More

    ‘ಕಚೇರಿ ಸುತ್ತುವರೆದಿದ್ದರು, ಬುರ್ಖಾ ಹಾಕದವರನ್ನು ಕೊಲ್ಲುತ್ತಿದ್ದರು, ಜೀವ ಕೈಯಲ್ಲಿ ಹಿಡಿದು ಓಡಿದೆ…’

    ಕಾಬುಲ್​: ನಾನೆಂದೂ ಬುರ್ಖಾ ಧರಿಸುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಆ ಪದ್ಧತಿಯೇ ಇರಲಿಲ್ಲ. ಎರಡೆರಡು ಪಿಎಚ್​ಡಿ ಮಾಡಿ ಉನ್ನತ ಹುದ್ದೆಯಲ್ಲಿದ್ದವಳು ನಾನು. ಆದರೆ ಮೊನ್ನೆ ಕಚೇರಿಯಲ್ಲಿ ಇದ್ದ ವೇಳೆ ತಾಲಿಬಾನಿಗಳು ಕಾಬುಲ್​ ಅನ್ನು ವಶಕ್ಕೆ ಪಡೆದಿರುವ ಸುದ್ದಿ ಬಂತು. ಎಡೆ ಒಡೆದು ಹೋಯಿತು. ಅಷ್ಟೊತ್ತಿಗಾಗಲೇ ನಾನಿದ್ದ ಕಚೇರಿಯನ್ನೂ ಅವರು ಸುತ್ತುವರೆದಿರುವುದು ತಿಳಿಯಿತು.

    ಭಯದಿಂದ ಎಲ್ಲರೂ ಹೊರಗೆ ಬಂದೆವು. ಅದಾಗಲೇ ಬುರ್ಖಾ ಧರಿಸದೇ ಓಡಾಡುತ್ತಿದ್ದವರನ್ನು ತಾಲಿಬಾನಿಗಳು ಕಣ್ಣೆದುರೇ ಕೊಲ್ಲುತ್ತಿದ್ದರು. ನನ್ನ ಜೀವವೇ ಬಾಯಿಗೆ ಬಂತು. ಅಷ್ಟು ಹೊತ್ತಿಗೇ ನನ್ನ ಕೆಲ ಸಹೋದ್ಯೋಗಿಗಳು ಓಡಿ ಬಂದು ಕೂಡಲೇ ಎಲ್ಲಿಂದಾದರೂ ಬುರ್ಖಾ ಧರಿಸು ಎಂದು ಸಲಹೆ ನೀಡಿದರು. ಆದರೆ ಆ ಸಮಯದಲ್ಲಿ ನನಗೆಲ್ಲಿ ಅದು ಸಿಗುತ್ತದೆ? ಆದ್ದರಿಂದ ತಾಲಿಬಾನಿಗಳ ಕಣ್ಣಿಗೆ ಕಾಣದಂತೆ ಜೀವಭಯದಿಂದ ಬೇರೊಂದು ಮಾರ್ಗದಲ್ಲಿ ಓಡಿಹೋದೆ. ಕಾರು, ಟ್ಯಾಕ್ಸಿ ಎಲ್ಲರನ್ನೂ ಕೈಮಾಡಿ ನಿಲ್ಲಿಸುವಂತೆ ಬೇಡಿಕೊಂಡೆ. ಆದರೆ ಯಾರೂ ನನ್ನ ನೆರವಿಗೆ ಬರಲಿಲ್ಲ.

    ಎಲ್ಲಿ ಹೋಗುವುದು ಎಂದೇ ತಿಳಿಯಲಿಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ನನ್ನ ಜೀವ ಹೋಗಬಹುದಿತ್ತು. ಹೇಗೋ ತಪ್ಪಿಸಿಕೊಂಡು ಮನೆಯೊಳಕ್ಕೆ ಬಂದೆ. ಕೂಡಲೇ ನನ್ನ ಅಕ್ಕ ಎಲ್ಲಿಂದಲೋ ಬುರ್ಖಾ ತಂದಿದ್ದಳು. ಅದನ್ನು ಧರಿಸಿಕೊಂಡೆ. ನನ್ನ ಡಿಗ್ರಿ ಸರ್ಟಿಫಿಕೇಟ್​, ಮೆಡಲ್​ಗಳನ್ನೆಲ್ಲಾ ತಾಲಿಬಾನಿಗಳು ನೋಡಬಾರದು ಎಂದು ಅಡಗಿಸಿಟ್ಟೆ. ಈಗ ಅವುಗಳನ್ನು ಸುಡುವುದೊಂದೇ ಬಾಕಿ. ಈ ಹುದ್ದೆ ಏರಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ಇನ್ನು ಮುಂದೆ ನನಗೆ ಮನೆಯೇ ಗತಿ. ಇನ್ನು ನನ್ನ ಸಹೋದ್ಯೋಗಿಗಳಿಗೆ ಸಂದೇಶ ರವಾನಿಸಿ ಇನ್ನುಮುಂದೆ ನಾನು ನಿಮ್ಮನ್ನು ನೋಡಲಾಗದು ಎಂದು ಕಣ್ಣೀರು ಸುರಿಸಿದೆ. ಏಕೆಂದರೆ ಇನ್ನುಮುಂದೆ ನಾವು ತಾಲಿಬಾನಿಗಳ ಹಿಡಿತಕ್ಕೆ ಒಳಪಟ್ಟವರು. ಹೆಣ್ಣುಮಕ್ಕಳು ಬುರ್ಖಾ ಧರಿಸಿ ಮನೆಯಲ್ಲಿಯೇ ಇರಬೇಕು, ಮನೆಯಿಂದ ಹೊರಕ್ಕೆ ಹೋಗುವಂತೆ ಇರಲಿಲ್ಲ. ಹೋದರೆ ಅಲ್ಲಿಯೇ ಕೊಲೆ ಮಾಡಲಾಗುತ್ತದೆ.

    ಹೀಗೆಂದು ಆಸೀಫಾ ಎಂಬ ಮಹಿಳೆ ತಾನು ಅನುಭವಿಸಿರುವ ಭಯಾನಕ ಘಟನೆಯನ್ನು ಮಾಧ್ಯಮಗಳೆದುರು ಬಿಚ್ಚಿಟ್ಟಿದ್ದಾರೆ. ಅಫ್ಘನ್​ ಅಧ್ಯಕ್ಷ ತಮ್ಮ ಹುದ್ದೆಯನ್ನು ತೊರೆದು ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನಿಗಳಿಗೆ ಹಸ್ತಾಂತರ ಮಾಡುವ ಮುನ್ನ ಇಂಥದ್ದೊಂದು ಹೇಳಿಕೆಯನ್ನುಆಸೀಫಾ ನೀಡಿದ್ದಾಳೆ.

    ತಾಲಿಬಾನ್‌ನ 1996-2001ರ ಆಳ್ವಿಕೆಯಲ್ಲಿ, ಪುರುಷರು ತಮ್ಮ ಗಡ್ಡವನ್ನು ತೆಗೆಯಲು ಅನುಮತಿ ನೀಡಲಿಲ್ಲ ಮತ್ತು ಮಹಿಳೆಯರು ಸಾರ್ವಜನಿಕವಾಗಿ ಸಂಪೂರ್ಣವಾಗಿ ಆವರಿಸಿರುವ ಬುರ್ಖಾ ವಸ್ತ್ರವನ್ನು ಧರಿಸಬೇಕಾಗಿತ್ತು. ಆದ್ದರಿಂದ ಹಕೀಮ್​ ಎನ್ನುವವರು ಮಾತನಾಡಿ, ನನ್ನ ಮೊದಲ ಕಾಳಜಿ ನನ್ನ ಗಡ್ಡವನ್ನು ಬೆಳೆಸುವುದು ಮತ್ತು ಅದನ್ನು ಹೇಗೆ ವೇಗವಾಗಿ ಬೆಳೆಯುವುದು ಹಾಗೂ ನನ್ನ ಹೆಂಡತಿ ಮತ್ತು ಹೆಣ್ಣು ಮಕ್ಕಳ ಬಳಿ ಸಾಕಷ್ಟು ಬುರ್ಖಾ ಇದೆಯೇ ಎಂದು ನಾನು ಪರಿಶೀಲಿಸಿದೆ ಎಂದಿದ್ದಾರೆ.

    ‘ನಾನು ಆ ಕ್ಷಣ ನಿರ್ಧಾರ ತೆಗೆದುಕೊಳ್ಳದಿದ್ದರೆ ಲಕ್ಷಾಂತರ ಹೆಣಗಳು ಉರುಳುತ್ತಿದ್ದವು, ರಕ್ತದ ಹೊಳೆ ಹರಿಯುತ್ತಿತ್ತು’

    ಕಾಬುಲ್‌ ವಿಮಾನ ನಿಲ್ದಾಣದಲ್ಲಿ ಶೂಟ್‌ಔಟ್‌: ಐವರ ಸಾವು- ಪ್ರಾಣ ಉಳಿಸಿಕೊಳ್ಳಲು ಬಂದು ಹೆಣವಾದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts