More

  ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ರಾಮದುರ್ಗದ ಲಾರಿ ಚಾಲಕನ ದುರ್ಮರಣ- ನಾಲ್ವರಿಗೆ ಗಂಭೀರ ಗಾಯ

  ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿಯಲ್ಲಿ ಇಂದು ಬೆಳಂಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

  ಯರಗಟ್ಟಿಯ ಭೀರೇಶ್ವರ ಬ್ಯಾಂಕ್ ಎದುರಿನ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಕಾರೊಂದು ರಭಸವಾಗಿ ಗುದ್ದಿದ ಪರಿಣಾಮವಾಗಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ತಂದೆ-ಮಗ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

  ರಾಮದುರ್ಗ ತಾಲೂಕಿನ‌ ಹುಲಕುಂದ ಗ್ರಾಮದ ರಂಗಪ್ಪ ಗುರುಸಿದ್ದಪ್ಪ ಪಾಟೀಲ (30) ಮೃತಪಟ್ಟವರು. ಲಾರಿಯಲ್ಲಿದ್ದ ಸರಕಿಗೆ ಹಗ್ಗ ಕಟ್ಟಿ ರಂಗಪ್ಪ ಅವರು ಪ್ಯಾಕ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರಭಸದಿಂದ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

  ಕಾರಿನಲ್ಲಿದ್ದ ಅಮರೆಗೌಡ ಮಾಲಿಪಾಟೀಲ (58) ಗೌಡಪ್ಪಗೌಡ ಮಾಲಿಪಾಟೀಲ (25) ಗಾಯಗೊಂಡಿದ್ದಾರೆ. ವೀರಭದ್ರಗೌಡ ಡಬಿ (32), ಹನುಮಂತ ಬೆಟಗೇರಿ (23) ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದವರು.

  ಮಾಸಿಕ ಚೆಕ್‌ಅಪ್‌ಗೆ ಸಿಫ್ಟ್ ಕಾರಲ್ಲಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಕಾರಿನಲ್ಲಿ ತಂದೆ-ಮಗ ಬರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

  ರಾವಣನ ಬದಲು ಇಡಿ, ಸಿಬಿಐ ಪ್ರತಿಕೃತಿ ದಹಿಸಿದ ಕಾಂಗ್ರೆಸ್​: ಕೇಂದ್ರದ ವಿರುದ್ಧ ಕೈ ನಾಯಕರ ಕಿಡಿ

  PSI ನೇಮಕಾತಿ ಹಗರಣ: ಪೌಲ್​ ಹರಕೆಯ ಕುರಿ- ಕಿಂಗ್​ಪಿನ್​ ಮಾಜಿ ಸಿಎಂ ಪುತ್ರ ಯಾರು? ದಿನೇಶ್​ ಗುಂಡೂರಾವ್​ ಟ್ವೀಟ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts