More

    ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ‘ಅಟಲ್’ ಇಂದು​ ಸಂಪೂರ್ಣ: ಏನಿದರ ವಿಶೇಷತೆ?

    ಮನಾಲಿ (ಹಿಮಾಚಲಪ್ರದೇಶ): ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿರುವ ‘ಅಟಲ್​ ಸುರಂಗ’ ಕಾಮಗಾರಿ ಇಂದು ಸಂಪೂರ್ಣಗೊಂಡಿದೆ. ಮನಾಲಿಯನ್ನು ಲೇಹ್‌ನೊಂದಿಗೆ ಸಂಪರ್ಕಿಸುವ ಸುರಂಗ ಇದಾಗಿದೆ.

    2000ರ ಜೂನ್‌ 3ರಂದು ವಾಜಪೇಯಿ ಪ್ರಧಾನಿಯಾಗಿದ್ದಾಗ 8.8 ಕಿ.ಮೀ. ಉದ್ದದ ಐತಿಹಾಸಿಕ ಸುರಂಗ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 2019ರ ಡಿಸೆಂಬರ್​ 25ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ಸುರಂಗ ಮಾರ್ಗಕ್ಕೆ ವಾಜಪೇಯಿ ಹೆಸರಿಡಲು ನಿರ್ಧರಿಸಲಾಗಿತ್ತು.

    ಆರು ವರ್ಷಗಳಲ್ಲಿ ಸುರಂಗ ಕಾಮಗಾರಿ ಮುಗಿಯಬೇಕಿತ್ತು. ಆದರೆ ಕೆಲವು ಕಾರಣಗಳಿಂದ 10 ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ನಿರ್ಮಾಣ ಹಂತದಲ್ಲಿದ್ದಾಗ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಒಗ್ಗಟ್ಟಿನಿಂದ ನಾವು ಅದರ ನಿರ್ಮಾಣವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಮುಖ್ಯ ಇಂಜಿನಿಯರ್ ಕೆ.ಪಿ. ಪುರುಷೋತ್ತಮನ್ ಹೇಳಿದ್ದಾರೆ.

    ಇದನ್ನೂ ಓದಿ: ಫೇಸ್​ಬುಕ್​ ರಹಸ್ಯ ಬಯಲುಮಾಡಿದ ಮಾಜಿ ಉದ್ಯೋಗಿ: ಚುನಾವಣೆಯ ಗುಟ್ಟು ಬಹಿರಂಗ

    ಸುರಂಗದ ವಿಶೇಷತೆ ಏನು?
    ಮನಾಲಿಯನ್ನು ಲೇಹ್‌ಗೆ ಸಂಪರ್ಕಿಸುವ 9.2 ಕಿ.ಮೀ ಸುರಂಗ ಇದಾಗಿದೆ. ಪ್ರತಿ 60 ಮೀಟರ್‌ಗೆ ಸಿಸಿಟಿವಿ ಕ್ಯಾಮರಾಗಳು ಹಾಗೂ ಸುರಂಗದ ಒಳಗೆ ಪ್ರತಿ 500 ಮೀಟರ್ ಗೆ ತುರ್ತು ನಿರ್ಗಮನ ಸುರಂಗಗಳಿವೆ. ಸುರಂಗವು ಮನಾಲಿ ಹಾಗೂ ಲೇಹ್ ನಡುವಿನ ಅಂತರವನ್ನು 46 ಕಿಲೋ ಮೀಟರ್‌ಗಳಷ್ಟು ಕಡಿಮೆ ಮಾಡುತ್ತದೆ ಹಾಗೂ ನಾಲ್ಕು ಗಂಟೆಗಳ ಉಳಿತಾಯ ಮಾಡಬಹುದಾಗಿದೆ.

    ಬೆಂಕಿ ಅವಘಡ ಸಂಭವಿಸಿದಲ್ಲಿ ಉಪಯೋಗಕ್ಕೆ ಬರುವ ಫೈಯರ್ ಹೈ ಡ್ರಾಂಟ್‌ಗಳನ್ನು ಸುರಂಗದೊಳಗೆ ಸ್ಥಾಪಿಸಲಾಗಿದೆ. ಸುರಂಗದ ಅಗಲವು 10.5 ಮೀಟರ್, ಇದರಲ್ಲಿ ಎರಡೂ ಕಡೆಯಲ್ಲಿನ 1 ಮೀಟರ್‌ನ ಫುಟ್‌ಪಾತ್ ಕೂಡ ಸೇರಿದೆ.

    ಬಲವಂತದ ಮದುವೆಯ ಧಿಕ್ಕರಿಸಿ ಮನೆಬಿಟ್ಟು ಬಂದಾಕೆ ಈಗ ಮಾದರಿ ಹೆಣ್ಣು…

    ಗನ್​ ತೋರಿಸಿ ಬಹಳ ಸಲ ಗ್ಯಾಂಗ್​ರೇಪ್:​ ಬಿಜೆಪಿ ಮುಖಂಡನ ವಿರುದ್ಧ ವಿದ್ಯಾರ್ಥಿನಿಯಿಂದ ದೂರು!

    ಕಳೆದು ಹೋದ ಫೋನ್​ ಸಿಕ್ಕಾಗ ಅದರಲ್ಲಿತ್ತು ಭಯಾನಕ ಸೆಲ್ಫಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts