More

    ಜೆಡಿಎಸ್​ ಬಿಟ್ಟು ‘ಕೈ’ ಸೇರಿದ ಅಕ್ಕಿ

    ಬೆಂಗಳೂರು: ಜೆಡಿಎಸ್​ನ ಮಾಜಿ ಶಾಸಕರ ಎಂ.ಎಸ್. ಅಕ್ಕಿ ಅವರು ಇಂದು ಕಾಂಗ್ರೆಸ್​ ಕೈ ಹಿಡಿದಿದ್ದಾರೆ.

    ಜೆಡಿಎಸ್​ಗೆ ರಾಜೀನಾಮೆ ನೀಡಿರುವ ಅವರು, ಕಾಂಗ್ರೆಸ್​ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಉಪಚುನಾವಣೆ ಹೊತ್ತಲ್ಲೇ ಜೆಡಿಎಸ್​ಗೆ ಇದೊಂದು ದೊಡ್ಡ ಶಾಕ್​ ಎನ್ನಲಾಗಿದೆ.

    ಇದನ್ನೂ ಓದಿ: ಅಧಿಕಾರ ದುರ್ಬಳಕೆ ಪ್ರಶ್ನೆಗಳಿಗೆ ಎಚ್ ಡಿಕೆ ಮೊದಲಿಗೆ ಉತ್ತರಿಸಲಿ

    ಇವರು ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ್ದರು. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

    ಮಾಜಿ ಶಾಸಕ ಎಂ.ಎಸ್. ಅಕ್ಕಿ ಜತೆಗೆ ನೂರಾರು ಜೆಡಿಎಸ್ ಮುಖಂಡರು ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ಗೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಕಳೆದ ತಿಂಗಳು ಅಕ್ಕಿಯವರು ಮಾಜಿ ಸಚಿವ ಸಂತೋಷ್ ಲಾಡ್‍ರನ್ನು ಭೇಟಿಯಾಗಲು ಹೋಗಿದ್ದರು. ಆಗ ಅವರು ಕಾಂಗ್ರೆಸ್​ ಸೇರಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದ ಅಕ್ಕಿ, ಕಾಂಗ್ರೆಸ್‍ಗೆ ಸೇರ್ಪಡೆಯಾಗಿಲ್ಲ. ಲಾಡ್ ಎರಡು ವರ್ಷಗಳ ನಂತರ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಅದೇ ಸಮಯದಲ್ಲಿ ಕೆಲವರೊಂದಿಗೆ ಬಂದು ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದ್ದೆ. ಬದಲಾಗಿ ನಾನು ಕಾಂಗ್ರೆಸ್ ಸೇರ್ಪಡೆಯಾಗಲು ಲಾಡ್ ಬಳಿ ತೆರಳಿರಲಿಲ್ಲವೆಂದು ಮಾಜಿ ಶಾಸಕ ಎಂ ಎಸ್ ಅಕ್ಕಿ ಸ್ಪಷ್ಟನೆ ನೀಡಿದ್ದರು.

    ಅನುಮತಿಯಿಲ್ಲದೇ ಸಿಬಿಐಗೆ ನೋ ಎಂಟ್ರಿ ಎಂದ ಮಹಾರಾಷ್ಟ್ರ

    ಫ್ಯಾನ್ಸಿ​ ನಂಬರ್​ನಲ್ಲಿ ಸಾರಿಗೆ ಇಲಾಖೆ ದಾಖಲೆ: 0001 ಸಂಖ್ಯೆಗೆ ಎಷ್ಟು ಹಣ ಕೊಟ್ರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts