More

    ಎಸ್‌ಬಿಐ ಸೇರಿದಂತೆ ಕೆಲವು ಬ್ಯಾಂಕ್‌ಗಳ ವಹಿವಾಟು ಬದಲಾವಣೆ: ಆನ್‌ಲೈನ್‌ ಹಣ ವರ್ಗಾವಣೆಗೆ ಶುಲ್ಕ

    ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೆಬ್ರುವರಿ 1ರಿಂದ ಅನ್ವಯ ಆಗುವಂತೆ ಆನ್‌ಲೈನ್‌ ಹಣದ ವರ್ಗಾವಣೆಯ ಕುರಿತಾಗಿ ಕೆಲವೊಂದು ಹೊಸ ನಿಯಮಗಳನ್ನು ಜಾರಿ ಮಾಡಿದೆ.

    ಈ ಕುರಿತಂತೆ ಬ್ಯಾಂಕ್‌ ಮಾರ್ಗಸೂಚಿ ಹೊರಡಿಸಿದೆ. ಇದರಲ್ಲಿ ಗ್ರಾಹಕರಿಗೆ ಖುಷಿಯ ಸುದ್ದಿಯ ಜತೆ ಸ್ವಲ್ಪ ಬೇಸರದ ಸುದ್ದಿಯೂ ಸೇರಿದೆ.

    ಅದೇನೆಂದರೆ ಇಲ್ಲಿಯವರೆಗೆ ಐಎಂಪಿಎಸ್ (IMPS-Immediate Payment Service) ಅಂದರೆ ನಾವು ಕಳುಹಿಸುವ ಹಣವು ಕೂಡಲೇ ಕಳುಹಿಸುವವರಿಗೆ ಸಿಗಬೇಕು ಎಂದರೆ ಒಂದು ಬಾರಿ ಎರಡು ಲಕ್ಷ ರೂಪಾಯಿಗಳನ್ನು ಮಾತ್ರ ಕಳಹಿಸಬಹುದಿತ್ತು. ಆದರೆ ಈ ಸೇವೆಯನ್ನು ಇದೀಗ ಐದು ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಂದರೆ ಒಂದೇ ಬಾರಿಗೆ ಜನರು ಐದು ಲಕ್ಷ ರೂಪಾಯಿಯವರೆಗೆ ತುರ್ತು ಹಣವನ್ನು ಕಳುಹಿಸಲು ಅವಕಾಶವಿದೆ.
    ಆದರೆ ಇದರ ನಡುವೆಯೇ ಗ್ರಾಹಕರಿಗೆ ಸ್ವಲ್ಪ ಹೊರೆ ಎನ್ನಿಸುವ ನಿಯಮವೂ ಜಾರಿಯಅಘಿದೆ. ಅದೇನೆಂದರೆ 2 ಲಕ್ಷ ರೂಪಾಯಿಯವರೆಗೆ ಐಎಂಪಿಎಸ್ ಹಣ ವರ್ಗಾವಣೆ ಮಾಡಲು ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಅದರೆ ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣ ಅಂದರೆ 5 ಲಕ್ಷ ರೂಪಾಯಿಯವರೆಗೆ ಹಣ ವರ್ಗಾವಣೆ ಮಾಡುವ ವ್ಯಕ್ತಿಗಳು 20 ರೂಪಾಯಿ ಹೆಚ್ಚುವರಿ ಜಿಎಸ್​​ಟಿಯನ್ನು ಪಾವತಿ ಮಾಡಬೇಕಾಗುತ್ತದೆ.

    ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮ ಬದಲಾವಣೆ ಮಾಡಿದೆ. ಫೆ.1ರಿಂದ ಅನ್ವಯ ಆಗುವಂತೆ ಇಎಂಐ ತುಂಬಲು ವಿಳಂಬವಾದರೆ ಅಥವಾ ಇಎಂಐ ಕಟ್ಟುವಷ್ಟು ಹಣ ಬ್ಯಾಲೆನ್ಸ್‌ ಇರದಿದ್ದರೆ ಅಂಥವರಿಗೆ 250 ರೂಪಾಯಿ ದಂಡ ವಿಧಿಸಲಾಗುವುದು. ಇಲ್ಲಿಯವರೆಗೆ ಈ ದಂಡದ ಮೊತ್ತ 100 ರೂ. ಇತ್ತು.

    ಬ್ಯಾಂಕ್ ಆಫ್ ಬರೋಡಾ ಕೂಡ ಕೆಲವೊಂದು ಬದಲಾವಣೆ ಮಾಡಿದೆ ಅದೇನೆಂದರೆ ಚೆಕ್‌ ಮೂಲಕ 10 ಲಕ್ಷ ರೂಗಿಂತ ಹೆಚ್ಚಿನ ವಹಿವಾಟು ನಡೆಸುವಾಗ ಧನಾತ್ಮಕ ಪಾವತಿ ದೃಢೀಕರಣ (Positive pay confirmation) ಅಗತ್ಯವಾಗಿದೆ. ಇದರ ಅರ್ಥ ಯಾರ ಹೆಸರಿಗೆ ಚೆಕ್‌ ಪಾವತಿ ಮಾಡಲಾಗುತ್ತದೆಯೋ ಅಂಥವರು ಇದು ತಮಗೇ ಬಂದಿರುವ ಹಣ ಎಂದು ದೃಢೀಕರಣ ಮಾಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts