More

    ಹಾಡು ಕೇಳಲು ಹಾಕಿದ್ದ ಡಿಜೆ ಸಿಸ್ಟಮ್​ 10 ಮಂದಿಯ ಬಲಿ ಪಡೆಯಿತು! ಪಿಕಪ್​ ವಾಹನದಲ್ಲಿ ದುರ್ಘಟನೆ

    ಕೂಚ್​ಬೆಹಾರ್ (ಪಶ್ಚಿಮ ಬಂಗಾಳ): ಹಾಡು ಹಾಕಲೆಂದು ಪಿಕಪ್ ವಾಹನಕ್ಕೆ ಅಳವಡಿಸಿದ್ದ ಡಿಜೆ ಸಿಸ್ಟಮ್ 10 ಮಂದಿಯನ್ನು ಬಲಿ ಪಡೆದಿರುವ ಘಟನೆ ಪಶ್ಚಿಮ ಬಂಗಾಳದ ಕೂಚ್​ ಬೆಹಾರ್ ಜಿಲ್ಲೆಯಲ್ಲಿ ಜಲ್ಪೇಶ್​ ಬಳಿ ನಡೆದಿದೆ.

    ಜಲ್ಪೇಶ್​ಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ. ವಾಹನದಲ್ಲಿದ್ದ 10 ಮಂದಿ ಪ್ರಯಾಣಿಕರು ಬೆಂಕಿಗೆ ದಹಿಸಿ ಹೋಗಿದ್ದರೆ, 16 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಲ್​ಪೈಗುರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮೆಖ್ಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಡಿಜೆ ಸಿಸ್ಟಮ್​ಗಾಗಿ ಬಳಸುತ್ತಿದ್ದ ಜನರೇಟರ್​ನ ವೈರಿಂಗ್​ನಲ್ಲಿ ಉಂಟಾದ ಸಮಸ್ಯೆಯೇ ಈ ಅನಾಹುತಕ್ಕೆ ಕಾರಣ. ಜನರೇಟರ್ ಅನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಲಾಗಿತ್ತು ಎಂದು ಮಾತಭಂಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ವರ್ಮಾ ಹೇಳಿದರು.

    ಘಟನೆಗೆ ಕಾರಣವಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ. ಮೃತರು ಮತ್ತು ಗಾಯಾಳುಗಳೆಲ್ಲರೂ ಸಿತಾಲ್​ಕುಚಿ ಪ್ರದೇಶಕ್ಕೆ ಸೇರಿದವರು. ಎಲ್ಲರ ಕುಟುಂಬಗಳಿಗೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. (ಏಜೆನ್ಸೀಸ್​)

    ಪುರುಷನ ಆ ಅಂಗದ ಮೇಲೆ 99ರ ಅಜ್ಜಿಗೆ ಇದೆಂಥ ಪ್ರೀತಿ! ಕೊನೆಯ ಆಸೆ ಕೇಳಿ ಎಲ್ಲರೂ ಶಾಕ್​, ಈಡೇರಿಸಿದರು ಬಯಕೆ…

    ಅವನು ಇಲ್ಲಿ ಬರಲಾರ, ಇವಳು ಅಲ್ಲಿ ಹೋಗಲಾರಳು: ಪೇಚಿಗೆ ಸಿಲುಕಿದ ಪ್ರೇಮಿಗಳ ಆನ್​ಲೈನ್​ ಮದುವೆಗೆ ಹೈಕೋರ್ಟ್ ಅಸ್ತು

    ಲೈಂಗಿಕ ಕ್ರಿಯೆ ವೇಳೆ ಸಂಗಾತಿಯ ಒಪ್ಪಿಗೆಯಿಲ್ಲದೆ ಕಾಂಡೋಮ್ ತೆಗೆಯುವುದು ಅಪರಾಧ: ಸುಪ್ರೀಂಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts