More

    ಹುಡುಗನಾಗಿದ್ದರೂ, ಹುಡುಗರನ್ನು ಕಂಡರೆ ಏನೇನೋ ಆಸೆ ಹುಟ್ಟುತ್ತಿದೆ: ಪ್ಲೀಸ್​ ಪರಿಹಾರ ಹೇಳಿ…

    ಹುಡುಗನಾಗಿದ್ದರೂ, ಹುಡುಗರನ್ನು ಕಂಡರೆ ಏನೇನೋ ಆಸೆ ಹುಟ್ಟುತ್ತಿದೆ: ಪ್ಲೀಸ್​ ಪರಿಹಾರ ಹೇಳಿ... ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನನಗೆ ಮಾನಸಿಕವಾಗಿ ತುಂಬ ಕಿರಿಕಿರಿಯೆನಿಸುತ್ತಿದೆ. ನಾನು ಗಂಡಸಾದರೂ ಒಳಗೆ ಹೆಣ್ಣುಮಕ್ಕಳ ಗುಣವಿದೆ. ಬರೆ ಹೆಣ್ಣುಮಕ್ಕಳಂತೆ ತಯಾರಾಗಬೇಕು, ಅವರಿಗಿಂತ ಚೆನ್ನಾಗಿ ಕಾಣಬೇಕು ಅನಿಸುತ್ತದೆ. ಏಕೋ ಏನೋ ಹುಡುಗರನ್ನು ನೋಡಿದರೆ ಸೆಕ್ಸ್ ಮಾಡಬೇಕು ಅನಿಸುತ್ತದೆ. ಯಾಕೆ ಹೀಗೆ ಆಗುತ್ತದೆ? ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ.

    ಉತ್ತರ: ನಿಮ್ಮ ಮನಸ್ಸು ಹೆಣ್ಣು, ದೇಹ ಗಂಡಿನದ್ದು ಎಂದಿರುವಿರಿ. ನಿಮ್ಮ ಆಲೋಚನಾ ಕ್ರಮ, ವಸuಉಧಾರಣೆ ಎಲ್ಲವೂ ಹೆಣ್ಣಿನ ರೀತಿಯಲ್ಲೇ ಇದೆ ಎಂದಿರುವಿರಿ. ಈ ವಿಷಯವನ್ನು ಮನಸಲ್ಲೇ ಇಟ್ಟುಕೊಂಡು ಕೊರಗದೆ ನಿಮ್ಮ ಅಪ್ಪ, ಅಮ್ಮನ ಬಳಿ ವಿಷಯ ತಿಳಿಸಿ. ಒಬ್ಬ ಮನೋವೈದ್ಯರು, ಎಂಡೋಕ್ರೈನಾಲಾಜಿಸ್ಟರನ್ನು ಭೇಟಿಯಾಗಿ ಸಲಹೆ, ಚಿಕಿತ್ಸೆ ಪಡೆಯಿರಿ.

    ಶಸ್ತ್ರಚಿಕಿತ್ಸೆ ಮುಖಾಂತರ ಲಿಂಗ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಸಂಪೂರ್ಣವಾಗಿ ದೈಹಿಕವಾಗಿ ಮಹಿಳೆಯಾಗಲು ಸಾಧ್ಯವಿಲ್ಲವಾದರೂ ಸ್ವಲ್ಪಮಟ್ಟಿಗೆ ಸಾಧ್ಯವಾಗುತ್ತದೆ. ನಂತರ ನಿಮಗೆ ಇಷ್ಟಬಂದ ಹಾಗೆ ಇರಬಹುದು. ಆದರೆ ಅದಕ್ಕೆ ಬಹಳಷ್ಟು ಮಾನಸಿಕ ಸಿದ್ಧತೆ ಬೇಕು. ಮನೋವೈದ್ಯರ ಬಳಿ ಕೌನ್ಸೆಲಿಂಗ್ ಬೇಕೇಬೇಕು.

    ಡಾ.ವಸುಂಧರಾ ಭೂಪತಿಯವರ ಇನ್ನೂ ಹೆಚ್ಚಿನ ಸಲಹೆಗೆ http://vijayavani.net ಆರೋಗ್ಯ ಅಂಕಣ ನೋಡಿ

    ಪತ್ನಿ ದೈಹಿಕವಾಗಿ ಸಹಕರಿಸುತ್ತಿಲ್ಲವೆಂದು ನಾನೇ ‘ಟೂ ಪೀಸ್’​ ಧರಿಸುತ್ತಿದ್ದೇನೆ- ಇದು ತಪ್ಪಾ?

    ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

    ತುಟಿ ಸದಾ ಒಣಗಿ ಕಪ್ಪು ಕಲೆಯಾಗುತ್ತದೆ- ಮನೆಮದ್ದು ಏನಾದರೂ ಇದೆಯೆ?

    ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?

    ಶೀಲಗೆಟ್ಟರೂ ಅಡ್ಡಿಲ್ಲ, ಮಗುಬೇಕೆಂದು ನಿಮ್ಮನ್ನು ಬಳಸಿಕೊಂಡಳಾಕೆ- ನೀವು ಚಿಂತಿಸಿ ಪ್ರಯೋಜನವಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts