More

    ಸೋಂಕಿತರನ್ನು ಮತಾಂತರಕ್ಕೆ ಪ್ರಯತ್ನಿಸಿ ಎಂದ ಐಎಎಂ ಅಧ್ಯಕ್ಷ! ಈತನ ಜನ್ಮ ಜಾಲಾಡಿ ಕೋರ್ಟ್‌ನಲ್ಲಿ ಕೇಸ್‌ ದಾಖಲು

    ನವದೆಹಲಿ: ಕೋವಿಡ್‌ ಸೋಂಕಿಗೆ ವೈಜ್ಞಾನಿಕ ಔಷಧ ಕಂಡುಹಿಡಿದು, ಕಾಳಸಂತೆಯಲ್ಲಿಯೂ ಅದನ್ನು ಖರೀದಿಸಲು ಮುಗಿಬೀಳುವ ಪರಿಸ್ಥಿತಿ ನಿರ್ಮಾಣವಾದ ನಂತರ ಆ ಔಷಧಗಳು ಪರಿಣಾಮಕಾರಿಯಲ್ಲ ಎಂದಿರುವ ಆಧುನಿಕ ವೈದ್ಯಕೀಯ ಪದ್ಧತಿ ವಿರುದ್ಧ ತಿರುಗಿಬಿದ್ದಿದ್ದ ಯೋಗ ಗುರು ಬಾಬಾ ರಾಮ್‌ದೇವ್‌ ಅಲೋಪಥಿಯನ್ನು ಮೂರ್ಖ ವಿಜ್ಞಾನ ಎಂದು ಹೇಳಿಕೆ ನೀಡಿಬಿಟ್ಟರು. ಈ ಹೇಳಿಕೆಯಿಂದಾಗಿ ಅಲೋಪಥಿ ವೈದ್ಯರು, ಕಾಂಗ್ರೆಸ್‌ ಮುಖಂಡರು ಸೇರಿದಂತೆ ಬಾಬಾ ರಾಮ್‌ದೇವ್‌ ವಿರೋಧಿಗಳು ಕಳೆದೆರಡು ವಾರಗಳಿಂದ ಇವರನ್ನು ಜೈಲಿಗೆ ಅಟ್ಟುವಂತೆ ಆಗ್ರಹ ಮಾಡುತ್ತಲೇ ಇದ್ದಾರೆ.

    ಅದರ ಬೆನ್ನಲ್ಲೇ ಭಾರತೀಯ ವಿಜ್ಞಾನ ಸಂಸ್ಥೆಯ (ಐಎಂಎ) ಅಧ್ಯಕ್ಷ ಜಾನ್ರೋಸ್‌ ಆಸ್ಟಿನ್ ಜಯಲಾಲ್ ಅವರು, ರಾಮ್‌ದೇವ್‌ ವಿರುದ್ಧ ಒಂದು ಸಾವಿರ ಕೋಟಿ ರೂಪಾಯಿ ಮಾನಹಾನಿ ಹಾಕಿದ್ದರು. ಕೊನೆಗೆ ಕೇಸ್‌ ವಾಪಸ್‌ ತೆಗೆದುಕೊಳ್ಳುವುದಾಗಿ ಹೇಳಿಕೆಯನ್ನೂ ನೀಡಿದರು. ಆದರೂ ಸುಮ್ಮನಿರದ ಕೆಲವು ಕಾನೂನು ತಜ್ಞರು ಹಾಗೂ ಬಾಬಾ ರಾಮ್‌ದೇವ್‌ ಅಭಿಮಾನಿಗಳು ಜಾನ್ರೋಸ್‌ ಜನ್ಮ ಜಾಲಾಡಿದ್ದಾರೆ. ಭಾರತೀಯ ಪುರಾತನ ವೈದ್ಯಕೀಯ ಪದ್ಧತಿಯಾಗಿರುವ ಆಯುರ್ವೇದ ವಿರುದ್ಧ ಈ ಅಧ್ಯಕ್ಷ ತಿರುಗಿ ಬೀಳುತ್ತಿರುವುದು ಏಕೆ ಎಂಬ ಆಳಕ್ಕೆ ಹೋಗಿರುವ ಅವರು ಇದೀಗ ಐಎಎಂ ಹಾಗೂ ಜಾನ್ರೋಸ್‌ ಕುರಿತಂತೆ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಎಲ್ಲಾ ದಾಖಲೆ ಇಟ್ಟುಕೊಂಡು ಜಾನ್ರೋಸ್‌ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಲೀಗಲ್‌ ರೈಟ್ಸ್‌ ಆಬ್‌ಸರ್ವೇಟರಿ ಸಂಸ್ಥೆಯ ವತಿಯಿಂದ ದೂರು ದಾಖಲು ಮಾಡಲಾಗಿದೆ.

    ಅಸಲಿಗೆ ಐಎಎಂ ಎಂದರೆ ಭಾರತ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ ಎಂದೇ ಅಂದುಕೊಂಡವರು ಹೆಚ್ಚು. ಆದರೆ ಕ್ರೈಸ್ತ ಮಷಿನರಿಗಳು ಸ್ವಾತಂತ್ರ್ಯಾಪೂರ್ವದಲ್ಲಿ ಅಂದರೆ 1928ರಲ್ಲಿ ಸ್ಥಾಪನೆ ಮಾಡಿರುವ ಸ್ವಯಂ ಸೇವಾ ಸಂಸ್ಥೆ ಇದು. ದೇಶದ ಅಲೋಪಥಿ ವೈದ್ಯರಿಗೆ ವಿವಿಧ ಸೌಲಭ್ಯ ನೀಡುವ ಉದ್ದೇಶದಿಂದ ಹುಟ್ಟಿಕೊಂಡಿರುವ ಎನ್‌ಜಿಒ ಇದಾಗಿದೆ. ಕಾನೂನಿನ ಆಳಕ್ಕೆ ಹೋದರೆ ಇದಕ್ಕೆ ಸಾಂವಿಧಾನಿಕವಾದ ಯಾವುದೇ ಮಾನ್ಯತೆ ಇರುವುದಿಲ್ಲ ಎನ್ನುವ ಆರೋಪವಿದೆ.

    ಇಷ್ಟೇ ಅಲ್ಲ ಜಾನ್ರೋಸ್‌ ಅವರು, ‘ಕ್ರಿಷ್ಚಿಯನ್‌ ಟುಡೇ‘ ಎಂಬ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಭಾರತದ ಬಗ್ಗೆ ಮಾತನಾಡಿರುವುದು ಕೂಡ ಸಾಕಷ್ಟು ವೈರಲ್‌ ಆಗಿದೆ. ಇದೇ ಕೇಂದ್ರ ಸರ್ಕಾರ ಭಾರತದಲ್ಲಿ ಇದ್ದರೆ, ಹಿಂದೂ ದೇಶವಾಗಿಬಿಡುತ್ತದೆ. ಒಂದು ದೇಶ, ಒಂದು ಧರ್ಮವಾಗಲು ನಾವು ಕೊಡಬಾರದು ಎಂದು ಈ ಸಂದರ್ಶನದಲ್ಲಿ ಜಾನ್ರೋಸ್‌ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಜತೆಗೆ, ಭಾರತದಲ್ಲಿ ಹೆಚ್ಚು ಹೆಚ್ಚು ಕ್ರೈಸ್ತ ಧರ್ಮೀಯ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು ಎಂದಿರುವುದೂ ಅಲ್ಲದೇ, ಚಿಕಿತ್ಸೆಗೆ ಬರುವ ಕರೊನಾ ಸೋಂಕಿತರ ಮನಸ್ಸನ್ನು ಪರಿವರ್ತಿಸಬೇಕು. ಏಸುವಿನಿಂದಲೇ ಅವರು ಗುಣಮುಖರಾಗುತ್ತಿದ್ದಾರೆ ಎನ್ನುವಂತೆ ಅವರ ಬ್ರೇನ್‌ವಾಷ್‌ ಮಾಡಬೇಕು ಎಂಬ ಹೇಳಿಕೆಯನ್ನೂ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆದ್ದರಿಂದ ಇದೀಗ ಇದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಇಟ್ಟುಕೊಂಡು ದೆಹಲಿಯ ದ್ವಾರಕಾ ಜಿಲ್ಲಾ ಕೋರ್ಟ್‌ಗೆ ಇವರ ವಿರುದ್ಧ ದೂರು ದಾಖಲಿಸಲಾಗಿದೆ.

    ಭಾರತದಲ್ಲಿ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯ ಹೆಸರಿನಲ್ಲಿ ಜಾನ್ರೋಸ್‌ ಅವರು ಪಡೆಯುತ್ತಿರುವ ಫಾರೆನ್‌ ಫಂಡ್‌ ಯಾವ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಅವರ ವೈದ್ಯಕೀಯ ಪರವಾನಗಿ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್‌, ಜಾನ್ರೋಸ್‌ಗೆ ಸಮನ್ಸ್‌ ಜಾರಿ ಮಾಡಿದ್ದು, ಖುದ್ದು ಹಾಜರಿಗೆ ಆದೇಶಿಸಿದೆ.

    ‘ಆಮೀರ್‌ಖಾನ್‌ ಎದುರು ಖ್ಯಾತ ವೈದ್ಯ ಬಿಚ್ಚಿಟ್ಟಿದ್ದಾರೆ ನೋಡಿ ಮೆಡಿಕಲ್‌ ಮಾಫಿಯಾ ರಹಸ್ಯ- ಈಗೇನ್‌ ಮಾಡ್ತೀರಾ?’

    ಮಗುವನ್ನು ದತ್ತು ಪಡೆದುಕೊಳ್ಳಲು ಪತಿಯ ಅನುಮತಿ ಬೇಕೇ ಬೇಕಾ? ಕಾನೂನು ಏನು ಹೇಳುತ್ತದೆ?

    ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿರ್ಬಂಧ: ಸೌದಿ ಅರೇಬಿಯಾದಿಂದ ಹೊರಟ ಸ್ಟ್ರಿಕ್ಟ್‌ ರೂಲ್ಸ್‌ ಇಲ್ಲಿದೆ…

    ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿರ್ಬಂಧ: ಸೌದಿ ಅರೇಬಿಯಾದಿಂದ ಹೊರಟ ಸ್ಟ್ರಿಕ್ಟ್‌ ರೂಲ್ಸ್‌ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts