More

    ‘ನೆಹರೂ ಕಟ್ಟಿಸಿರೋ ‘ಏಮ್ಸ್’​ ಇರೋವಾಗ ಸೋನಿಯಾ ಪದೇ ಪದೇ ವಿದೇಶಕ್ಕೆ ಹೋಗೋದ್ಯಾಕೆ?’

    ನವದೆಹಲಿ: ಗೃಹ ಸಚಿವ ಅಮಿತ್​ ಷಾ ಅವರು, ಆನಾರೋಗ್ಯದ ನಿಮಿತ್ತ ಖಾಸಗಿ ಆಸ್ಪತ್ರೆಗೆ ಪುನಃ ದಾಖಲಾಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ ಕಾಂಗ್ರೆಸ್​ ಸಂಸದ ಶಶಿ ತರೂರ್​ ‘ಆಧುನಿಕ ಭಾರತದ ದೇವಾಲಯ’ ಎಂದೇ ಕರೆಯಲ್ಪಡುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)​ ಇರುವಾಗ ಷಾ ಅವರು ಖಾಸಗಿ ಆಸ್ಪತ್ರೆಗೆ ಹೋಗುವುದೇಕೆ ಎಂದು ಟ್ವೀಟರ್​ನಲ್ಲಿ ಪ್ರಶ್ನೆ ಮಾಡಿದ್ದಾರೆ.

    ಈ ಟ್ವೀಟ್​ ಅವರಿಗೆ ಇದೀಗ ಉಲ್ಟಾ ಹೊಡೆದಿದೆ. ಬಿಜೆಪಿಯನ್ನು ಟೀಕೆ ಮಾಡಲು ಹೋಗಿ ತಾವೇ ಟೀಕೆಗೆ ಗುರಿಯಾಗಿರುವ ಘಟನೆ ನಡೆದಿದೆ. ಇದಕ್ಕೆ ಕಾರಣ, ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಚಿಕಿತ್ಸೆಗೆಂದು ಅಮೆರಿಕಕ್ಕೆ ಹೋಗಿರುವುದು!

    ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ. ಆದರೆ ನಿಯಮಿತ ವೈದ್ಯಕೀಯ ಪರೀಕ್ಷೆಗೆ ಕಾರಣ ನೀಡಿದ ಸೋನಿಯಾಗಾಂಧಿ ಹಾಗೂ ಅವರ ಜತೆ ರಾಹುಲ್​ ಗಾಂಧಿ 12ರ ರಾತ್ರಿ ಅಮೆರಿಕಕ್ಕೆ ತೆರಳಿದ್ದಾರೆ.

    ಸೂಕ್ತ ಚಿಕಿತ್ಸೆ ಬಳಿಕ ತಾಯಿ-ಮಗ ಇಬ್ಬರೂ ಮರಳಿ ಬಂದು ಸಂಸತ್ತಿನ ಕಲಾಪದಲ್ಲಿ ಭಾಗಿಯಾಗಲಿದ್ದಾರೆ ಎಂದು ಪಕ್ಷ ಸ್ಪಷ್ಟಪಡಿಸಿದ್ದರೂ, ರಾಜಕೀಯ ವಲಯದಲ್ಲಿ ವಿದೇಶ ಪ್ರಯಾಣದ ಔಚಿತ್ಯದ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ.

    ಈ ನಡುವೆಯೇ ಅಮಿತ್​ ಷಾ ಕುರಿತು ಶಶಿ ತರೂರ್​ ಮಾಡಿರುವ ಟ್ವೀಟ್​ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದ ಮೊದಲ ಪ್ರಧಾನಿ ಕಾಂಗ್ರೆಸ್​ನ ಜವಾಹರಲಾಲ್​ ನೆಹರೂ ಅವರೇ ಕಟ್ಟಿಸಿರುವ, ಆಧುನಿಕ ಭಾರತದ ದೇವಾಲಯ’ ಎಂದೇ ಕರೆಯಲ್ಪಡುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)​ ಸೋನಿಯಾಗಾಂಧಿ ಅವರು ಅಮೆರಿಕಕ್ಕೆ ಹಾರಿರುವ ಉದ್ದೇಶವೇನು ಎಂದು ತರೂರ್​ ಅವರನ್ನು ಪ್ರಶ್ನಿಸಿ ಪೇಚಿಗೆ ಸಿಲುಕಿಸಿದ್ದಾರೆ.

    ಇದನ್ನೂ ಓದಿ: ರಾಗಿಣಿಗೆ ಇನ್ನೆರಡು ದಿನ ಜೈಲೇ ಗತಿ: ಬೇಲ್​ ವಿಚಾರಣೆ ಮುಂದೂಡಿಕೆ- ನಟಿಯರಿಗೆ ಸಿಕ್ತು ಕರೊನಾ ರಿಸಲ್ಟ್​

    ಇದೇ ಮೊದಲಲ್ಲ, ಪದೇ ಪದೇ ವೈದ್ಯಕೀಯದ ಕಾರಣನೀಡಿ ಈ ಗಾಂಧಿ ಕುಟುಂಬದವರು ವಿದೇಶಕ್ಕೆ ಹಾರುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ ಕಮೆಂಟಿಗರು. ಕಾಂಗ್ರೆಸ್​ನವರು ಟ್ವೀಟ್​ ಮಾಡುವಾಗ ಮೆದುಳನ್ನು ಡಬ್ಬದಲ್ಲಿ ಮುಚ್ಚಿಟ್ಟುಕೊಂಡಿರುತ್ತಾರಾ, ತಲೆ-ಬುಡವಿಲ್ಲದ ಟ್ವೀಟ್​ ಮಾಡುತ್ತಾರೆ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

    ‘ಸೋನಿಯಾ ಗಾಂಧಿಯವರಿಗೆ ಆರೋಗ್ಯ ತಪಾಸಣೆ ಅವಶ್ಯಕತೆ ಮೇಲಿಂದ ಮೇಲೆ ಇದೆ. ಆದರೆ ಕರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ನಿಯಮಿತ ಆರೋಗ್ಯ ತಪಾಸಣೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ಅಮೆರಿಕಕ್ಕೆ ತೆರಳಿ ತಪಾಸಣೆಗೆ ಒಳಗಾಗಲಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ರಣ್‌ದೀಪ್ ಸುರ್ಜೆವಾಲಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

    ಸೋನಿಯಾಗಾಂಧಿ ಸುಮಾರು ಎರಡು ವಾರ ಅಮೆರಿಕದಲ್ಲೇ ಇರಲಿದ್ದಾರೆ. ಆದರೆ ರಾಹುಲ್ ಗಾಂಧಿಯವರು ಒಂದೇ ವಾರ ಇದ್ದು ವಾಪಸಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ, ಸಂಸತ್ತಿನ ಕಲಾಪದಲ್ಲಿ ಬೇಗನೆ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದರೂ, ಆದರೆ ಅಧಿವೇಶವನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ಈ ರೀತಿ ನಾಟಕವಾಡಲಾಗುತ್ತದೆ ಎಂದು ಹಲವರ ಟೀಕೆಗೆ ಇದು ಗುರಿಯಾಗಿದೆ. ಇದರ ಬೆನ್ನಲ್ಲೇ ಇದೀಗ ಶಶಿ ತರೂರ್​ ಅವರೂ ಮುಜುಗರ ಅನುಭವಿಸುವಂತಾಗಿದೆ.

    ಪ್ರಯೋಗಾಲಯದಲ್ಲಿಯೇ ಕರೊನಾ ಸೃಷ್ಟಿ: ಚೀನಿಯರ ಕ್ರೌರ್ಯಕ್ಕೆ ಪುರಾವೆ ನೀಡುವೆ ಎಂದ ಚೀನಾದ ವೈರಾಲಾಜಿಸ್ಟ್​!

    ಪ್ರಧಾನಿಗೆ ದೇಶದ ಬಗ್ಗೆ ಕಾಳಜಿ ಇಲ್ಲ ಎಂದು ಅಮೆರಿಕದಿಂದ ರಾಹುಲ್​ ಗಾಂಧಿ ಟ್ವೀಟ್​!

    ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಕಂಗನಾ ಫ್ಯಾಬ್ರಿಕ್ ಸ್ಯಾರಿ- ಸೀರೆ ತುಂಬಾ ಕಂಗೊಳಿಸ್ತಿರೋ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts