More

    ತಿಮ್ಮಪ್ಪನ ಹೂವುಗಳೀಗ ಘಮಘಮಿಸುವ ಅಗರಬತ್ತಿ- ಏಳು ಬೆಟ್ಟಗಳನ್ನು ಪ್ರತಿನಿಧಿಸುವ ಪ್ಯಾಕೆಟ್‌ ರೆಡಿ

    ತಿರುಪತಿ: ಜಗತ್ತಿನ ಸಿರಿವಂತ ದೇವರು ಎನಿಸಿಕೊಂಡಿರುವ ತಿರುಪತಿ ತಿಮ್ಮಪ್ಪನಿಗೆ ಭಕ್ತಾದಿಗಳು ನೀಡುವ ವಜ್ರ, ವೈಢೂರ್ಯ, ಚಿನ್ನದ ಆಭರಣಗಳು ಹಾಗೂ ನಗದಿಗೆ ಲೆಕ್ಕವೇ ಇಲ್ಲ. ಅದೇ ರೀತಿ ಹರಿದುಬರುವ ಹೂವುಗಳು ಎಷ್ಟೋ ಟನ್‌ಗಟ್ಟಲೆ.

    ಇಂಥ ಹೂವುಗಳಿಂದಲೇ ಅಗರಬತ್ತಿಗಳನ್ನು ತಯಾರಿಸುವ ಮಹತ್ವದ ಹೆಜ್ಜೆಯನ್ನು ತಿರುಮಲ ತಿರುಪತಿ ದೇವಸ್ಥಾನಮ್‌ (ಟಿಟಿಡಿ) ಇಟ್ಟಿದ್ದು, ಈ ನಿಟ್ಟಿನಲ್ಲಿ ಇದೀಗ ಯಶಸ್ವಿಯೂ ಆಗಿದೆ. ಹೂವುಗಳಿಂದ ತಯಾರಿಸಿರುವ ಅಗರಬತ್ತಿಯನ್ನು ಬಿಡುಗಡೆ ಮಾಡಿದೆ.

    ಬೆಂಗಳೂರು ಮೂಲದ ದರ್ಶನ್‌ ಇಂಟರ್‌ನ್ಯಾಷನಲ್‌ ಕಂಪೆನಿ ಹೂವುಗಳಿಂದ ಅಗರಬತ್ತಿಯನ್ನು ತಯಾರಿಸಿದೆ. ತಿರುಪತಿ ದೇವಸ್ಥಾನದ ಏಳು ಬೆಟ್ಟಗಳಾದ ಅಭಯಹಸ್ತ, ತಂದನಾನ, ದಿವ್ಯಪಾದ, ಆಕ್ರಿಷ್ಟಿ, ಸೃಷ್ಟಿ, ತೃಷ್ಟಿ ಮತ್ತು ದೃಷ್ಟಿ ಇವುಗಳನ್ನೇ ಪ್ರತಿನಿಧಿಸುವ ಹೆಸರಿನಲ್ಲಿ ಅಗರಬತ್ತಿಗಳನ್ನು ಉತ್ಪಾದಿಸಲಾಗುತ್ತಿದೆ.

    ‘ಅಗರಬತ್ತಿಗಳಿಗೆ ಕಚ್ಚಾವಸ್ತುವಾಗಿ ದೇವರಿಗೆ ಅರ್ಪಿಸಿದ ಹೂಗಳು, ದೇವಸ್ಥಾನದಲ್ಲಿ ನಡೆದ ಇತರ ಕಾರ್ಯಕ್ರಮಗಳ ಅಲಂಕಾರಕ್ಕೆ ಬಳಸಿದ ಹೂಗಳನ್ನು ಬಳಸಲಾಗುತ್ತದೆ. ಹೂಗಳು ಬಳಕೆಯಾದ 1 ದಿನದ ನಂತರ ಅವುಗಳನ್ನು ಅಗರಬತ್ತಿ ತಯಾರಿಕೆಗೆ ಬಳಸಲಾಗುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ.

    ಒಂದು ವೇಳೆ ಈ ಅಗರಬತ್ತಿ ಬೇಕೆಂದರೆ ತಿರುಪತಿಯ ಲಾಡು ಮಾರಾಟ ಕೌಂಟರ್‌ ಬಳಿ ಪಡೆದುಕೊಳ್ಳಬಹುದು. ಅವುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಟಿಟಿಡಿಯ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಮಾಹಿತಿ ನೀಡಿದ್ದಾರೆ.

    VIDEO: ಇಷ್ಟ ಗಣಪನಿಗೆ ಭಕ್ತ ಕೊಟ್ಟ 10 ಕೆ.ಜಿ ಚಿನ್ನದ ಕಿರೀಟ- ಇದರ ಬೆಲೆ ಆರು ಕೋಟಿ ರೂ!

    ಶೀಘ್ರದಲ್ಲಿಯೇ ಅಮಾನ್ಯವಾಗಲಿದೆ ಈ ಬ್ಯಾಂಕ್‌ಗಳ ಚೆಕ್‌ಗಳು- ಕೂಡಲೇ ಬದಲಿಸಿಕೊಳ್ಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts