More

    ಸೂರ್ಯ, ಚಂದ್ರನ ಬಳಿಕ ಕೃತಕ ‘ಮಿನಿ ಮೂನ್‌’ ಸೃಷ್ಟಿಸಿ ಬೆರಗುಗೊಳಿಸಿದ ಚೀನಾ

    ಬೀಜಿಂಗ್: ಸದಾ ಹೊಸತನ್ನು ರೂಪಿಸುವಲ್ಲಿ ಉತ್ಸುಕವಾಗಿರುವ ಚೀನಾ, ಈಗ ಎಲ್ಲರೂ ಅಚ್ಚರಿಗೊಳ್ಳುವಂಥ ಸಂಶೋಧನೆಯೊಂದನ್ನು ಮಾಡಿದೆ ಅದೇನೆಂದರೆ ಕೃತಕ ಮಿನಿ ಚಂದ್ರನನ್ನು ನಿರ್ಮಿಸಿದೆ. ಎರಡು ವರ್ಷಗಳ ಹಿಂದೆ ಕೃತಕ ಚಂದ್ರ ನಂತರ ಕೆಲ ತಿಂಗಳ ಹಿಂದೆ ಎಕ್ಸ್‌ಪೀರಿಯೆನ್ಷಿಯಲ್ ಅಡ್ವಾನ್ಸ್‌ಡ್ ಸೂಪರ್‌ಕಂಡಕ್ಟಿಂಗ್ ಟೋಕಾಮಾಕ್ (ಈಸ್ಟ್) ಎಂದು ಕರೆಯುವ ಕೃತಕ ಸೂರ್ಯನನ್ನು ಸೃಷ್ಟಿಸಿ ಜಗತ್ತನ್ನು ಬೆರಗುಗೊಳಿಸಿದ್ದ ಚೀನಾ ಇದೀಗ ಮಿನಿ ಚಂದ್ರನನ್ನು ಸೃಷ್ಟಿಸಿದೆ.

    ಕೃತಕ ಸೂರ್ಯ ನೈಜ ಸೂರ್ಯನಿಗಿಂತ 5 ಪಟ್ಟು ಹೆಚ್ಚು ಶಕ್ತಿಶಾಲಿ ಎನ್ನುವುದನ್ನು ಕಂಡುಹಿಡಿದಿದ್ದ ಚೀನಾ, ಅದೇ ದಿಕ್ಕಿನಲ್ಲಿ ಮುಂದಕ್ಕೆ ಸಾಗಿ ಚಂದ್ರನ ನಿರ್ಮಾಣ ಮಾಡಿದೆ. ಭೂಮಿಯ ಮೇಲೆ ಚಂದ್ರನ ಪರಿಸರವನ್ನು ಅನುಕರಿಸಲು ಬಾಹ್ಯಾಕಾಶ ಯಾನಿಗಳಿಗೆ ತರಬೇತಿ ನೀಡಲು ಈ ಚಂದ್ರ ಉಪಯುಕ್ತವಾಗಲಿದೆ ಎಂದು ಚೀನಾ ಹೇಳಿದೆ. ಜಿಯಾಂಗ್ಸು ಪ್ರಾಂತ್ಯದ ಕುಝೌನಲ್ಲಿರುವ ಈ ಹೊಸ ಸೌಲಭ್ಯ ವಿಶ್ವದಲ್ಲಿಯೇ ಮೊದಲನೆಯದಾಗಿದೆ.

    ಏನಿದರ ವಿಶೇಷತೆ?

    ಈ ಮೊದಲು ಕೂಡ ಕೃತಕ ಚಂದ್ರನ ಚೀನಾ ಸೃಷ್ಟಿಸಿತ್ತು. ಇದೀಗ ಹೊಸರೂಪದಲ್ಲಿ ಮಿನಿ ಚಂದ್ರನನ್ನು ಅದು ಸೃಷ್ಟಿಸಿದೆ. ಚೀನಾ ನಿರ್ಮಿಸಿರುವ ಈ ಮಿನಿ ಚಂದ್ರನು ಸುಮಾರು 2 ಅಡಿ ವ್ಯಾಸ ಹೊಂದಿದ್ದಾನೆ. ಮೂಲ ಚಂದ್ರನಂತೆ ಕೃತಕ ಮೇಲ್ಮೈಯನ್ನು ರಚಿಸಲು ಹಗುರವಾದ ಕಲ್ಲು ಮತ್ತು ಧೂಳಿನಿಂದ ಮಾಡಲಾಗಿದೆ. ಈ ಚಂದ್ರನಲ್ಲಿ ಗುರುತ್ವಾಕರ್ಷಣೆಯನ್ನೂ ಕಡಿಮೆ ಮಾಡಿರುವುದು ವಿಶೇಷವಾಗಿದೆ,

    ಈ ಕುರಿತು ಮಾತನಾಡಿರುವ ಯುನಿವರ್ಸಿಟಿ ಆಫ್ ಮೈನಿಂಗ್ ಆಂಡ್ ಟೆಕ್ನಾಲಜಿಯ ಲೀ ರುಯಿಲಿನ್ , ವಿಮಾನ ಅಥವಾ ಡ್ರಾಪ್ ಟವರ್‌ಗಳಲ್ಲಿ ಕಡಿಮೆ ಗುರುತ್ವಾಕರ್ಷಣೆಯ ವಾತಾವರಣವನ್ನು ಸೃಷ್ಟಿಸಬಹುದು. ಆದರೆ ಅದು ಕೇವಲ ಕ್ಷಣಿಕವಾಗಿರುತ್ತದೆ. ಈ ಚಂದ್ರನಲ್ಲಿ ಬೇಕಾದಷ್ಟು ಸಮಯ ಕಡಿಮೆ ಗುರುತ್ವಾಕರ್ಷಣೆಯ ಅನುಭವ ಪಡೆಯಬಹುದು ಎಂದು ಹೇಳಿದ್ದಾರೆ.

    ಚಂದ್ರನ ಮೇಲಿನ ಗುರುತ್ವಾಕರ್ಷಣೆ ಸಂಪೂರ್ಣ ಶೂನ್ಯವಲ್ಲ. ಇದು ಭೂಮಿಯ ಗುರುತ್ವಾಕರ್ಷಣೆಯ ಆರನೇ ಒಂದು ಭಾಗದಷ್ಟು ಹೊಂದಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಂದಹಾಗೆ ಚೀನಾ 2030ರ ಹೊತ್ತಿಗೆ ಚಂದ್ರನೆಡೆಗೆ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆ ನಡೆಸಿದೆ.

    VIDEO: ಆನ್‌ಲೈನ್‌ ಮದ್ವೆ ಹಳೆಯದಾಯ್ತು- ಈಗ ಬಂತು ಮೆಟಾವರ್ಸ್: ಭಾರತದ ಪ್ರಪ್ರಥಮ ವಿವಾಹ ಇಲ್ಲಿದೆ ನೋಡಿ…

    ಭಾರತಕ್ಕಿಂತ ನಾವೇ ಮೇಲು ಎಂದಿದ್ದ ಪಾಕ್‌ ಪ್ರಧಾನಿಗೆ ಭಾರಿ ಮುಖಭಂಗ! ‘ಅಂತಾರಾಷ್ಟ್ರೀಯ ಭಿಕ್ಷುಕ’ ಪಟ್ಟಿಗೆ ಸೇರಿದ ಇಮ್ರಾನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts