More

    VIDEO: ಆನ್‌ಲೈನ್‌ ಮದ್ವೆ ಹಳೆಯದಾಯ್ತು- ಈಗ ಬಂತು ಮೆಟಾವರ್ಸ್: ಭಾರತದ ಪ್ರಪ್ರಥಮ ವಿವಾಹ ಇಲ್ಲಿದೆ ನೋಡಿ…

    ಚೆನ್ನೈ: ಆನ್‌ಲೈನ್‌, ವರ್ಚುವಲ್‌ ಮದುವೆಗಳು ಕರೊನಾದ ಈ ಅವಧಿಯಲ್ಲಿ ಸಾಕಷ್ಟು ಹೆಸರು ಮಾಡಿಬಿಟ್ಟಿವೆ. ಯಾವುದೇ ದೇಶದಲ್ಲಿ ಇದ್ದವರು ವಿಡಿಯೋ ಕಾಲ್‌ ಮೂಲಕ ಇನ್ನೆಲ್ಲೋ ಇರುವವರ ಮದುವೆಯನ್ನು ಸವಿಯಬಹುದಾಗಿದೆ. ಆದರೆ ತಂತ್ರಜ್ಞಾನ ಹಳೆಯದಾದಂತೆ ಜನರು ಇನ್ನಷ್ಟು ಹೊಸತನಕ್ಕೆ ಹೋಗುವುದು ಮಾಮೂಲು ಅಲ್ಲವೆ?

    ಅದೇ ಕಾರಣಕ್ಕೆ ಈಗ ಬಂದಿದೆ ಮೆಟಾವರ್ಸ್. ತಮಿಳುನಾಡಿನಲ್ಲಿ ಕೃಷ್ಣಗಿರಿ ಜಿಲ್ಲೆಯ ಶಿವಲಿಂಗಪುರಂನ ಮದುಮಕ್ಕಳು ಇದೀಗ ಮೆಟಾವರ್ಸ್‌ ಮೂಲಕ ದಾಂಪತ್ಯಜೀವನಕ್ಕೆ ಕಾಲಿಡುತ್ತಿದ್ದು, ಆ ಬಗ್ಗೆ ಇನ್ವಿಟೇಷನ್‌ ಕಳುಹಿಸಿದ್ದಾರೆ. ಇದು ಭಾರತದಲ್ಲಿಯೇ ಪ್ರಪ್ರಥಮ ಪ್ರಯೋಗ ಎನ್ನಲಾಗಿದ್ದು, ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಶುರುವಾಗಿದೆ.

    ಭಾವಿ ವರ ದಿನೇಶ್ ಈ ಕುರಿತು ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮೆಟಾವರ್ಸ್ ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದೇನೆ. ಸ್ಟಾರ್ಟ್‌ಅಪ್‌ನ ಸಹಯೋಗದೊಂದಿಗೆ ಈ ವಿಭಿನ್ನ ವಿವಾಹ ನಡೆಯಲಿದೆ. ಭಾರತದ ಮೊದಲ ಮೆಟಾವರ್ಸ್ ಟೆಕ್ನಾಲಜಿಯ ಸಹಾಯದೊಂದಿಗೆ ವಿವಾಹವಾಗುತ್ತಿರುವುದಕ್ಕೆ ನನಗೆ ಹೆಮ್ಮೆಯೆಸುತ್ತಿದೆ ಎಂದಿದ್ದಾರೆ.


    ಏನಿದು ಮೆಟಾವರ್ಸ್‌?

    ತ್ರಿಡಿ ತಂತ್ರಜ್ಞಾನದ ಮೂಲಕ ಸಮಾರಂಭವನ್ನು ವೀಕ್ಷಿಸುವ ಪರಿ ಇದು. ಸದ್ಯ ಈ ಜೋಡಿ ವಿವಾಹ ಸಮಾರಂಭ ನಂತರ ನಡೆಯುವ ಆರತಕ್ಷತೆ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಇರುವ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಮೆಟಾವರ್ಸ್‌ ಮೂಲಕ ನೀಡುತ್ತಿದ್ದಾರೆ.

    ಇದು ವಿಡಿಯೋ ಕಾನ್ಫರೆನ್ಸ್​ಗಿಂತ ತುಂಬಾ ಭಿನ್ನವಾಗಿದ್ದು, ಆನ್​ಲೈನ್​ನಲ್ಲೇ ಬೇರೊಬ್ಬರೊಡನೆ ಸಂಭಾಷಣೆಯನ್ನು ನಡೆಸಬಹುದಾಗಿದೆ.

    ಹ್ಯಾರಿ ಪಾಟರ್ ಕಥೆಗಳಲ್ಲಿರುವಂತೆ ದೊಡ್ಡ ಕಟ್ಟಡಗಳನ್ನು ಡಿಜಿಟಲ್​ ಮೂಲಕ ಸೃಷ್ಟಿಸಿ, ಆ ಸ್ಥಳದಲ್ಲಿ ಆರತಕ್ಷತೆ ನಡೆಸಲಾಗುತ್ತದೆ. ಹಾಗ್ವಾರ್ಟ್ಸ್ ಸ್ಕೂಲ್ ಆಫ್ ವಿಚ್‌ಕ್ರಾಫ್ಟ್ ಆ್ಯಂಡ್‌ ವಿಝಾರ್ಡ್ರಿ (Hogwarts School of Witchcraft and Wizardry) ಮೆಟಾವರ್ಸ್ ಆರತಕ್ಷತೆಗೆ ಎಲ್ಲಾ ಸಿದ್ಧತೆ ನಡೆಸುತ್ತಿವೆ.

    ಇಲ್ಲಿದೆ ನೋಡಿ ಇನ್ವಿಟೇಷನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts