಾರಿನಲ್ಲಿ ಬಿಳಿಗಿರಿರಂಗನಬೆಟ್ಟದಿಂದ ಕೆ.ಗುಡಿಗೆ ಬರುತ್ತಿದ್ದರು. ಆಗ ಮಾರ್ಗ ಮಧ್ಯದ ಹಳ್ಳವೊಂದರಲ್ಲಿ ಅವರ ಕಾರು ಸಿಲುಕಿಬಿಟ್ಟಿದೆ. ಕಾರು ಮೇಲೆ ಎತ್ತಲು ಅವರ ಚಾಲಕನಿಗೂ ಸಾಧ್ಯವಾಗಲಿಲ್ಲ.

    ಇದನ್ನೂ ಓದಿ: 1982ರಲ್ಲಿ ಹೆಂಡ್ತಿನೇ ಇರ್ಲಿಲ್ಲಾ, ಹಾಗಿದ್ರೆ… ಜೂಜುಅಡ್ಡೆ ವಿಷ್ಯದಲ್ಲಿ ಟ್ರೋಲ್​ ಆಗ್ತಿದ್ದಾರೆ ಎಚ್​ಡಿಕೆ!

    ಹೇಳಿ ಕೇಳಿ ಕಾಡು ಬೇರೆ. ಮೊಬೈಲ್‍ ಫೋನ್‍ ನೆಟ್​ವರ್ಕ್​ ಇರಲಿಲ್ಲ. ಈ ಕಾಡಿನಲ್ಲಿ ಹುಲಿ, ಆನೆ ಸೇರಿದಂತೆ ವನ್ಯಮೃಗಗಳು ಇವೆ. ಆದ್ದರಿಮದ ಜೀವಭಯದಿಂದಲೇ ಈ ಮೂವರೂ ರಾತ್ರಿ ಕಳೆದಿದ್ದಾರೆ.

    ನಸುಕಿನ 2 ಗಂಟೆ ಸುಮಾರಿಗೆ ಗಾಂಜಾ ಅಕ್ರಮ ಸಾಗಾಣಿಕೆ ಜಾಡು ಹಿಡಿದು ಗಸ್ತು ತಿರುಗುತ್ತಿದ್ದ ಡಿಸಿಐಬಿ ಇನ್‍ಸ್ಪೆಕ್ಟರ್ ಮಹದೇವ ಶೆಟ್ಟಿ ಅವರು ಅದೇ ಮಾರ್ಗದಲ್ಲಿ ಹೋಗಿದ್ದಾರೆ. ಕಾರನ್ನು ಗಮನಿಸಿದ ಅವರು, ತಂಡದ ಸಹಾಯದಿಂದ ರಕ್ಷಿಸಿ ಜೀಪಿನಲ್ಲಿ ಕೂರಿಸಿಕೊಂಡು ಹೋಟೆಲ್​ಗೆ ಬಿಟ್ಟು ಬಂದಿದ್ದಾರೆ.

    ಈ ವಿಷಯವನ್ನು ಇಂದು ರೂಪೇಶ್‍ ಅವರು ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ದಿವ್ಯಾ ಸರಾ ಥಾಮಸ್‍ ಅವರಿಗೆ ತಿಳಿಸಿದ್ದು, ಅದನ್ನವರು ತಮ್ಮ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ಉತ್ತಮ ಕೆಲಸ ಮಾಡಿದ ಡಿಸಿಐಬಿ ಇನ್‍ಸ್ಪೆಕ್ಟರ್ ಮಹದೇವಶೆಟ್ಟಿ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ನೇಪಾಳದ ಬೆನ್ನಿಗೂ ಚೂರಿ ಹಾಕಿದ ಚೀನಾ! ಗಡಿ ಗುಳುಂ ಮಾಡಿ ಕಟ್ಟಡ ನಿರ್ಮಾಣ

    ಸಿಕ್ಕಷ್ಟು ಸಿಗಲಿ… ಪಲ್ಟಿಯಾದ ವಾಹನದಲ್ಲಿದ್ದ ಚೆಲ್ಲಾಪಿಲ್ಲಿ ಮೊಟ್ಟೆಗಳನ್ನು ಬಾಚಲು ದೌಡು!

    ಸಾಲದ ಇಎಂಐಯಿಂದ 2 ವರ್ಷ ಮುಕ್ತಿಗೆ ನೀವೂ ಅರ್ಹರಾ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts