More

    70 ಲಕ್ಷ ಭಾರತೀಯರ ಡೆಬಿಟ್-ಕ್ರೆಡಿಟ್​ ಕಾರ್ಡ್​ ಸೇರಿದಂತೆ ಹಣಕಾಸಿನ ಪಿನ್​ ಟು ಪಿನ್​ ಮಾಹಿತಿ ಸೋರಿಕೆ!

    ನವದೆಹಲಿ: ತಂತ್ರಜ್ಞಾನ ಮುಂದುವರೆದಂತೆ ಅದರ ದುರುಪಯೋಗವೇ ಹೆಚ್ಚುತ್ತಾ ಹೋಗುತ್ತಿದೆ. ಅದೇ ರೀತಿ ಆತಂಕದ ವರದಿಯನ್ನು ಇಂಟರ್​ನೆಟ್​ ಭದ್ರತಾ ಸಂಶೋಧಕರು ನೀಡಿದ್ದಾರೆ. ಇವರು ನೀಡಿರುವ ಮಾಹಿತಿಯ ಪ್ರಕಾರ ಸುಮಾರು 70 ಲಕ್ಷ ಭಾರತೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ದಾರರ ವೈಯಕ್ತಿಕ ಮಾಹಿತಿಡಾರ್ಕ್ ವೆಬ್ ನಲ್ಲಿ ಸೋರಿಕೆಯಾಗಿದೆ!

    ಸೋರಿಕೆಯಾದ ವಿವರಗಳಲ್ಲಿ ಬಳಕೆದಾರರ ಹೆಸರು, ದೂರವಾಣಿ ಸಂಖ್ಯೆಗಳು, ಇ-ಮೇಲ್ ವಿಳಾಸಗಳು, ಅವರು ಎಲ್ಲಿ ಕೆಲಸ ಮಾಡುತ್ತಾರೆ, ಆ ಸಂಸ್ಥೆ ಎಲ್ಲಿದೆ, ಬಳಕೆದಾರರ ವಾರ್ಷಿಕ ಆದಾಯ ಎಷ್ಟಿದೆ… ಹೀಗೆ ಹಣಕಾಸಿಗೆ ಸಂಬಂಧಿಸಿದ ಪಿನ್​ ಟು ಪಿನ್​ ಮಾಹಿತಿಯು ಸೋರಿಕೆಯಾಗಿದ್ದು, ಇದು ಆತಂಕದ ವಿಷಯ ಎಂದು ಭದ್ರತಾ ಸಂಶೋಧಕ ರಾಜಶೇಖರ ರಾಜ್​ಹರಿಯಾ ತಿಳಿಸಿದ್ದಾರೆ.
    2 ಜಿಬಿ ಗಾತ್ರದ, ಬಳಕೆದಾರ ಖಾತೆಗಳ ವಿಧಗಳು ಮತ್ತು ಅವರು ಮೊಬೈಲ್‌ನಲ್ಲಿ ಎಚ್ಚರಿಕೆಗಳನ್ನು ಆನ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಈ ಮಾಹಿತಿ ಒಳಗೊಮಡಿದೆ.

    2010ರಿಂದ 2019ರ ವರೆಗಿನ ಅವಧಿಯಲ್ಲಿ ದತ್ತಾಂಶಗಳು ಸ್ಕ್ಯಾಮರ್​ಗಳು ಮತ್ತು ಹ್ಯಾಕರ್​ಗಳಿಗೆ ಅತ್ಯಂತ ಮೌಲ್ಯಯುತವಾದುದಾಗಿದ್ದು, ಇವೆಲ್ಲವೂ ಇದೀಗ ಹ್ಯಾಕರ್​ಗಳ ಕೈ ಸೇರಿದೆ. ಸೋರಿಕೆಯಾದ ಡೇಟಾಬೇಸ್, 2 ಜಿಬಿ ಗಾತ್ರದ, ಬಳಕೆದಾರ ಖಾತೆಗಳ ವಿಧಗಳು ಮತ್ತು ಅವರು ಮೊಬೈಲ್‌ನಲ್ಲಿ ಎಚ್ಚರಿಕೆಗಳನ್ನು ಆನ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.

    ಸೋರಿಕೆಯಾದ ದತ್ತಾಂಶಗಳಲ್ಲಿ ಸುಮಾರು ಐದು ಲಕ್ಷ ಕಾರ್ಡ್ ದಾರರ ಪ್ಯಾನ್ ಸಂಖ್ಯೆಗಳೂ ಸಹ ಸೇರಿವೆ. ಇದು ಹಣಕಾಸಿನ ದತ್ತಾಂಶವಾಗಿರುವುದರಿಂದ, ಸುಲಭದಲ್ಲಿ ಬಳಕೆದಾರರ ವೈಯಕ್ತಿಕ ಸಂಪರ್ಕ ವಿವರಗಳನ್ನು ಹ್ಯಾಕರ್​ಗಳು ಬಳಸಿ ಮೋಸ ಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

    ಇಂಟರ್​ನೆಟ್​ನಲ್ಲಿ ಅತ್ಯಂತ ದುಬಾರಿ ಡೇಟಾ ಎಂದರೆ ಹಣಕಾಸು ದತ್ತಾಂಶ. ಆದರೆ ಇದೇ ಈಗ ಸೋರಿಕೆ ಆಗಿರುವ ಸಾಧ್ಯತೆ ಇರುವುದು ಬಹಳ ಅಪಾಯಕಾರಿಯಾಗಿದೆ. ಫಿಶಿಂಗ್ ಅಥವಾ ಇತರ ದಾಳಿಗಳಿಗೆ ವೈಯಕ್ತಿಕ ಸಂಪರ್ಕ ವಿವರಗಳನ್ನು ಬಳಸಿ ಮೋಸ ಮಾಡುವ ಸಾಧ್ಯತೆ ಇದೆ ಎಂದು ರಾಜ್​ಶೇಖರ್​ ಹೇಳಿದ್ದಾರೆ.

    ಏಲಿಯನ್ ಜತೆ ಅಮೆರಿಕ ಒಪ್ಪಂದ​: ವಿಶ್ವಖ್ಯಾತಿ ಇಸ್ರೇಲ್​ ವಿಜ್ಞಾನಿಯಿಂದ ಅಚ್ಚರಿಯ ಮಾಹಿತಿ

    ಪತ್ನಿಯ ಮೇಲಿನ ಸಿಟ್ಟಿನಿಂದ 450 ಕಿ.ಮೀ ನಡೆದ ಪತಿರಾಯ ಪೊಲೀಸರಿಂದ ದಂಡ ಹಾಕಿಸಿಕೊಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts