More

    ಹಾರುತ್ತಾ ಹಾರುತ್ತಾ ಟ್ಯಾಕ್ಸಿಯಲ್ಲೇ ಊರು ತಲುಪಬಹುದು: ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆ ಆರಂಭ

    ಹರಿಯಾಣ: ಬೇರೆ ಊರು, ದೇಶಗಳಿಗೆ ಹೋಗಲು ವಿಮಾನ, ಹೆಲಿಕ್ಯಾಪ್ಟರ್​ಗಳನ್ನು ಕಂಡುಹಿಡಿದು ಅದೆಷ್ಟೋ ದಶಕಗಳೇ ಕಳೆದು ಹೋದವು. ಇದೀಗ ಟ್ಯಾಕ್ಸಿಯ ರೂಪದಲ್ಲಿ ಇರುವ ಚಿಕ್ಕ ವಿಮಾನದ ಮೂಲಕ ಹಾರಿ ಹಾರಿ ಪರ ಊರು ತಲುಪಬಹುದಾದ ಏರ್​ಟ್ಯಾಕ್ಸಿ ಸೇವೆಗೆ ಚಾಲನೆ ದೊರೆತಿದೆ.

    ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆಯನ್ನು ಹರಿಯಾಣ ರಾಜ್ಯದಲ್ಲಿ ಆರಂಭಿಸಲಾಗಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಚಂಡೀಗಢ – ಹಿಸಾರ್ ನಡುವಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಸೇವೆಗೆ ಚಾಲನೆ ನೀಡಿದ್ದಾರೆ.

    ಏರ್ ಟ್ಯಾಕ್ಸಿ ನಾಲ್ಕು ಸೀಟುಗಳ ವಿಮಾನವಾಗಿದೆ. ಪೈಲಟ್ ಹೊರತುಪಡಿಸಿ ಇತರ ಮೂರು ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದು. ಇದರ ಸಹಾಯದಿಂದ ಚಂಡೀಗಢದಿಂದ ಹಿಸಾರ್‌ಗೆ ಇರುವ ದೂರವನ್ನು ಕೇವಲ 45 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ.

    ‘ಕೇಂದ್ರ ಸರ್ಕಾರದ ‘ಉದಯ್’ ಯೋಜನೆಯಡಿ ಈ ಸೇವೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು. ವಿಮಾನ ಹಾರಾಟವನ್ನು ಕೈಗೆಟುಕುವಂತೆ ಮಾಡಲು ಈ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ಖಟ್ಟರ್​ ಹೇಳಿದ್ದಾರೆ.
    ಏರ್ ಟ್ಯಾಕ್ಸಿ ಏವಿಯೇಷನ್ ​​ಕಂಪನಿಯು ಹಿಸಾರ್‌ನಿಂದ ಚಂಡೀಗಢಕ್ಕೆ ರೂ.1,755 ಶುಲ್ಕವನ್ನು  ನಿಗದಿಪಡಿಸಲಾಗಿದೆ.

    ಹಿಸಾರ್ – ಚಂಡೀಗಢ ನಡುವೆ ಪ್ರತಿದಿನ ವಿಮಾನ ಸಂಚಾರವಿರಲಿದೆ. ಚಂಡೀಗಢ – ಹಿಸಾರ್ ವಾಯು ಸೇವೆಯನ್ನು ಆರಂಭಿಸಿರುವ ಕಂಪನಿಯು ಜನವರಿ 18ರಿಂದ ಹಿಸಾರ್‌ನಿಂದ ಡೆಹ್ರಾಡೂನ್‌ಗೆ ಹಾಗೂ ಹಿಸಾರ್‌ನಿಂದ ಧರ್ಮಶಾಲಾಗೆ ಜನವರಿ 23ರಂದು ವಿಮಾನ ಸೇವೆಯನ್ನು ಆರಂಭಿಸಲಿದೆ. ಶೀಘ್ರದಲ್ಲಿ ಇದು ಬೇರೆ ರಾಜ್ಯಗಳಿಗೆ ವಿಸ್ತರಣೆಯಾಗಲಿದೆ.

    ಅರವತ್ತೇ ಗಂಟೆಗಳಲ್ಲಿ 110 ಅಡಿ ಉದ್ದದ ಸೇತುವೆ ನಿರ್ಮಿಸಿ ದಾಖಲೆ ಮಾಡಿದ ಸೇನೆ

    ಸುಪ್ರೀಂಕೋರ್ಟ್​ ಇಬ್ಬರು ಮಹಿಳಾ ನ್ಯಾಯಮೂರ್ತಿಗಳನ್ನು ಗುಂಡಿಟ್ಟು ಕೊಂದ ಉಗ್ರರು!

    11 ಮಹಿಳೆಯರ ಸಾವಿಗೆ ಕಾರಣ ಅಶೋಕ್​ ಖೇಣಿ: ಅವರನ್ನು ಬಂಧಿಸಿ ಎಂದು ಸರ್ಕಾರಕ್ಕೆ ಆಗ್ರಹ

    ಅರವತ್ತೇ ಗಂಟೆಗಳಲ್ಲಿ 110 ಅಡಿ ಉದ್ದದ ಸೇತುವೆ ನಿರ್ಮಿಸಿ ದಾಖಲೆ ಮಾಡಿದ ಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts