More

    ಏಕದಿನ ವಿಶ್ವಕಪ್ 2023| ಯಾರಿಗೆ ಹೆಚ್ಚು ಸಹಕಾರಿಯಾಗಲಿದೆ ವಾಂಖೆಡೆ ಪಿಚ್; ನಿರ್ಣಾಯಕ ಪಾತ್ರ ವಹಿಸಲಿದೆ ಟಾಸ್

    ಮುಂಬೈ: 2023ನೇ ಏಕದಿನ ವಿಶ್ವಕಪ್​ ಟೂರ್ನಿಯ ನಾಕೌಟ್​ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು (ನವೆಂಬರ್ 15) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್​ ತಂಡ ಸೆಣಸಾಡಲಿದೆ. ಇಂದುನ ನಡೆಯುವ ಪಂದ್ಯದ ಮತ್ತೊಂದು ವಿಶೇಷತೆ ಏನೆಂದರೆ 2019ರಲ್ಲಿ ನಡೆದ ಏಕದಿನ ವಿಶ್ವಕಪ್​ ನಾಕೌಟ್​ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು.

    ಇಂಗ್ಲೇಂಡ್​ನ ಮ್ಯಾಂಚೆಸ್ಟರ್​ನಲ್ಲಿ ನಡೆದ ಮಳೆಭಾದಿತ ಸೆಮಿಫೈನಲ್ ಪಂದ್ಯದಲ್ಲಿ ಭಾರತ 18ರನ್​ಗಳ ಅಂತರದಲ್ಲಿ ಸೋತು ಫೈನಲ್​ಗೆ ಏರುವಲ್ಲಿ ವಿಫಳವಾಗಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಹೀಗಾಗಿ ವಾಂಖೆಡೆ ಸ್ಟೇಡಿಯಂನಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ.

    ಸಮತೋಲಿತ ಪಿಚ್

    ಇನ್ನು ಪಂದ್ಯ ನಡೆಯುವ ವಾಂಖೆಡೆ ಕ್ರೀಡಾಂಗಣದ ಪಿಚ್​ ಅತ್ಯಂತ ಸಮತೋಲುಇತ ಪಿಚ್​ ಎಂದು ಹೇಳಲಾಗಿದೆ. ಏಕೆಂದರೆ . ಈ ಪಿಚ್​ ಬ್ಯಾಟರ್​ಗಳಿಗೆ ಸಹಕಾರಿ. ಹೀಗಾಗಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ದುಕೊಂಡು ಬೃಹತ್ ಮೊತ್ತ ಪೇರಿಸುವ ಸಾಧ್ಯತೆಯಿದೆ. ಹಾಗೆಯೇ ಈ ಮೈದಾನದಲ್ಲಿ ಚೇಸಿಂಗ್ ಕೂಡ ಕಷ್ಟಕರವಲ್ಲ. ದ್ವಿತೀಯ ಇನಿಂಗ್ಸ್​ ವೇಳೆ ಇಬ್ಬನಿ ಕಂಡು ಬಂದರೆ ಅನಾಯಾಸವಾಗಿ ಚೇಸಿಂಗ್ ಮಾಡಬಹುದು. ಹೀಗಾಗಿಯೇ ಇದನ್ನು ಪರಿಗಣಿಸಿ ಟಾಸ್ ಗೆದ್ದ ಮೊದಲು ಬೌಲಿಂಗ್ ಮಾಡಿದರೂ ಅಚ್ಚರಿಪಡಬೇಕಿಲ್ಲ.

    ಬುಧವಾರ ಮುಂಬೈನಲ್ಲಿ ಬಿಸಿಲಿನ ವಾತಾವರಣ ಇರಲಿದೆ ಎಂದು ಹೇಳಲಾಗಿದೆ. ಅಲ್ಲದೆ ಈ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಕಡಿಮೆ ಇದೇ. ಹೀಗಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡುವ ಸಾಧ್ಯತೆಯಿಲ್ಲ. ಇನ್ನು ಏರಿಳಿತವನ್ನು ನಿರೀಕ್ಷಿಸಲಾಗಿದೆ.

    team India

    ಇದನ್ನೂ ಓದಿ: ಉಡುಪಿ ಕೊಲೆ ಪ್ರಕರಣ; ಹಂತಕನ ಚಾಣಾಕ್ಷತನಕ್ಕೆ ಪೊಲೀಸ್​ ಅಧಿಕಾರಿಗಳೇ ಶಾಕ್!

    ಪ್ರಮುಖ ಪಾತ್ರ ವಹಿಸಲಿದೆ ಟಾಸ್

    ವಿಶ್ವಕಪ್​ ನಾಕೌಟ್​ ಪಂದ್ಯದಲ್ಲಿ ಯಾರು ಬಲಿಷ್ಠ ಎಂಬ ವಿಚಾರಕ್ಕೆ ಬಂದರೆ ಲೀಗ್ ಹಂತದ ಪಂದ್ಯಗಳಲ್ಲಿ ಅಜೇಯವಾಗಿ ಟೇಬಲ್​ ಟಾಪರ್​ ಆಗಿರುವ ಭಾರತ ತಂಡವೇ ಹಾಟ್​ ಫೇವರಿಟ್​ ಎಂದು ಹೇಳಲಾಗಿದೆ. ಏಕೆಂದರೆ ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಸಮತೋಲಿತ ಪ್ರದರ್ಶನವನ್ನು ನೀಡಿರುವ ಭಾರತ ತಂಡವು ಕಿವೀಸ್​ ಮಣಿಸಿ ಫೈನಲ್​ ಪ್ರವೇಶಿಸುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.

    ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ 117 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ 59 ಬಾರಿ ವಿಜಯಶಾಲಿಯಾಗಿದೆ. ಮತ್ತೊಂದೆಡೆ ಕಿವೀಸ್ 50 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿದೆ. ಇನ್ನು ಲೀಗ್​ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 4 ವಿಕೆಟ್​ಗಳಿಂದ ಜಯ ಸಾಧಿಸಿತ್ತು.

    ವಾಂಖೆಡೆ ಕ್ರೀಡಾಂಗಣದಲ್ಲಿ ಈ ಬಾರಿ ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 4 ಪಂದ್ಯಗಳು ನಡೆದಿದ್ದು, ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 300+ ಸ್ಕೋರ್​ಗಳಿಸಿದೆ. ಹೀಗಾಗಿ ಈ ಸಲ ಕೂಡ ಬೃಹತ್ ಮೊತ್ತದೊಂದಿಗೆ ಪಂದ್ಯ ಗೆಲ್ಲಲು ಉಭಯ ತಂಡಗಳು ಪ್ಲ್ಯಾನ್ ರೂಪಿಸಬಹುದು. ಹೀಗಾಗಿ ಮೊದಲ ಸೆಮಿಫೈನಲ್​ನಲ್ಲಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡುವುದು ಖಚಿತ ಎಂದೇ ಹೇಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts