More

    35 ವರ್ಷಗಳ ಹಿಂದೆ ಬರೆದ ಲವ್‌ಲೆಟರ್‌ ನದಿಯಲ್ಲಿ ತೇಲುತ್ತ ಪ್ರೇಮಿಯ ಕೈಸೇರಿತು!

    ಮಿಲ್ಟನ್ (ಕೆನಡಾ): ಪ್ರೇಮ ಅಮರ, ಪ್ರೇಮ ಮಧುರ ಎನ್ನುತ್ತಾರೆ. ಇದೇ ಮಾತಿಗೆ ಪುಷ್ಟಿ ನೀಡಲು ಎಂಬಂತೆ 35 ವರ್ಷಗಳ ಹಿಂದೆ ಪ್ರೇಯಸಿ ಬರೆದಿರುವ ಪ್ರೇಮ ಪತ್ರವೊಂದು ಇದೀಗ ಪ್ರೇಯಸಿಯ ಕೈಸೇರಿರುವ ಘಟನೆ ನಡೆದಿದೆ.

    ಅಷ್ಟಕ್ಕೂ ಅಂಚೆಯಲ್ಲಿ 35 ವರ್ಷಗಳ ಹಿಂದೆ ಬರೆದ ಪತ್ರ ಇದೀಗ ಕೈಸೇರಿದ್ದಲ್ಲ. ಬದಲಿಗೆ ನದಿಯ ನೀರಿನಲ್ಲಿ ತೇಲಿ ಬಂದು ಈ ಪತ್ರ ಸಿಕ್ಕಿದೆ ಎಂದರೆ ನಂಬುವಿರಾ?

    ನಂಬಲೇಬೇಕು. ಅಂಥದ್ದೊಂದು ಮ್ಯಾಜಿಕ್‌ ಆಗಿರುವುದು ಕೆನಡಾದ ಮಿಲ್ಟನ್‌ ನಗರದಲ್ಲಿ. ಇಲ್ಲಿನ ಡೆಲವೇರ್ ನದಿಯಲ್ಲಿ ಈ ಪತ್ರವೊಂದು ಸಿಕ್ಕಿದೆ.

    ಅಷ್ಟಕ್ಕೂ ಆಗಿರುವುದು ಏನೆಂದರೆ, 1985ರ ಸಮಯ. ಕ್ಯಾಥಿ ರಿಡಲ್ ಮತ್ತು ಅವಳ ಸೋದರಸಂಬಂಧಿ ಸ್ಟೇಸಿ ವೆಲ್ಸ್ ಇಬ್ಬರೂ ಪ್ರೀತಿಸುತ್ತಿದ್ದರು. ಆಗಸ್ಟ್ 1ನೇ ತಾರೀಖಿನಂದು ಇಬ್ಬರೂ ಡೆಲವೇರ್ ನದಿಯ ದಡದಲ್ಲಿ ವಿಹರಿಸುತ್ತಿದ್ದರು.

    ತಾವಿಬ್ಬರೂ ಎಷ್ಟು ಪ್ರೀತಿಸುತ್ತಿದ್ದೇವೆ ಎಂದು ನೋಡಲು ಒಂದು ಯೋಜನೆ ರೂಪಿಸಿದರು. ತಮ್ಮ ತಮ್ಮ ಪ್ರೀತಿಯ ನಿವೇದನೆಯನ್ನು ಇಬ್ಬರೂ ಒಂದೊಂದು ಕಾಗದದಲ್ಲಿ ಬರೆದಿಟ್ಟು ಬಾಟಲಿ ಒಂದರಲ್ಲಿ ಅದನ್ನು ಸುತ್ತಿ ನದಿಯಲ್ಲಿ ತೇಲಿಬಿಟ್ಟರು.

    ಯಾರ ಬಾಟಲಿ ಹೆಚ್ಚು ದೂರ ತೇಲುತ್ತ ಹೋಗುತ್ತದೆಯೋ ಅವರು ಇನ್ನೊಬ್ಬರನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಇವರೇ ಹೇಳಿಕೊಂಡರು. ಇಬ್ಬರೂ ಆ ಪತ್ರದಲ್ಲಿ ಹೆಸರು, ವಿಳಾಸ ಎಲ್ಲವನ್ನೂ ಬರೆದಿಟ್ಟಿದ್ದರು.

    ಆದರೆ ಇಬ್ಬರ ಬಾಟಲಿಗಳೂ ಬಲು ದೂರ ಹೋಗುವ ಮೊದಲೇ ಮುಳುಗಿ ಹೋಯಿತು. ಇಬ್ಬರೂ ನಿರಾಸೆಯಾಗಿ ಹಿಂದಿರುಗಿದರು.

    ಇದನ್ನೂ ಓದಿ:  ಸೀತೆಯ ಕುರಿತು ಅಶ್ಲೀಲವಾಗಿ ಮಾತನಾಡಿ ಗಲಭೆ ಸೃಷ್ಟಿಸಲು ಹೋದಾಕೆ ಕೊನೆಗೂ ಸಿಕ್ಕಿಬಿದ್ದಳು

    ವರ್ಷ ಕಳೆದಂತೆ ಇಬ್ಬರೂ ಬೇರೆಬೇರೆಯಾದರು. ಈ ಘಟನೆ ಸಂಭವಿಸಿ ಇದೀಗ ಮೂರುವರೆ ದಶಕ ಕಳೆದಿದೆ. 2-3 ದಿನಗಳ ಹಿಂದೆ ಈ ನದಿಯಲ್ಲಿ ಏನೋ ಬಾಟಲಿ ತೇಲುತ್ತಿರುವುದನ್ನು ಬ್ರಾಡ್ ವಾಚ್‌ಸ್ಮತ್ ಗಮನಿಸಿದರು. ಸಾಮಾನ್ಯವಾಗಿ ನದಿಗಳಲ್ಲಿ ಕಸ ಎಸೆಯುವವರು ಈ ಬಾಟಲಿ ಎಸೆದಿರಬಹುದು ಎಂದು ಅಂದುಕೊಂಡರು. ನದಿಯ ತೀರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಬ್ರಾಡ್‌ ವಾಚ್‌ಸ್ಮತ್‌ ಅವರು ಈ ಬಾಟಲಿಯನ್ನು ಕೂಡ ಕಸವೆಂದು ತೆಗೆಯಲು ಮುಂದಾದರು.

    ಆದರೆ ಇದರ ಒಳಗೆ ಒಂದು ಪತ್ರ ಇರುವುದು ಕಾಣಿಸಿತು. ಅದನ್ನು ಓದಿದಾಗ ಅದರಲ್ಲಿ ಕ್ಯಾಥಿ ರಿಡಲ್ ಎಂಬಾಕೆ ತನ್ನ ಪ್ರಿಯತಮ ಸ್ಟೇಸಿ ವೆಲ್ಸ್‌ ಎಂಬಾತನಿಗೆ ಪ್ರೇಮ ನಿವೇದನೆ ಮಾಡಿಕೊಂಡಿರುವುದು ತಿಳಿಯಿತು. ಅದರಲ್ಲಿರುವ ವಿಳಾಸವನ್ನು ಪತ್ತೆ ಮಾಡಿದ ಬ್ರಾಡ್‌, ಅದನ್ನು ಇದೀಗ ಸ್ಟೇಸಿ ವೆಲ್ಸ್‌ಗೆ ಮುಟ್ಟಿಸಿದ್ದಾರೆ.

    ಆ ಪತ್ರವನ್ನು ಇಟ್ಟುಕೊಂಡು ತನ್ನ ಪ್ರೇಯಸಿಯ ನೆನಪು ಮಾಡಿಕೊಳ್ಳುತ್ತಿರುವ ಕ್ಯಾಥಿ, ಹಿಂದಿನ ದಿನಗಳನ್ನು ಮೆಲುಕು ಹಾಕುತ್ತಾ ಈ ಪತ್ರದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
    ನಾವು ಪ್ರೇಮ ನಿವೇದನೆಯನ್ನು ಇದರಲ್ಲಿ ಬರೆದು ಅದು ಎಷ್ಟು ದೂರ ಹೋಗಿದೆ ಎಂದು ನೋಡೋಣ ಎಂದುಕೊಂಡಿದ್ದೆವು. ಆದರೆ ಇದು ದೂರ ಮಾತ್ರವಲ್ಲ… ಇಡೀ ಪ್ರಪಂಚವನ್ನೇ ಸುತ್ತಿ ಬಂದಂತಿದೆ ಎಂದು ಭಾವುಕರಾಗಿದ್ದಾರೆ.

    ಕರೊನಾ: ಬೆಂಗಳೂರು ಫಸ್ಟ್‌, ಕೊಡಗು ಲಾಸ್ಟ್‌- ನಿಮ್ಮ ಜಿಲ್ಲೆಯ ಮಾಹಿತಿ ನೋಡಿ…

    ಪಿಪಿಇ ಕಿಟ್‌ ಹಾಗೂ ಮುಟ್ಟಿನ ದಿನಗಳು: ಕರೊನಾ ವಾರಿಯರ್ಸ್‌ ನೋವನ್ನು ಬಿಚ್ಚಿಟ್ಟ ವೈದ್ಯೆಯರು

    ಸೀತೆಯ ಕುರಿತು ಅಶ್ಲೀಲವಾಗಿ ಮಾತನಾಡಿ ಗಲಭೆ ಸೃಷ್ಟಿಸಲು ಹೋದಾಕೆ ಕೊನೆಗೂ ಸಿಕ್ಕಿಬಿದ್ದಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts