More

    ಸಂಪೂರ್ಣ ನೀರಾವರಿ ನನ್ನ ಗುರಿ

    ಅಥಣಿ ಗ್ರಾಮೀಣ: ಅಥಣಿ ಮತಕ್ಷೇತ್ರ ಸಂಪೂರ್ಣ ನೀರಾವರಿಗೆ ಒಳಪಡಿಸುವುದೇ ನನ್ನ ಗುರಿಯಾಗಿದ್ದು, ಚುನಾವಣೆಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ನೀರಾವರಿ ವಂಚಿತ 7 ಗ್ರಾಮಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

    ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಅಪ್ಪಯ್ಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ 15 ಲಕ್ಷ ರೂ. ವೆಚ್ಚದ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಿ, ಸತ್ಕಾರ ಸ್ವೀಕರಿಸಿ ಮಾತನಾಡಿದರು. ರೈತರ ಸ್ವಾವಲಂಬಿ ಬದುಕಿಗೆ ನೀರು ಅವಶ್ಯವಾಗಿದೆ.

    ನೀರಾವರಿ ಯೋಜನೆ ಕೈಗೆತ್ತಿಗೊಳ್ಳುವ ಜತೆಗೆ ಕೃಷಿ ಕಾಲೇಜು ನಿರ್ಮಾಣ ಕಾಮಗಾರಿಗೆ ಬೇಕಾದ ಅನುದಾನ ಮಂಜೂರು ಮಾಡಿಸಲು ಶೀಘ್ರ ಮುಖ್ಯಮಂತ್ರಿ ಹಾಗೂ ನೀರಾವರಿ, ಕೃಷಿ ಮಂತ್ರಿಗಳಿಗೆ ಭೇಟಿಯಾಗಿ ಕೆಲಸ ಮುಂದುವರಿಸುವೆ. ಬೆಳಗಾವಿ ಚಳಿಗಾಲ ಅಧಿವೇಶನ ಸುಸೂತ್ರವಾಗಿ ನಡೆಯಲಿದ್ದು, ಸಿದ್ದರಾಮಯ್ಯನವರ ಸರ್ಕಾರದ ಅನ್ನಭಾಗ್ಯ, ಗಹಜ್ಯೋತಿ, ಗಹಲಕ್ಷ್ಮೀ ಬಡವರ ಪಾಲಿಗೆ ವರದಾನವಾಗಿವೆ ಎಂದರು.

    ಕೆಪಿಸಿಸಿ ಸದಸ್ಯ ಶ್ಯಾಮರಾವ ಪೂಜಾರಿ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಅವರ ದೂರದೃಷ್ಟಿ, ಕಾರ್ಯವೈಖರಿ ಹಾಗೂ ಮಾತಿನ ಶೈಲಿ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದರು. ಜಿಪಂ ಎಇಇ ಈರಣ್ಣ ವಾಲಿ, ಅಭಿಯಂತ ಅನಿಲ ಪವಾರ, ಮುಖಂಡರಾದ ಸುಭಾಷ ಸೋನಕರ, ಶಿವನಿಂಗ ಧಡಕೆ, ಅಶೋಕ ಸಿದ್ಧಣ್ಣವರ, ತಮ್ಮಣ್ಣ ಮಗರ, ಮಾರುತಿ ಕುಂಬಾರ, ಮಹಾದೇವ ಚವ್ಹಾಣ, ಯಶವಂತ ಪೋಳ, ಸಂತೋಷ ಔರಸಂಗ, ವೀರೇಂದ್ರ ಹಳಕಿ, ಮಲ್ಲಿಕಾರ್ಜುನ ಪರಾಂಡೆ, ಸುರೇಶ ಪೂಜಾರಿ, ಪ್ರವೀಣ ಪಾಟಣಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts