More

    ಆಂಬ್ಯುಲೆನ್ಸ್‌ಗೆ ದಾರಿ ಮಾಡಲು ಕಾನ್ಸ್‌ಟೆಬಲ್‌ ಪಟ್ಟ ಸಾಹಸಕ್ಕೆ ಅಭಿನಂದನೆಗಳ ಮಹಾಪೂರ

    ಹೈದರಾಬಾದ್: ಅಂಬ್ಯುಲೆನ್ಸ್‌ ಬರುತ್ತಿದ್ದರೆ, ಅದರಲ್ಲಿರುವ ರೋಗಿಯ ಪ್ರಾಣ ಉಳಿಸಲು ಟ್ರಾಫಿಕ್‌ನಲ್ಲಿಯೂ ದಾರಿ ಮಾಡಿಕೊಡಲು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಾರೆ. ಆದರೆ ಎಷ್ಟೋ ಸಮಯದಲ್ಲಿ ಟ್ರಾಫಿಕ್‌ ಪೊಲೀಸರೇ ಅಸಹಾಯಕರಾಗಿ ಕೈಚೆಲ್ಲಿ ಕುಳಿತುಕೊಳ್ಳುವುದುಂಟು.

    ಆದರೆ ಕಕ್ಕಿರಿದು ತುಂಬಿದ ಟ್ರಾಫಿಕ್‌ ನಡುವೆ ಅಂಬ್ಯುಲೆನ್ಸ್‌ನಲ್ಲಿ ಇರುವ ಯಾವುದೋ ಒಬ್ಬ, ಪರಿಚಯವೇ ಇಲ್ಲದ ರೋಗಿಗಾಗಿ ಇಲ್ಲೊಬ್ಬ ಕಾನ್ಸ್‌ಟೆಬಲ್‌ ನಡೆದುಕೊಂಡ ರೀತಿ ಇದೀಗ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಈ ಟ್ರಾಫಿಕ್‌ ಪೊಲೀಸ್‌ಗೆ ಎಲ್ಲರೂ ಕೈಎತ್ತಿ ಸಲಾಂ ಹೊಡೆಯುತ್ತಿದ್ದಾರೆ, ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.

    ಇಂಥದ್ದೊಂದು ಶ್ಲಾಘನಾರ್ಹ ಕಾರ್ಯ ಮಾಡಿರುವ ಘಟನೆ ನಡೆದಿರುವುದು ಹೈದರಾಬಾದ್‌ನಲ್ಲಿ. ಇಲ್ಲಿಯ ಅಬಿದ್ಸ್ ಜಿಪಿಒ ಜಂಕ್ಷನ್ ಮತ್ತು ಆಂಧ್ರ ಬ್ಯಾಂಕ್ ಕೋಟಿ ಹತ್ತಿರ ಕಳೆದ ಸೋಮವಾರದಂದು ಅಂಬ್ಯುಲೆನ್ಸ್‌ನಲ್ಲಿ ರೋಗಿಯೊಬ್ಬರನ್ನು ಕರೆತರಲಾಗುತ್ತಿತ್ತು. ಪೀಕ್ ಸಮಯವಾದ್ದರಿಂದ ಟ್ರಾಫಿಕ್ ಜಾಮ್‌ನಲ್ಲಿ ಅಂಬ್ಯುಲೆನ್ಸ್‌ ಸಿಲುಕಿತು.

    ಇದೇ ಜಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದ ಅಬಿದ್ಸ್ ಟ್ರಾಫಿಕ್ ಪೊಲೀಸ್ ಠಾಣೆ ಹೆಡ್ ಕಾನ್ಸ್‌ಟೆಬಲ್‌ ಜಿ.ಬಾಬ್ಜಿ ಇದನ್ನು ಗಮನಿಸಿದ್ದಾರೆ. ಅಂಬ್ಯುಲೆನ್ಸ್‌ಗಾಗಿ ಟ್ರಾಫಿಕ್ ಕ್ಲಿಯರ್ ಮಾಡಿಕೊಡಲು, ಅದರ ಮುಂದೆ ಒಂದೇ ಸಮನೆ ಓಡಿ ಎಲ್ಲ ವಾಹನಗಳನ್ನೂ ಪಕ್ಕಕ್ಕೆ ಸರಿಸುತ್ತಾ ಸಾಗಿದ್ದಾರೆ.

    ಇದನ್ನೂ ಓದಿ: ಅತ್ತೆಗೆ ಅಕ್ರಮವಾಗಿ ಹುಟ್ಟಿದ್ದಾನೆ ನನ್ನ ಗಂಡ- ಪೊಲೀಸ್‌ಠಾಣೆ ಮೆಟ್ಟಿಲೇರಿದ ಪತ್ನಿ!

    ಅವರು ಈ ರೀತಿ ಓಡಿದ್ದು ಎಷ್ಟು ದೂರ ಗೊತ್ತಾ? ಸುಮಾರು ಎರಡು ಕಿ.ಮೀ! ಹೀಗೆ ಅಂಬ್ಯುಲೆನ್ಸ್‌ ಮುಂದೆಯೇ ತಮಗೆ ಪರಿವೇ ಇಲ್ಲದಂತೆ ಓಡಿ ಓಡಿ ಹೋಗಿ ಸುಮಾರು ಎರಡು ಕಿ.ಮೀನಷ್ಟು ದೂರ ಕ್ರಮಿಸಿ ದಾರಿ ಮಾಡಿಕೊಟ್ಟಿದ್ದಾರೆ.

    ಸಾಮಾನ್ಯವಾಗಿ ಇದು ನನ್ನ ವ್ಯಾಪ್ತಿ, ಅದು ನಿನ್ನ ವ್ಯಾಪ್ತಿ ಎಂದು ಪೊಲೀಸರು ಕರ್ತವ್ಯದಿಂದ ನುಣುಚಿಕೊಳ್ಳುತ್ತಾರೆ ಎನ್ನುವ ಮಾತಿದೆ. ಆದರೆ ಜಿ.ಬಾಬ್ಜಿಯವರು ಯಾವ ವ್ಯಾಪ್ತಿಯ ಲೆಕ್ಕವೂ ಇಲ್ಲೇ ಓಡಿದ್ದಾರೆ. ಅವರ ಈ ಕಾರ್ಯವನ್ನು ಅಂಬ್ಯುಲೆನ್ಸ್‌ನಲ್ಲಿ ಇದ್ದ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿಕೊಂಡು ಪೋಸ್ಟ್‌ ಮಾಡಿದ್ದಾರೆ.

    ಟ್ರಾಫಿಕ್ ಕಾನ್ಸಸ್ಟೇಬಲ್ ಅವರ ಕಾರ್ಯವನ್ನು ಶ್ಲಾಘಿಸಿ ಹೈದರಾಬಾದ್‍ನ ಎಸಿಪಿ (ಟ್ರಾಫಿಕ್) ಅನಿಲ್ ಕುಮಾರ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಈ ವಿಡಿಯೋ ರೀಟ್ವೀಟ್ ಮಾಡಿದ್ದು, ಜಿ.ಬಾಬ್ಜಿಯವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

    78ರ ವೃದ್ಧನಿಗೆ 17ರ ಬಾಲಕಿ ಜತೆ ಮದುವೆ- 22ನೇ ರಾತ್ರಿ ಅಜ್ಜ ಕೊಟ್ಟ ಡಿವೋರ್ಸ್!

    ಆಂಧ್ರದಲ್ಲಿ ಶಾಲೆ ತೆರೆದ ಮೂರು ದಿನದಲ್ಲಿ 262 ಮಕ್ಕಳಿಗೆ, 160 ಶಿಕ್ಷಕರಿಗೆ ಕರೊನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts