More

    ಕೆಲಸಕ್ಕೆ ಅಡ್ಡಿಬಂತು ‘ನಿಯಮ ಉಲ್ಲಂಘನೆ’ ಗಡ್ಡ: ಸಬ್ ಇನ್ಸ್‌ಪೆಕ್ಟರ್ ಅಮಾನತು

    ಭಾಗ್​ಪತ್​ (ಉತ್ತರ ಪ್ರದೇಶದ): ಪೊಲೀಸ್​ ಇಲಾಖೆಯ ನಿಯಮವನ್ನು ಮೀರಿ ಗಡ್ಡ ಬೆಳೆಸಿಕೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಭಾಗ್​ಪತ್​ನ ಪೊಲೀಸ್​ ಸಬ್ ಇನ್ಸ್‌ಪೆಕ್ಟರ್ ಇಂಟೆಸರ್ ಅಲಿ ಅವರನ್ನು ಅಮಾನತುಗೊಳಿಸಲಾಗಿದೆ.

    ಕ್ಷೌರ ಮಾಡಲು ಅಥವಾ ಅದಕ್ಕೆ ಅಗತ್ಯವಾದ ಅನುಮತಿಯನ್ನು ಪಡೆಯಲು ಅಲಿಗೆ ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಇದರ ಹೊರತಾಗಿಯೂ ಅವರು ಗಡ್ಡವನ್ನು ಶೇವ್​ ಮಾಡಿರಲಿಲ್ಲ. ಪೊಲೀಸರ ನಿಯಮದಲ್ಲಿಯೇ ಗಡ್ಡದ ಬಗ್ಗೆ ಸ್ಪಷ್ಟವಾಗಿ ವಿವರಣೆ ನೀಡಲಾಗಿದೆ. ಈ ನಿಯಮಗಳ ಪಾಲನೆಯನ್ನು ಮಾಡುವುದಾಗಿ ಪೊಲೀಸ್​ ಕೆಲಸಕ್ಕೆ ಸೇರುವಾಗ ಪ್ರತಿಯೊಬ್ಬ ಪೊಲೀಸರೂ ನುಡಿದಿರುತ್ತಾರೆ.

    ಆದರೆ ಈ ನಿಯಮ ಉಲ್ಲಂಘನೆ ಆಗಿರುವ ಕಾರಣ, ಅವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್​ ಇಲಾಖೆ ಹೇಳಿದೆ. ಪೊಲೀಸ್ ಕೈಪಿಡಿಯ ಪ್ರಕಾರ ಸಿಖ್​ ಸಮುದಾದವರಿಗೆ ಮಾತ್ರ ಗಡ್ಡವನ್ನು ಇಟ್ಟುಕೊಳ್ಳಲು ಅವಕಾಶವಿದೆ. ಆದರೆ ಉಳಿದ ಎಲ್ಲ ಪೊಲೀಸರು ಸ್ವಚ್ಛವಾಗಿ ಸಂಪೂರ್ಣವಾಗಿ ಶೇವ್​ ಮಾಡಿಕೊಳ್ಳುವುದು ಕಡ್ಡಾಯ. ಅಲಿ ಅವರಿಗೆ ಇದಾಗಲೇ ಎಚ್ಚರಿಕೆ ಕೊಟ್ಟಿದ್ದರೂ ಅವರು ಅದನ್ನು ಪಾಲಿಸಿರಲಿಲ್ಲ ಎಂದು ಎಸ್‌ಪಿ ಅಭಿಷೇಕ್ ಸಿಂಗ್ ಹೇಳಿದ್ದಾರೆ.

    ಇದನ್ನೂ ಓದಿ: ತೆಲಂಗಾಣದ ಮೊದಲ ಗೃಹಸಚಿವ ರೆಡ್ಡಿ ನಿಧನ

    ಒಂದು ವೇಳೆ ಯಾವುದಾದರೂ ಕಾರಣಕ್ಕೆ ಗಡ್ಡ ಇಟ್ಟುಕೊಳ್ಳಲೇಬೇಕಾದ ಅಗತ್ಯ ಇದ್ದರೆ ಅದಕ್ಕೆ ಕೂಡ ಪೊಲೀಸ್​ ಇಲಾಖೆಯಲ್ಲಿ ಅವಕಾಶವಿದೆ. ಆದರೆ ಗಡ್ಡ ಬಿಡಲು ಸಕಾರಣ ನೀಡುವ ಮೂಲಕ, ಅದಕ್ಕೆ ಅನುಮತಿ ಪಡೆದುಕೊಳ್ಳಬೇಕು. ಆದರೆ ಅಲಿ ಅವರು ಎಚ್ಚರಿಕೆಯ ಹೊರತಾಗಿಯೂ ಅನುಮತಿಯನ್ನೂ ಪಡೆದಿರಲಿಲ್ಲ, ಆದರೆ ಗಡ್ಡ ಬೆಳೆಸಿಕೊಂಡಿದ್ದರು. ಆದ್ದರಿಂದ ಪೊಲೀಸ್​ ಇಲಾಖೆ ನಿಯಮದ ಪ್ರಕಾರ ಅವರನ್ನು ಅಮಾನತು ಮಾಡಲಾಗಿದೆ ಎಂದು ಸಿಂಗ್​ ಮಾಹಿತಿ ನೀಡಿದ್ದಾರೆ.

    ಈ ಕುರಿತು ಮಾಧ್ಯಮದವರ ಜತೆ ಮಾತನಾಡಿರುವ ಅಲಿ, ಗಡ್ಡವನ್ನು ಇಟ್ಟುಕೊಳ್ಳಲು ಅನುಮತಿ ಕೋರಿ ಈಗ ಅರ್ಜಿ ಸಲ್ಲಿಸಿದ್ದೇನೆ, ಸದ್ಯ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

    ಮೂರನೆಯ ಪತಿ ಜತೆಯೂ ಬಿರುಕು? ಗಂಡ ಸರಿಯಿಲ್ಲ ಎಂದು ಕಣ್ಣೀರಿಟ್ಟ ಬಿಗ್​ಬಾಸ್​ ಸ್ಪರ್ಧಿ, ನಟಿ

    ಬೆಂಗಳೂರಿನಲ್ಲಿ ಕೈ, ಕಮಲದ ಮಾರಾಮಾರಿ- ಆರೋಪ, ಪ್ರತ್ಯಾರೋಪ; ಪ್ರತಿಭಟನೆ

    ಅನಂತಪದ್ಮನಾಭನ ಗರ್ಭಗುಡಿಗೆ ಬಂದ ಮೊಸಳೆ: ಇದೊಂದು ಪವಾಡ ಎಂದ ಭಕ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts