More

    ಇಂದು ಭಾರತ ಬಂದ್‌- ಶಾಲಾ-ಕಾಲೇಜು, ಬಸ್‌, ಆಟೋಗಳು ಇರಲಿವೆಯಾ? ಸಂಚಾರದಲ್ಲಿ ಏನೇನು ಬದಲಾವಣೆ?

    ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೆಲವು ರೈತ ಸಂಘಟನೆಗಳು ಇಂದು ಸೋಮವಾರ ಭಾರತ ಬಂದ್‌ ಹಮ್ಮಿಕೊಂಡಿವೆ. ಇದರ ನಿಮಿತ್ತ ಜಾಥಾ ನಡೆಯಲಿರುವ ಕಾರಣದಿಂದ ಬೆಂಗಳೂರಿನಲ್ಲಿ ಕೆಲವೊಂದು ಮಾರ್ಗಗಳಲ್ಲಿನ ಸಂಚಾರವನ್ನು ಬದಲಾವಣೆ ಮಾಡಿ ಬೆಂಗಳೂರು ಪೊಲೀಸರು ಸುತ್ತೋಲೆ ಹೊರಡಿಸಿದ್ದಾರೆ.

    ಈ ಸುತ್ತೋಲೆ ಅನ್ವಯ ಮೆಜೆಸ್ಟಿಕ್, ಆನಂದ್ ರಾವ್ ವೃತ್ತ, ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ನಡೆಸುವುದನ್ನು ವಾಹನ ಸವಾರರು ಸಂಚಾರ ಮಾರ್ಗ ಬದಲಾವಣೆ ಇರಲಿದೆ.

    * ಕೆ. ಜಿ. ರಸ್ತೆಯಲ್ಲಿ ಹಲಸೂರು ಪೊಲೀಸ್ ಠಾಣೆ ಕಡೆಯಿಂದ ಬಂದು ಪೊಲೀಸ್ ಕಾರ್ನರ್‌ ಬಳಿ ಎಡ ತಿರುವು ಪಡೆದುಕೊಂಡು ಕೆ. ಜಿ. ರಸ್ತೆ ಕಡೆಗೆ ಸಾಗುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

    * ನೃಪತುಂಗ ರಸ್ತೆ ಮೂಲಕ ಬಂದು ಪೊಲೀಸ್ ಕಾರ್ನರ್ ಬಳಿ ಬಲ ತಿರುವು ಪಡೆದು ಕೆ. ಜಿ. ರಸ್ತೆ ಸಾಗುವ ಸಂಚಾರವನ್ನು ನಿಷೇಧಿಸಲಾಗಿದೆ.

    * ಪರ್ಯಾಯ ವ್ಯವಸ್ಥೆ; ಹಲಸೂರು ಗೇಟ್ ಪೊಲೀಸ್ ಠಾಣೆ ಕಡೆಯಿಂದ ಬಂದು ಪೊಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದುಕೊಂಡು ಕೆ. ಜಿ. ರಸ್ತೆ ಕಡೆಗೆ ಸಾಗುವ ವಾಹನಗಳು ಪೊಲೀಸ್ ಕಾರ್ನರ್ ವೃತ್ತದಿಂದ ನೇರವಾಗಿ ನೃಪತುಂಗ ರಸ್ತೆಗೆ ಪವೇಶ ತೆಗೆದುಕೊಂಡು ನೃಪತುಂಗ ರಸ್ತೆಯಲ್ಲಿ ಸಾಗಿ ಕೆ. ಆರ್. ವೃತ್ತ ತಲುಪಿ ಮುಂದುವರೆಯಲು ಅನುವು ಮಾಡಿಕೊಡಲಾಗಿದೆ.

    * ಕೆ. ಆರ್. ಸರ್ಕಲ್‌ನಿಂದ ನೃಪತುಂಗ ರಸ್ತೆಯಲ್ಲಿ ಬಂದು ಪೊಲೀಸ್ ಕಾರ್ನರ್ ಬಳಿ ಬಲ ತಿರುವು ಪಡೆದು ಕೆ. ಜಿ. ರಸ್ತೆಗೆ ಸಾಗುವ ಸಂಚಾರವನ್ನು ನಿಷೇಧಿಸಿರುವುದರಿಂದ ಕೆ. ಆರ್. ವೃತ್ತದಿಂದ ಶೇಷಾದ್ರಿ ರಸ್ತೆಯಲ್ಲಿ ಸಾಗಿ ಮುಂದುವರೆಯಲು ವ್ಯವಸ್ಥೆ ಮಾಡಲಾಗಿದೆ.

    ಎಲ್ಲರದ್ದೂ ನೈತಿಕ ಬೆಂಬಲಷ್ಟೇ

    ಕರೊನಾದಿಂದ ಕಂಗೆಟ್ಟು ಹೋಗಿರುವ ಯಾರಿಗೂ ಯಾವುದೇ ಬಂದ್‌ ಅರಗಿಸಿಕೊಳ್ಳುವ ಶಕ್ತಿಯೂ ಇಲ್ಲ. ಆದ್ದರಿಂದ ಬಂದ್‌ಗೆ ನೈತಿಕ ಬೆಂಬಲ ನೀಡುವುದಾಗಿ ಹೇಳಿರುವ ಬಹುತೇಕ ಸಂಘಟನೆಗಳು ತಮ್ಮ ಯಾವುದೇ ಕೆಲಸಕ್ಕೂ ಅಡಚಣೆ ಬರುವುದಿಲ್ಲ ಎಂದಿವೆ. ಆದ್ದರಿಂದ ಶಾಲಾ ಕಾಲೇಜು ಸೇರಿದಂತೆ ಎಲ್ಲವೂ ಮಾಮೂಲಿನಂತೆಯೇ ಕಾರ್ಯನಿರ್ವಹಿಸಲಿವೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳಲ್ಲಿ ಕೂಡ ಯಾವುದೇ ಬದಲಾವಣೆ ಇಲ್ಲ. 

    ಬಸ್‌, ರೈಲುಗಳನ್ನು ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಇದಾಗಲೇ ಹೇಳಿದ್ದರೂ, ಯಾವುದೇ ಸಾರಿಗೆ ಸಂಘಟನೆಗಳು ಭಾರತ ಬಂದ್‌ಗೆ ಬೆಂಬಲ ನೀಡಿಲ್ಲ. ಆದ್ದರಿಂದ ಸೋಮವಾರ ಎಂದಿನಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸಲಿವೆ. ಮೆಟ್ರೋ ಕೂಡ ಎಂದಿನಂತೆ ಇರಲಿವೆ.

    ’ಸಾರಿಗೆ ಸಂಸ್ಥೆ ಬಸ್‌ಗಳು ಎಂದಿನಂತೆ ಸಂಚಾರ ನಡೆಸಲಿವೆ. ಬಸ್ ಮತ್ತು ಸಂಸ್ಥೆಯ ಯಾವುದೇ ಆಸ್ತಿಗೆ ಹಾನಿಯಾಗದಂತೆ ಭದ್ರತೆ ಒದಗಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ಕೋರಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಮಾಹಿತಿ ನೀಡಿದ್ದಾರೆ. ಅದೇ ರೀತಿ ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ. ಹೆಚ್ಚಿನ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಯನ್ನು ಕೋರಲಿದ್ದೇವೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೇಳಿದ್ದಾರೆ.

    ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಸಂಪೂರ್ಣ ಬೆಂಬಲ ನೀಡದ ಕಾರಣ, ಹೋಟೆಲ್ ಓಪನ್ ಇರಲಿದೆ. ಲಾರಿ ಮಾಲೀಕರ ಸಂಘಟನೆ ನೈತಿಕ ಬೆಂಬಲ ನೀಡಿದ್ದು, ಎಂದಿನಂತೆ ಲಾರಿಗಳನ್ನು ರಸ್ತೆಗಿಳಿಸಲು ತೀರ್ಮಾನಿಸಿದೆ. ಅದೇ ರೀತಿ ಓಲಾ ಉಬರ್ ಸೇರಿ ಎಲ್ಲಾ ರೀತಿಯ ಟ್ಯಾಕ್ಸಿಗಳು ಸಂಚರಿಸಲಿವೆ. ಆಟೋ ಡ್ರೈವರ್ಸ್ ಯೂನಿಯನ್ ಮತ್ತು ಆಟೋ ಚಾಲಕರ ಸಂಘ, ಬೀದಿ ಬದಿ ವ್ಯಾಪಾರಿಗಳು ನೈತಿಕ ಬೆಂಬಲಕ್ಕಷ್ಟೇ ಸೀಮಿತವಾಗಿದ್ದು, ಎಲ್ಲವೂ ಎಂದಿನಂತೆ ಇರಲಿದೆ. ಶಾಲಾ- ಕಾಲೇಜುಗಳೂ ಮಾಮೂಲಿನಂತೆ ತೆರೆಯಲಿವೆ. ಬೆಂಗಳೂರು ವಕೀಲರ ಸಂಘಟನೆಯೂ ನೈತಿಕ ಬೆಂಬಲ ನೀಡಿದ್ದು, ಕೋರ್ಟ್‌ ಕಲಾಪಗಳು ನಡೆಯಲಿದೆ.

    ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಬಾಲಕ ತೇಜಸ್: ಕಣ್ಣೀರಲ್ಲಿ ಅಪ್ಪ-ಅಮ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts