More

    ಆಂಬುಲೆನ್ಸ್​ ತಲುಪಲು ತುಂಬು ಗರ್ಭಿಣಿಯನ್ನು ಹೊತ್ತು ಹಳ್ಳಕೊಳ್ಳ ದಾಟಿ ಎಂಟು ಕಿಮೀ ನಡೆದರು!

    ಭೋಪಾಲ್​: ಭಾರಿ ಮಳೆಗೆ ದೇಶದ ಹಲವು ರಾಜ್ಯಗಳು ತತ್ತರಿಸಿಹೋಗಿರುವ ನಡುವೆಯೇ ಭೋಪಾಲ್​ನಲ್ಲಿ ನಡೆದಿರುವ ಘಟನೆಯೊಂದು ಮನಕಲುಕುವಂತಿದೆ.

    ಬುಡಕಟ್ಟು ಪ್ರಾಬಲ್ಯವಿರುವ ಬಾರ್ವಾಲಿ ಜಿಲ್ಲೆಯಲ್ಲಿ ಮೊದಲೇ ರಸ್ತೆಗಳಿಲ್ಲದೇ ಜನರು ಪರದಾಡುತ್ತಿದ್ದಾರೆ. ಅಲ್ಲಿ ವಾಹನಗಳು ಕೂಡ ಬರಲಾರವು. ಇಂಥ ಸ್ಥಿತಿಯಲ್ಲಿ ಇದೀಗ ಮಳೆ ಆವಾಂತರ ಸೃಷ್ಟಿಸಿದ್ದು, ಅನಾರೋಗ್ಯ ಪೀಡಿತರನ್ನು ಸಂಬಂಧಿಕರು ಮತ್ತು ಗ್ರಾಮಸ್ಥರು ಹೊತ್ತುಕೊಂಡು ನದಿ ದಾಟಿ ಆಸ್ಪತ್ರೆಗೆ ಕರೆದೊಯ್ಯುವ ಸ್ಥಿತಿ ಇದೆ. ಅಂಥದ್ದೇ ಒಂದು ಘಟನೆ ನಡೆದಿದೆ.

    ಅದೇನೆಂದರೆ ಮಳೆಯ ಮಧ್ಯೆ ಗ್ರಾಮಸ್ಥರು ಸುನಿತಾ ಎಂಬ ಮಹಿಳೆಯನ್ನು ಎಂಟು ಕಿಲೋಮೀಟರ್ ಕಾಲ್ನಡಿಗೆಯ ದಾರಿಯಲ್ಲಿ ಹೊತ್ತು ಒಯ್ದಿದ್ದಾರೆ. ಬಾರ್ವಾನಿ ಜಿಲ್ಲೆಯ ಖಮ್​ಗಾಂವ್​ನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಆಂಬುಲೆನ್ಸ್​ ಕೂಡ ಬರದ ಕಾರಣ, ಎಂಟು ಕಿಲೋ ಮೀಟರ್​ ದೂರ ಕಾಲ್ನಡಿಗೆಯಲ್ಲಿ ಸಾಗಿ ನಂತರ ಆಂಬುಲೆನ್ಸ್​ನಲ್ಲಿ ಕರೆದುಕೊಂಡು ಹೋಗಿದ್ದಾರೆ.

    ಖಮ್‌ಗಾಂವ್‌ನಲ್ಲಿ ಮೂಲ ಸೌಕರ್ಯಗಳು ಇಲ್ಲ. ಈ ಗ್ರಾಮಕ್ಕೆ ಸುಮಾರು ಎಂಟು ಕಿ.ಮೀ ಕಾಲು ದಾರಿಯಿಂದ ನಡೆದುಕೊಂಡು ಬಂದರೆ ಮಾತ್ರವೇ ಅವರಿಗೆ ಹೆದ್ದಾರಿ ಸಿಗುತ್ತದೆ. ಅಲ್ಲಿ ಮಾತ್ರ ವಾಹನಗಳು ಬರುವುದು. ಆದರೆ ಇದೀಗ ಮಳೆಗಾಲವಾಗಿದ್ದರಿಂದ ಇಲ್ಲಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇಂತಹ ಸ್ಥಿತಿಯಲ್ಲಿ ಗರ್ಭಿಣಿಯನ್ನು ಎಂಟು ಕಿ.ಮೀ ಹೊತ್ತುಕೊಂಡು ಹೆದ್ದಾರಿಗೆ ತಂದಿರುವ ವಿಡಿಯೋ ವೈರಲ್​ ಆಗಿದೆ.
    ರಾಜಕಾರಣಿ, ಜಿಲ್ಲಾಡಳಿತಕ್ಕೆ ಮತ್ತು ಸರ್ಕಾರಕ್ಕೆ ಹಲವಾರು ಬಾರಿ ಗ್ರಾಮಸ್ಥರು ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಗರ್ಭಿಣಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

    ಮೈಸೂರು ಅರಸರಿಗೆ ಸುಪ್ರೀಂನಲ್ಲಿ ಜಯಭೇರಿ: ಸರ್ಕಾರಕ್ಕೆ ದಕ್ಕದ ಸಾವಿರಾರು ಎಕರೆ ಜಮೀನು

    ಸರ್ಕಾರ ಉರುಳಿಸಿದ್ರೆ ಸಚಿವ ಸ್ಥಾನ ಕೊಡಿಸೋ ಆಫರ್​ ಬಂದಿತ್ತು ಎಂದ ಕಾಂಗ್ರೆಸ್​ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts