More

    ಅಯ್ಯೋ.. ಮದ್ವೆಯಾಗಿ ತಪ್ಪು ಮಾಡಿಬಿಟ್ಟೆ… ಆತ್ಮಹತ್ಯೆಯ ಆತಂಕಕಾರಿ ವರದಿ ಬಿಡುಗಡೆ ಮಾಡಿದೆ ಎನ್‌ಸಿಆರ್‌ಬಿ

    ನವದೆಹಲಿ: ಮದುವೆಗೆ ಹೆಣ್ಣು ಸಿಗುತ್ತಿಲ್ಲ, ಗಂಡು ಸಿಗುತ್ತಿಲ್ಲ, ವಯಸ್ಸಾದರೂ ಮದುವೆಯಾಗುತ್ತಿಲ್ಲ ಎಂದು ಕೊರಗುವ ಒಂವು ವರ್ಗವಿದ್ದರೆ, ಮದುವೆಯಾಗಿ ಪಡಬಾರದ ಕಷ್ಟಪಟ್ಟು, ಇನ್ನಿಲ್ಲದ ಹಿಂಸೆ ಅನುಭವಿಸಿ ಜೀವ ಕಳೆದುಕೊಳ್ಳುತ್ತಿರುವ ವರ್ಗ ಇನ್ನೊಂದು.

    ಈ ಎರಡನೆಯ ವರ್ಗಕ್ಕೆ ಸೇರಿರುವ ಆತಂಕಕಾರಿ ವರದಿಯೊಂದನ್ನು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ನೀಡಿದೆ. ಕಳೆದ ಐದು ವರ್ಷಗಳ (2016 ರಿಂದ 2020ರವರೆಗೆ) ಅಂಕಿ ಅಂಶವನ್ನು ನೀಡಿರುವ ಎನ್‌ಸಿಆರ್‌ಬಿ, ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವವರ ಪೈಕಿ ಅತಿ ಹೆಚ್ಚು ಮಂದಿಯ ಸಾಲಿಗೆ ಸೇರಿದವರು ಮದುವೆಯಾದ ಕಾರಣಕ್ಕೆ ಸಾವಿನ ಹಾದಿ ಹಿಡಿದವರು ಎಂದು ಹೇಳಿದೆ.

    ಇದು ನೀಡಿರುವ ವರದಿಯ ಪ್ರಕಾರ ಈ ಅವಧಿಯಲ್ಲಿ 37,591 ಮಂದಿ ಮದುವೆಯ ನಂತರ ಅನುಭವಿಸಿದ ಹಿಂಸೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಎನ್‌ಸಿಆರ್‌ಬಿ ಸಿಕ್ಕಿರುವ ಅಧಿಕೃತ ಮಾಹಿತಿಯಷ್ಟೇ. ಇದನ್ನು ಮೀರಿ ಇನ್ನೂ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯ ನಂತರ ಸಮಸ್ಯೆ ಬಂದಾಗ ವಿಚ್ಛೇದನ ಪಡೆದುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಸಮಾಜಕ್ಕೆ ಅಂಜಿಯೋ ಅಥವಾ ಘೋರ ಭವಿಷ್ಯವನ್ನು ನೆನೆದುಕೊಂಡೋ ವಿಚ್ಛೇದನಕ್ಕಿಂತ ಸಾಯುವುದೇ ಮೇಲು ಎಂದು ಅನೇಕ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದಿದೆ ವರದಿ.

    ಭಾರತದಲ್ಲಿ ಉಂಟಾಗುತ್ತಿರುವ ಅಪಘಾತದ ಸಾವುಗಳು ಮತ್ತು ಆತ್ಮಹತ್ಯೆಗಳ ಕುರಿತಂತೆ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಹೊರಕ್ಕೆ ಬಂದಿದೆ. ವಿವಾಹಿತರ ಪೈಕಿ ಪ್ರತಿವರ್ಷ ಪ್ರತಿಶತ 7 ಮಂದಿ ವಿಚ್ಛೇದನದ ಹಾದಿ ತುಳಿದರೆ, ಶೇ.13ರಷ್ಟು ಜನರು ಅತೃಪ್ತ ಮದುವೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಎಂದಿದೆ ವರದಿ.

    ವರದಕ್ಷಿಣೆಯಿಂದಾಗಿ ಪ್ರತಿ ವರ್ಷ ಸರಾಸರಿ 2,056 ಆತ್ಮಹತ್ಯೆಗಳು ನಡೆಯುತ್ತಿವೆ. ಸುಮಾರು 2,600 ಆತ್ಮಹತ್ಯೆಗೆ ಅತೃಪ್ತ ಮದುವೆಗಳು ಕಾರಣವಾಗುತ್ತಿವೆ ಎಂದು ಉಲ್ಲೇಖಿಸಲಾಗಿದೆ.

    VIDEO: ಜನ್ಮದಿನದಂದು ಆಶೀರ್ವಚನ ನೀಡುತ್ತಲೇ ಲಿಂಗೈಕ್ಯರಾದ ಗೋಕಾಕ್‌ನ ಸ್ವಾಮೀಜಿ- ವಿಡಿಯೋದಲ್ಲಿ ಸೆರೆ

    ಡ್ರಗ್ಸ್‌ ಮಾರಾಟ ದಂಧೆಗಿಳಿದ ಅಮೆಜಾನ್‌? ಸಿಹಿತುಳಸಿ ನೆಪದಲ್ಲಿ ನಾಲ್ಕು ತಿಂಗಳಲ್ಲಿ ಒಂದು ಟನ್‌ ಮಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts