More

    ಅಮೆಜಾನ್ ಸಂಸ್ಥಾಪಕನ ಜತೆ ಬಾಹ್ಯಾಕಾಶ ಪ್ರವಾಸಕ್ಕೆ ಹೋಗಲು ಈತ ಕೊಟ್ಟಿದ್ದು 205 ಕೋಟಿ ರೂ!

    ವಾಷಿಂಗ್ಟನ್: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಅವರ ಬ್ಲ್ಯೂ ಒರಿಜಿನ್ ಕಂಪನಿಯು ಬಾಹ್ಯಾಕಾಶಕ್ಕೆ ಪ್ರವಾಸ ಯೋಜನೆಯನ್ನು ಹಮ್ಮಿಕೊಂಡಿದೆ. ಇದರ ಟಿಕೆಟ್‌ ಬುಕಿಂಗ್‌ ಆರಂಭವಾಗಿದೆ.

    ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲು ವ್ಯಕ್ತಿಯೊಬ್ಬರು 28 ದಶಲಕ್ಷ ಡಾಲರ್‌ ನೀಡುವ ಮೂಲಕ ಬಿಡ್‌ ಗೆದ್ದಿದ್ದಾರೆ. ಇದರ ಮೊತ್ತ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 205 ಕೋಟಿ ರೂಪಾಯಿಗಳು! ಈತ ಯಾರು ಎಂಬ ಬಗ್ಗೆ ಮಾಹಿತಿಯನ್ನು ಇನ್ನೂ ಬಹಿರಂಗಗೊಳಿಸಲಿಲ್ಲ.

    ಅಂದ ಹಾಗೆ ಸದ್ಯ ಈತನದ್ದೇ ಹೆಚ್ಚು ಬಿಡ್‌ ಆಗಿದ್ದು ಜೆಫ್ ಬೆಜೋಸ್ ಜತೆ ಬಾಹ್ಯಾಕಾಶಕ್ಕೆ ಆತ ಹೋಗಲಿದ್ದಾನೆ. ಅಮೆರಿಕ ಗಗನಯಾತ್ರಿಗಳಾದ ನೀಲ್ ಅರ್ಮ್‍ಸ್ಟ್ರಾಂಗ್ ಚಂದ್ರನ ಅಂಗಳಕ್ಕೆ ಕಾಲಿಟ್ಟು ಜು.20ಕ್ಕೆ 52 ವರ್ಷ ತುಂಬಲಿದೆ. ಅದೇ ದಿನ ಕಂಪನಿಯ ರಾಕೆಟ್ ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲಿದೆ ಎಂದು ವರದಿಯಾಗಿದೆ.

    ಮೊದಲ ಪ್ರಯಾಣದಲ್ಲಿ ಬೆಜೊಸ್ ಮತ್ತು ಅವರ ಸಹೋದರ ಮಾರ್ಕ್ ಹೋಗಿದ್ದಾರೆ. ಅದರ ಜತೆಗೆ ಇನ್ನೊಂದು ಸೀಟ್‍ ಖಾಲಿ ಇತ್ತು. ಆ ಸೀಟಿಗಾಗಿ ಆಸಕ್ತರಿಗಾಗಿ ಬಿಡ್ ಆಹ್ವಾನಿಸಲಾಗಿತ್ತು. 159 ದೇಶಗಳ 7500 ಜನ ಇದರಲ್ಲಿ ಭಾಗಿಯಾಗಿದ್ದರು. ಇದೀಗ 204 ಕೋಟಿ ರೂಪಾಯಿ ಬಿಡ್ ಸಲ್ಲಿಸಿದ ವ್ಯಕ್ತಿ ಆಯ್ಕೆಯಾಗಿದ್ದಾನೆ.

    ರಾಬರ್ಟ್‌ ನಿರ್ಮಾಪಕನ ಕೊಲೆ ಸ್ಕೆಚ್‌ ಹಾಕಿ ನೇಪಾಳದಲ್ಲಿ ಕುಳಿತ ‘ಕರಿ ಬಾಸ್‌’ ಸಿಕ್ಕಿಬಿದ್ದದ್ದೇ ರೋಚಕ…

    ಇನ್ಮುಂದೆ ಅಮೆರಿಕದಲ್ಲಿ ನಾಯಿಗಳಿಗೆ ನೋ ಎಂಟ್ರಿ! ಹೊರಟಿತು ಕಟ್ಟುನಿಟ್ಟಿನ ಆದೇಶ, ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts