More

    ಲೈಂಗಿಕ ಕ್ರಿಯೆ ವೇಳೆ ಸಂಗಾತಿಯ ಒಪ್ಪಿಗೆಯಿಲ್ಲದೆ ಕಾಂಡೋಮ್ ತೆಗೆಯುವುದು ಅಪರಾಧ: ಸುಪ್ರೀಂಕೋರ್ಟ್​

    ಒಟ್ಟಾವಾ (ಕೆನಡಾ): ಲೈಂಗಿಕ ಕ್ರಿಯೆ ನಡೆಸುವ ವೇಳೆ, ಸಂಗಾತಿಯ ಅನುಮತಿ ಇಲ್ಲದೆಯೇ ಕಾಂಡೋಮ್​ ತೆಗೆಯುವುದು ಅಪರಾಧವಾಗಿದೆ ಎಂದು ಕೆನಡಾದ ಸುಪ್ರೀಂಕೋರ್ಟ್​ ತೀರ್ಪು ನೀಡಿದೆ.

    ಗರ್ಭನಿರೋಧಕ ಮತ್ತು ಸುರಕ್ಷೆ ನೀಡುವ ಕಾಂಡೋಮ್​ ಅನ್ನು ಸಂಗಾತಿಯ ಅನುಮತಿ ಇಲ್ಲದೇ ತೆಗೆದರೆ, ಅಂಥ ವ್ಯಕ್ತಿ ಕಾನೂನಿನ ಅನ್ವಯ ಗಂಭೀರ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಕೋರ್ಟ್​ ಹೇಳಿದೆ. ತನ್ನ ಅರಿವಿಗೆ ಬಾರದೇ ಪ್ರಿಯಕರ ಕಾಂಡೋಮ್​ ತೆಗೆದು ಲೈಂಗಿಕ ಕ್ರಿಯೆ ನಡೆಸಿದ್ದರ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

    ಮೊದಲಿಗೆ ತನ್ನ ಎದುರು ಕಾಂಡೋಮ್ ಧರಿಸಿ, ಲೈಂಗಿಕ ಕ್ರಿಯೆ ನಡೆಸುವಾಗ ಗೊತ್ತಿಲ್ಲದಂತೆಯೇ ಅದನ್ನು ತನ್ನ ಪ್ರಿಯಕರ ತೆಗೆದಿರುವ ಕಾರಣದಿಂದ ತನಗೆ ಎಚ್​ಐವಿ ಸೋಂಕು ಬಂದಿರುವುದಾಗಿ ಮಹಿಳೆ ವಾದಿಸಿದ್ದರು. 2017ರಲ್ಲಿ ಆನ್‌ಲೈನ್‌ನಲ್ಲಿ ತಮ್ಮ ಪರಿಚಯವಾಗಿತ್ತು. ಪರಿಚಯವು ದೈಹಿಕ ಸಂಪರ್ಕದವರೆಗೆ ತಿರುಗಿತ್ತು. ಕಾಂಡೋಮ್​ ಬಳಸಿ ಕ್ರಿಯೆ ನಡೆಸುವುದಾಗಿ ಆತ ಹೇಳಿದ್ದ. ಆದರೆ ಆತ ಅದನ್ನು ತೆಗೆದಿರುವುದು ನನ್ನ ಅರಿವಿಗೆ ಬಂದಿರಲಿಲ್ಲ. ಎಚ್​ಐವಿ ಸೋಂಕು ತಗುಲಿದಾಗಲೇ ನನಗೆ ಇದು ತಿಳಿಯಿತು ಎಂದು ಮಹಿಳೆ ದೂರಿದ್ದಾರೆ.

    ಕಾಂಡೋಮ್​ ಇಲ್ಲದೆಯೂ ಲೈಂಗಿಕತೆಗೆ ಆಕೆ ಅನುಮತಿಸಿದ್ದಳು ಎಂದು ಆರೋಪಿ ವಾದಿಸಿದ್ದರಿಂದ ಕೆಳಹಂತದ ಕೋರ್ಟ್​ ಮಹಿಳೆಯ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು ಆಕೆ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್​, ಸಂಗಾತಿಯ ಅನುಮತಿಯಿಲ್ಲದೇ ಸಂಭೋಗದ ವೇಳೆ ಕಾಂಡೋಮ್ ತೆಗೆಯುವುದೂ ಅಪರಾಧ ಎಂದು ಹೇಳಿದೆ.

    ಲೈಂಗಿಕ ಕ್ರಿಯೆಯು ಮೂಲಭೂತವಾದ ಮತ್ತು ಸಕಾರಾತ್ಮಕವಾಗಿರುವ ವಿಭೀನ್ನ ಕ್ರಿಯೆ. ಇದು ಸುರಕ್ಷಿತವಾಗಿ ಇರಬೇಕು ಎಂದರೆ ಕಾಂಡೋಮ್​ ಬಳಸಬೇಕು. ಒಬ್ಬರ ಅನುಮತಿ ಇಲ್ಲದೆಯೇ ಕಾಂಡೋಮ್​ ತೆಗೆದು ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಅಪರಾಧ. ಹೀಗೆ ಮಾಡಿದವರು ಅಪರಾಧಿಯಾಗುತ್ತಾರೆ. ಬ್ರಿಟನ್ ಮತ್ತು ಸ್ವಿಜರ್ಲೆಂಡ್​ನಲ್ಲಿಯೂ ಇದಾಗಲೇ ಇಂಥದ್ದೇ ತೀರ್ಪುಗಳನ್ನು ಕೋರ್ಟ್​ಗಳು ನೀಡಿವೆ ಎಂದು ನ್ಯಾಯಮೂರ್ತಿಗಳು ಹೇಳಿದರು. ಈ ಹಿನ್ನೆಲೆಯಲ್ಲಿ ಈಗ ಈ ವ್ಯಕ್ತಿ ಕಾನೂನಿನ ಅನ್ವಯ ಕಠಿಣ ಶಿಕ್ಷೆಗೆ ಅರ್ಹ ಎಂದಿದೆ ಕೋರ್ಟ್​ (ಏಜೆನ್ಸೀಸ್​)


    ಸಂಸಾರ ಮಾಡಲು ಒಪ್ಪದ ಪತ್ನಿ, ವಿಚ್ಛೇದನಕ್ಕೂ ರೆಡಿ ಇಲ್ಲ, ಪತಿಗಿರುವ ಕಾನೂನು ಅವಕಾಶಗಳೇನು?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts