More

    ಪೊಲೀಸರಿಗೆ ₹200 ದಂಡ ಕೊಡದೇ ವಕೀಲರಿಗೆ ₹10 ಸಾವಿರ ಫೀಸ್‌ ಕೊಟ್ಟು ಕೇಸ್‌ ಗೆದ್ದ ಉದ್ಯಮಿ!

    ಪುಣೆ: ಕೋರ್ಟ್‌ನಲ್ಲಿ ಕೇಸ್‌ ಹಾಕಿ ಗೆದ್ದವ ಸೋತ… ಸೋತವ ಸತ್ತ ಎನ್ನುವ ನಾಣ್ಣುಡಿಯೇ ಇದೆ. ಕೇಸಿಗೆ ಅನುಗುಣವಾಗಿ ಹಲವು ವಕೀಲರಿಗೆ ನೀಡಬೇಕಾಗುವ ದುಬಾರಿ ಫೀಸ್‌ ಹಿನ್ನೆಲೆಯಲ್ಲಿ ಇಂಥದ್ದೊಂದು ನಾಣ್ಣುಡಿ ಬಂದಿದೆ. ಆದರೆ ಕೆಲವರಿಗೆ ಜಿದ್ದು ಎಷ್ಟು ಇರುತ್ತದೆ ಎಂದರೆ, ಎಷ್ಟೇ ಖರ್ಚಾದರೂ ಪರವಾಗಿಲ್ಲ, ನಾನು ಸರಿ ಎಂಬುದು ಸಾಬೀತು ಆಗಬೇಕು ಎಂದು ಹಠ ಬೀಳುತ್ತಾರೆ.

    ಅಂಥದ್ದೇ ಒಂದು ಹಠದಿಂದಾಗಿ ಉದ್ಯಮಿಯೊಬ್ಬರು ಇದೀಗ ಭಾರಿ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ, ಇವರು ಟ್ರಾಫಿಕ್‌ ರೂಲ್ಸ್‌ ಉಲ್ಲಂಘನೆ ಮಾಡಿದ್ದಕ್ಕಾಗಿ 200 ರೂಪಾಯಿ ದಂಡ ನೀಡಬೇಕು ಎಂದು ಟ್ರಾಫಿಕ್‌ ಪೊಲೀಸರು ಹೇಳಿದ್ದರು. ಅದರೆ ತಾವು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಸಾಬೀತು ಮಾಡಲು ಕೋರ್ಟ್‌ಗೆ ಕೇಸ್‌ ಹಾಕಿದ ಈ ಉದ್ಯಮಿ ಕೇಸ್‌ ಗೆದ್ದಿದ್ದಾರೆ. ಆದರೆ 10 ಸಾವಿರ ರೂಪಾಯಿ ಫೀಸ್‌ ಖರ್ಚು ಮಾಡಿದ್ದಾರೆ.

    ಈ ಘಟನೆ ನಡೆದಿರುವುದು ಪುಣೆಯಲ್ಲಿ. 45 ವರ್ಷದ ಉದ್ಯಮಿ ಬಿನಾಯ್‌ ಗೋಪಾಲನ್ ಅವರು ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಇವರಿಗೆ ನೋ ಪಾರ್ಕಿಂಗ್‌ ಸ್ಥಳದಲ್ಲಿ ಬೈಕ್ ಪಾರ್ಕ್ ಮಾಡಿದ್ದಕ್ಕೆ ಪಿಂಪ್ರಿ-ಚಿಂಚಿವಾಡ್ ಠಾಣಾ ಪೊಲೀಸರು 200 ರೂಪಾಯಿ ದಂಡ ಹಾಕಿದ್ದರು. ಆದರೆ ತಾವು ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ದಂಡ ಕೊಡಲಿಲ್ಲ ಬಿನಾಯ್‌.

    ಇದಕ್ಕೆ ಕಾರಣ ಎಂದರೆ ಇವರು ನಿಜವಾಗಿಯೂ ನೋ ಪಾರ್ಕಿಂಗ್‌ ಜಾಗದಲ್ಲಿಯೇ ಪಾರ್ಕ್‌ ಮಾಡಿದ್ದರು. ಆದರೆ ತಪ್ಪು ಅವರದ್ದಾಗಿರಲಿಲ್ಲ. ಏಕೆಂದರೆ ನೋ ಪಾರ್ಕಿಂಗ್‌ ಝೋನ್ ಎಂಬ ಬೋರ್ಡ್ ಸರಿಯಾಗಿ ಕಾಣುತ್ತಿಲ್ಲ. ನೋ ಪಾರ್ಕಿಂಗ್‌ ಬದಲು ಅಲ್ಲಿದ್ದ ಚಿಹ್ನೆ ಇದು ಇತ್ತ ಕಡೆ ಪಾರ್ಕ್ ಮಾಡಬಹುದು ಎಂದು ಸೂಚಿಸುವಂತಿತ್ತು. ಆದ್ದರಿಂದ ತಪ್ಪು ತಮ್ಮದಲ್ಲ ಎನ್ನುವುದು ಅವರ ವಾದ. ಅದಕ್ಕಾಗಿ ಕೋರ್ಟ್‌ಗೆ ಹೋದರು.

    ಪಾರ್ಕಿಂಗ್ ಬೋರ್ಡ್ ಡ್ಯಾಮೇಜ್ ಆಗಿರುವುದು ತನ್ನ ತಪ್ಪಲ್ಲ, ಹೀಗಾಗಿ ಈ ಚಲನ್ ರದ್ದು ಮಾಡಬೇಕು ಎಂದು ಪೊಲೀಸರಿಗೆ ಕೋರಿಕೊಂಡರೂ ಅವರು ಕೇಳದಿದ್ದ ಕಾರಣಕ್ಕೆ ಕೊನೆಯದಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಕೋರ್ಟ್‌ನಲ್ಲಿ ವಿಚಾರಣೆ ಬಳಿಕ ಕೇಸ್‌ ಗೆದ್ದರು. ಆದರೆ 10 ಸಾವಿರ ರೂ. ಫೀಸ್‌ ವಕೀಲರಿಗೆ ಕೊಟ್ಟರು.

    ಈ ಕುರಿತು ಮಾತನಾಡಿದ ಬಿಯಾಯ್‌ ನಾನು 200 ರೂಪಾಯಿ ದಂಡವನ್ನು ಕಟ್ಟಿ ಸುಮ್ಮನಾಗ ಬಹುದಿತ್ತು. ಆದರೆ ಪೊಲೀಸರ ವರ್ತನೆ ನನ್ನನ್ನೇ ತಪ್ಪಿತಸ್ಥನ ಸ್ಥಾನದಲ್ಲಿ ಕೂರಿಸುತ್ತಿತ್ತು. ಹೀಗಾಗಿ ನಾನು ಹಣ ಖರ್ಚು ಆದರೂ ಹೋರಾಟ ಮಾಡಿ ಕೇಸ್ ಗೆದ್ದಿದ್ದೇನೆ. ಈ ಖುಷಿ ನನ್ನಲ್ಲಿದೆ ಎಂದಿದ್ದಾರೆ.

    ಲಾಕ್‌ಡೌನ್‌ ಅವಧಿಯಲ್ಲಿನ ಬಡ್ಡಿ, ಚಕ್ರಬಡ್ಡಿ ಮನ್ನಾ ವಿವಾದ: ಸುಪ್ರೀಂ‌ಕೋರ್ಟ್‌ ಏನು ಹೇಳಿದೆ ನೋಡಿ…

    ಕುಡಿದು ಸತ್ತರೆ ವಿಮೆ ಹಣ ಸಿಗಲ್ಲ: ಮಹತ್ವದ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಏನು ಹೇಳಿದೆ ನೋಡಿ…

    ಗಂಡ ಗಿಫ್ಟ್‌ ಕೊಡಿಸ್ತಾರೆ, ಸುತ್ತಾಡಿಸ್ತಾರೆ… ಆದ್ರೆ ಅಸಲಿ ಮುಖ ಭಯಾನಕ- ಅವರಿಂದ ಹೇಗೆ ಮುಕ್ತಿ ಪಡೆಯಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts