More

    ಮತ್ತೆ ಸುದ್ದಿಯಲ್ಲಿ ಬಿಗ್‌ಬಾಸ್‌ ಸ್ಪರ್ಧಿ ವೈಜಯಂತಿ: ಆನ್‌ಲೈನ್‌ನಲ್ಲಿ ಗೆಳೆಯನ ಜತೆ ಎಂಗೇಜ್‌ಮೆಂಟ್‌

    ಬೆಂಗಳೂರು: ಕನ್ನಡದ ಬಿಗ್‌ಬಾಸ್‌ ಸೀಸನ್‌ 8ರಲ್ಲಿ ವೈಲ್ಡ್‌ಕಾರ್ಡ್‌ ಮೂಲಕ ಎಂಟ್ರಿ ಪಡೆದಿದ್ದ ವೈಜಯಂತಿ ಅಡಿಗ ಅವರು ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಇರುವಾಗ ಪದೇ ಪದೇ ತಾನು ಮನೆಗೆ ಹೋಗಬೇಕು ಎಂದು ಗೋಗರೆಯುತ್ತಿದ್ದ ವೈಜಯಂತಿ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ತಮ್ಮ ಗೆಳೆಯ ಸೂರಜ್‌ ಜತೆ ಆನ್‌ಲೈನ್‌ನಲ್ಲಿಯೇ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ!

    ಎಂಗೇಜ್‌ಮೆಂಟ್‌ ಫೋಟೋಗಳನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಇವರ ಅಳಲನ್ನು ಕೇಳಲು ಆಗದೇ ವೀಕೆಂಡ್‍ನಲ್ಲಿ ಇವರಿಗೆ ಮನೆಗೆ ಹೋಗಲು ಅವಕಾಶ ನೀಡಲಾಗಿತ್ತು. ಪುನಃ ವಾಪಸ್‌ ಬಿಗ್‌ಬಾಸ್‌ ಮನೆಗೆ ಬಂದು ಕೆಲವೇ ದಿನಗಳಲ್ಲಿ ಹೊರಕ್ಕೆ ಬಂದವರು ವೈಜಯಂತಿ. ಅಷ್ಟೇ ಅಲ್ಲದೇ ಬಿಗ್‍ಬಾಸ್ ಫಿನಾಲೆ ದಿನ ಕೂಡ ಇವರು ಸುದ್ದಿಯಲ್ಲಿದ್ದರು. ಇದಕ್ಕೆ ಕಾರಣ, ಎಲ್ಲಾ ಸ್ಪರ್ಧಿಗಳು ವೇದಿಕೆಗೆ ಬಂದಿದ್ದರೂ ವೈಜಯಂತಿ ಮಿಸ್ಸಿಂಗ್‌ ಆಗಿದ್ದರು.

    ಈಗ ಮತ್ತೆ ಎಂಗೇಜ್‌ಮೆಂಟ್‌ ಅನ್ನೇ ಆನ್‌ಲೈನ್‌ನಲ್ಲಿ ಮಾಡಿಕೊಳ್ಳುವ ಮೂಲಕ ಮತ್ತೆ ಪ್ರಚಾರದಲ್ಲಿದ್ದಾರೆ. ಅಂದ ಹಾಗೆ ವೈಜಯಂತಿ ಅವರು ಖ್ಯಾತ ಹೋಟೆಲ್ ಉದ್ಯಮಿ ವಾಸುದೇವ ಅಡಿಗ ಅವರ ಮಗಳು. ಇವರ ಭಾವಿ ಪತಿ ಸೂರಜ್‌ ಅಮೆರಿಕದಲ್ಲಿ ಇದ್ದಾರೆ. ಅಮೆರಿಕದಿಂದಲೇ ಅವರು ಆನ್‌ಲೈನ್‌ನಲ್ಲಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದು, ಇಬ್ಬರ ಕುಟುಂಬದವರು ಹಾಜರಿದ್ದರು.

    ಕರ್ಟನ್‌ ಸುತ್ತಿಸಿ ಪರೀಕ್ಷೆ ಬರೆಸಿದರು! ಚಡ್ಡಿಯಲ್ಲೇನು ಸಮಸ್ಯೆ ಎಂದು ಕೆಂಡಾಮಂಡಲವಾದ ಯುವತಿ

    ‘ಕಿರಾತಕ’ ಬೆಡಗಿ ಓವಿಯಾಳನ್ನು ಓಡಿ ಹೋದವರ ಲಿಸ್ಟ್‌ಗೆ ಸೇರಿಸಿದ ಯೂಟ್ಯೂಬರ್‌: ನಟಿ ಗರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts