More

    78ರ ವೃದ್ಧನಿಗೆ 17ರ ಬಾಲಕಿ ಜತೆ ಮದುವೆ- 22ನೇ ರಾತ್ರಿ ಅಜ್ಜ ಕೊಟ್ಟ ಡಿವೋರ್ಸ್!

    ಜಕಾರ್ತಾ (ಇಂಡೋನೇಷ್ಯಾ): ಇಂಡೋನೇಷ್ಯಾದ ಜಕಾರ್ತಾದಲ್ಲಿ ಅಚ್ಚರಿ ಎನ್ನುವಂಥ ಅಷ್ಟೇ ವಿಚಿತ್ರವೂ ಆಗಿರುವ ಮದುವೆ ಘಟನೆಯೊಂದು ನಡೆದಿದೆ.

    ಅದೇನೆಂದರೆ, ಇಲ್ಲಿ ವರ 78 ವರ್ಷದ ಅಜ್ಜ ಅಬಾ ಸರನಾ. ವಧು 17 ವರ್ಷದ ಬಾಲಕಿ ನೋನಿ ನವಿತಾ. ಇವರ ಮದುವೆಯನ್ನು ಕಳೆದ ತಿಂಗಳು ಕುಟುಂಬಸ್ಥರು ನೆರವೇರಿಸಿದ್ದಾರೆ. ತನ್ನ ಅಜ್ಜನ ವಯಸ್ಸಿನವನ ಜತೆ ಬಾಲಕಿಯ ಮದುವೆ ನಡೆಯುತ್ತಿರುವುದು ಆಗ ಬಹು ಸುದ್ದಿಗೆ ಗ್ರಾಸವಾಗಿತ್ತು, ಇದು ಚರ್ಚೆಯ ವಿಷಯವಾಗಿತ್ತು.

    ಆದರೆ ಈ ಮದುವೆ ಈಗ ಮದುವೆಯಾದ 22ನೇ ದಿನಕ್ಕೆ ಮತ್ತೆ ಚರ್ಚೆಯ ವಸ್ತುವಾಗಿದೆ. ಏಕೆಂದರೆ ಮದುವೆಯಾಗಿ 22ನೇ ರಾತ್ರಿ ಅಜ್ಜ ತನ್ನ ಹೆಂಡತಿಗೆ ಡಿವೋರ್ಸ್‌ ಕೊಡುವುದಾಗಿ ಹೇಳಿದ್ದಾನೆ. ಮಾತ್ರವಲ್ಲದೇ ವಿಚ್ಛೇದನಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದಾನೆ!

    78ರ ವೃದ್ಧನಿಗೆ 17ರ ಬಾಲಕಿ ಜತೆ ಮದುವೆ- 22ನೇ ರಾತ್ರಿ ಅಜ್ಜ ಕೊಟ್ಟ ಡಿವೋರ್ಸ್! ಇಲ್ಲಿ ಬಲಿಪಶುವಾಗಿದ್ದು ಬಾಲಕಿ. ಮದುವೆಗೆ ಆಕೆಯ ಅನುಮತಿ ಕೇಳಿದ್ದರೋ, ಇಲ್ಲವೋ ತಿಳಿಯದು. ಆದರೆ ಬೊಚ್ಚುಬಾಯಿ ಅಜ್ಜ ಮತ್ತು ಆತನ ಕುಟುಂಬಸ್ಥರು ಹಾಗೂ ಬಾಲಕಿಯ ಕುಟುಂಬದವರು ಮಾತ್ರ ಈ ಮದುವೆಯನ್ನು ಖುಷಿಯಿಂದ ಮಾಡಿಸಿಕೊಟ್ಟಿದ್ದರು.

    ತನ್ನ ಮೊಮ್ಮಗಳ ವಯಸ್ಸಿನ ಹೆಂಡತಿಯನ್ನು ಕಂಡು ಖುಷಿಯಿಂದ ಬೀಗುತ್ತಿದ್ದ ಈ ಅಜ್ಜ ಇದೀಗ ವಿಚ್ಛೇದನಕ್ಕೆ ಮುಂದಾಗಿರುವುದಾಗಿ ಬಾಲಕಿಯ ಮನೆಯವರಿಗೆ ಶಾಕ್‌ ಆಗಿದೆ. ಇಬ್ಬರ ಕುಟುಂಬದವರಿಗೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಆತ ಏಕೆ ಹೀಗೆ ಮಾಡಿದ ಎನ್ನುವುದೇ ತಿಳಿಯುತ್ತಿಲ್ಲ ಎಂದೇ ಎಲ್ಲರೂ ಹೇಳುತ್ತಿದ್ದಾರೆ.

    78ರ ವೃದ್ಧನಿಗೆ 17ರ ಬಾಲಕಿ ಜತೆ ಮದುವೆ- 22ನೇ ರಾತ್ರಿ ಅಜ್ಜ ಕೊಟ್ಟ ಡಿವೋರ್ಸ್!
    ಆದರೆ ಅಜ್ಜ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಕುತೂಹಲದ ಕಾರಣವೂ ಇದೆಯಂತೆ. ಅದೇನೆಂದರೆ 17 ವರ್ಷದ ಬಾಲಕಿ ನೋನಿ ಈ ಅಜ್ಜನನ್ನು ಮದುವೆಯಾಗುವ ಮುನ್ನವೇ ಗರ್ಭಿಣಿಯಾಗಿದ್ದಳಂತೆ. ಈ ವಿಷಯ ತಿಳಿಯುತ್ತಲೇ ಅಜ್ಜ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ.

    ಇಂಡೋನೇಷಿಯಾದಲ್ಲಿ ವಧುದಕ್ಷಿಣೆ ಪದ್ಧತಿ ಜಾರಿಯಲ್ಲಿದೆ ಇದೆ. ಈ ಮದುವೆಯ ಸಂದರ್ಭದಲ್ಲಿ ಅಬಾ ತನ್ನ ಹೆಂಡತಿ ಮನೆಯವರಿಗೆ ಆರ್‍ಎಂ 2,819(ಸುಮಾರು 50 ಸಾವಿರ ರೂ.), ಮೋಟರ್ ಸೈಕಲ್, ಹಾಸಿಗೆ ಮೊದಲಾದವುಗಳನ್ನು ನೀಡಿದ್ದರು.

    ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ವಧುದಕ್ಷಿಣೆಯನ್ನು ಸಹ ವಾಪಸ್ ಪಡೆದಿದ್ದಾನಂತೆ.

    ರೋಚಕ ಘಟ್ಟದಲ್ಲಿ ಅಮೆರಿಕ ಚುನಾವಣೆ: ರಸ್ತೆರಸ್ತೆಗಳಲ್ಲಿ ಭುಗಿಲೆದ್ದ ಹಿಂಸಾಚಾರ

    ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಕಪ್ಪು ಹುಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts