More

    ಬಾಬಾ ರಾಮ್‌ದೇವ್‌ ಕೊರೊನಿಲ್‌ ಔಷಧಕ್ಕೆ ಬೇಡಿಕೆ- ಒಂದು ಲಕ್ಷ ಸೋಂಕಿತರಿಗೆ ಉಚಿತವಾಗಿ ಕಿಟ್ ವಿತರಣೆ

    ಹರಿಯಾಣ: ಕೋವಿಡ್‌ಗೆ ಹಲವಾರು ಔಷಧವನ್ನು ಮೊದಲು ಬಿಡುಗಡೆಮಾಡಿ ನಂತರ ನಂತರ ಆ ಔಷಧಗಳು ಅಷ್ಟು ಪರಿಣಾಮಕಾರಿಯಲ್ಲ ಎಂದು ವರದಿಯಾಗುತ್ತಿದ್ದಂತೆಯೇ ಅಲೋಪಥಿ ಈಸ್‌ ಸ್ಟುಪಿಡ್‌ ಸೈನ್ಸ್‌ (ಅಲೋಪಥಿ ಎನ್ನುವುದು ಮೂರ್ಖರ ವಿಜ್ಞಾನ) ಎಂದು ಬಾಬಾ ರಾಮ‌ದೇವ್‌ ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಗುರಿಯಾದರು. ನಂತರ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸೇರಿದಂತೆ ಇನ್ನಿತರರ ಭಾರಿ ಒತ್ತಡಕ್ಕೆ ಮಣಿದು ಅಲೋಪಥಿ ವೈದ್ಯರಲ್ಲಿ ಕ್ಷಮೆಯನ್ನೂ ಕೋರಿದರು.

    ಅದರ ಬೆನ್ನಲ್ಲೇ ಇದೀಗ ಬಾಬಾ ರಾಮ್‍ದೇವ್ ಅವರ ಪಂತಂಜಲಿ ಆಯುರ್ವೇದದ ಕೊರೊನಿಲ್ ಔಷಧಿಗೆ ಭಾರಿ ಬೇಡಿಕೆ ಬಂದಿದ್ದು, ಹರಿಯಾಣ ಸರ್ಕಾರ 1 ಲಕ್ಷ ಔಷಧಿಯ ಕಿಟ್‍ಗಳನ್ನು ಸೋಂಕಿತರಿಗೆ ಉಚಿತವಾಗಿ ಹಂಚಿದೆ. ಈ ಔಷಧ ಕರೊನಾ ಸೋಂಕನ್ನು ಗುಣಪಡಿಸುತ್ತದೆ ಎಂದು ರಾಮ್‌ದೇವ್‌ ಈ ಮೊದಲು ಹೇಳಿಕೆ ನೀಡಿ ಆಧುನಿಕ ವೈದ್ಯಕೀಯ ಲೋಕದ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದೀಗ ಈ ಕಿಟ್‌ ಉಚಿತವಾಗಿ ನೀಡಲಾಗುತ್ತಿದೆ.

    ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕರೊನಾ ಸೋಂಕಿತರು ಬೇಗ ಗುಣಮುಖರಾಗಲಿ ಎಂಬ ಉದ್ದೇಶದಿಂದ ಈ ಕಿಟ್‌ ವಿತರಣೆ ಮಾಡಲಾಗುತ್ತಿದೆ ಎಂದಿದ್ದಾಋಎ. ಈ ಕಿಟ್‍ಗಳ ಅರ್ಧದಷ್ಟು ವೆಚ್ಚವನ್ನು ಪತಂಜಲಿ ಹಾಗೂ ಉಳಿದ ಅರ್ಧ ವೆಚ್ಚವನ್ನು ಸರ್ಕಾರದ ‘ಕೋವಿಡ್ ರಿಲೀಫ್ ಫಂಡ್’ ನಿಂದ ಭರಿಸಲಾಗುತ್ತಿದೆ ಎಂಬುದಾಗಿ ಅನಿಲ್‌ ವಿಜ್‌ ಮಾಹಿತಿ ನೀಡಿದ್ದಾರೆ.

    ಕಿಟ್‍ನಲ್ಲಿ 3 ರೀತಿಯ ಔಷಧಿಗಳು ಇವೆ. ಅವುಗಳೆಂದರೆ ಕೊರೊನಿಲ್ ಮಾತ್ರೆಗಳು, ಸ್ವಾಸರಿ ವಾತಿ ಹಾಗೂ ಅನು ತೈಲ. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಹರಿಯಾಣದಲ್ಲಿ 8 ಜಿಲ್ಲೆಗಳಲ್ಲಿ ಪ್ರೆಷರ್ ಸ್ವಿಂಗ್ ಅಡಾಪ್ಷನ್‌ ಆಕ್ಸಿಜನ್ ಪ್ಲಾಂಟ್‍ಗಳನ್ನು ನಿರ್ಮಿಸಲಾಗುತ್ತಿದೆ. ಈ ಕೆಲಸವನ್ನು ಡಿಆರ್‌ಡಿಒಗೆ ವಹಿಸಿದ್ದು, ಜೂನ್ 30ರೊಳಗೆ ಕೆಲಸ ಪೂರ್ಣಗೊಳ್ಳಲಿದೆ ಎಂಬ ಮಾಹಿತಿಯನ್ನು ಅವರು ನೀಡಿದರು.

    ಸೈಡ್‌ ಎಫೆಕ್ಟು ಇಲ್ದೇ ಸಹಸ್ರಾರು ಮಂದಿ ಜೀವ ಉಳಿಸಿರೋ ಔಷಧಿಗೆ ಏಕೆ ಅಡ್ಡಗಾಲು? ಜಾಲತಾಣದಲ್ಲಿ ಆಕ್ರೋಶ

    ವೀರಪ್ಪನ್ ಹಾರಿಸಿದ್ದ ಗುಂಡುಗಳನ್ನು ತಲೆಯಲ್ಲಿಟ್ಟುಕೊಂಡೇ 29 ವರ್ಷ ಸೇವಾ ನಿರತರಾಗಿದ್ದ ಪಿಎಸ್‌ಐ ನಿಧನ

    ಹೆಣ್ಣುಮಕ್ಕಳಿಗೆ ತವರಿನಿಂದ ಬಂದಿರುವ ಆಸ್ತಿಯಲ್ಲಿ ಯಾರ‍್ಯಾರಿಗೆ ಪಾಲಿದೆ- ಕಾನೂನು ಹೇಳುವುದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts