ಇನ್ಮುಂದೆ ಅಮೆರಿಕದಲ್ಲಿ ನಾಯಿಗಳಿಗೆ ನೋ ಎಂಟ್ರಿ! ಹೊರಟಿತು ಕಟ್ಟುನಿಟ್ಟಿನ ಆದೇಶ, ಕಾರಣವೇನು ಗೊತ್ತಾ?

dog
Published on

ನ್ಯೂಯಾರ್ಕ್‌: ಇನ್ನು ಮುಂದೆ ಅಮೆರಿಕವು 113 ರಾಷ್ಟ್ರಗಳಿಂದ ನಾಯಿಗಳನ್ನು ತರಿಸಿಕೊಳ್ಳುವುದಕ್ಕೆ ನಿಷೇಧ ಹೇರಿದೆ. ಇತ್ತೀಚೆಗೆ ಅಮೆರಿಕಕ್ಕೆ ನಾಯಿಮರಿಗಳನ್ನು ತರುವ ಪ್ರಕ್ರಿಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಇಂಥದ್ದೊಂದು ಆದೇಶವನ್ನು ಸರ್ಕಾರ ಹೊರಡಿಸಿದೆ.

ಅಷ್ಟಕ್ಕೂ ನಾಯಿಯ ನಿಷೇಧಕ್ಕೆ ಕಾರಣ, ರೇಬೀಸ್‌ ರೋಗ ಹೆಚ್ಚಾಗಿರುವುದು. ಆದ್ದರಿಂದ ವಿವಿಧ ತಳಿಗಳ ನಾಯಿಗಳನ್ನು ನಿಷೇಧಿಸಲಾಗಿದೆ. ಈ ನಿಬಂಧನೆ ಜುಲೈ 14 ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕದ ಆರೋಗ್ಯ ಇಲಾಖೆ ಹೇಳಿದೆ. ಒಂದು ವೇಳೆ , ನಾಯಿಗಳನ್ನು ಆಮದು ಮಾಡಿಕೊಳ್ಳುವುದಿದ್ದರೆ ಅವುಗಳಿಗೆ ಈಗಾಗಲೇ ರೇಬೀಸ್ ಲಸಿಕೆ ಹಾಕಿಸಿರುವ ಕುರಿತು ಪುರಾವೆಯನ್ನು ಒದಗಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ಅಮೆರಿಕದ ಆರೋಗ್ಯ ಸಚಿವಾಲಯದ ಈ ಕ್ರಮವನ್ನು ಅಮೆರಿಕದ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡೌಗ್ಲಾಸ್ ಕ್ರಾಟ್ ಸ್ವಾಗತಿಸಿದ್ದಾರೆ 'ಅಮೆರಿಕಕ್ಕೆ ಆರೋಗ್ಯವಂತಹ ನಾಯಿಗಳನ್ನು ತರಬೇಕು, ಅದರಲ್ಲೂ ವಿಶೇಷವಾಗಿ ನಾಯಿಮರಿಗಳನ್ನು ತರುವಾಗ ಅವುಗಳ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಬೇಕು' ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net