More

    ರಷ್ಯಾ ಕಳುಹಿಸಿರುವ ಲೂನಾ-25 ನೌಕೆಯಲ್ಲಿ ತಾಂತ್ರಿಕ ದೋಷ: ಭಾರತದ ಚಂದ್ರಯಾನ 3 ಸ್ಥಿತಿ ಹೇಗಿದೆ?

    ನವದೆಹಲಿ/ಮಾಸ್ಕೋ: ಭಾರತ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿದ ಬೆನ್ನಲ್ಲೇ ರಷ್ಯಾ ಕೂಡ ಚಂದ್ರನ ಅಂಗಳಕ್ಕೆ ಲೂನಾ-25 ನೌಕೆಯನ್ನು ಲಾಂಚ್​ ಮಾಡಿತ್ತು. ಆದರೆ, ತಾಜಾ ಬೆಳವಣಿಗೆಯಲ್ಲಿ ರಷ್ಯಾ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇನ್ನೊಂದೆಡೆ ನಮ್ಮ ಇಸ್ರೋ ಕಳುಹಿಸಿರುವ ಚಂದ್ರಯಾನ-3 ಸ್ಥಿತಿ ಸ್ಥಿರವಾಗಿದ್ದು, ಚಂದ್ರ ಅಂಗಳವನ್ನು ಸ್ಪರ್ಶಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

    ನಿನ್ನೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್​ ಮಾಡುವ ಪ್ರಯತ್ನದಲ್ಲಿ ಕಕ್ಷೆಯನ್ನು ಕಡಿಮೆ ಮಾಡುವಾಗ ಲೂನಾ-25ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಿಫಲವಾಗಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್​ಕಾಸ್ಮೋಸ್ ಈ ಲೂನಾ-25 ನೌಕೆಯನ್ನು ಉಡಾವಣೆ ಮಾಡಿದ್ದು, ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಇಸ್ರೊ ನೌಕೆ ಚಂದ್ರಯಾನ-3 ಜುಲೈ 14ರಂದು ಉಡಾವಣೆಗೊಂಡಿದ್ದರೆ ರಾಸ್​ಕಾಸ್ಮೋಸ್​ನ ಲೂನಾ-25 ಬಹುತೇಕ ಒಂದು ತಿಂಗಳ ನಂತರ, ಆಗಸ್ಟ್ 11ರಂದು ಗಗನಕ್ಕೆ ಜಿಗಿಯಿತು. ಲೂನಾ-25, ಕಳೆದ ಸುಮಾರು 50 ವರ್ಷಗಳಲ್ಲಿ ರಷ್ಯಾದ ಮೊದಲ ಚಂದ್ರ ಮಿಷನ್ ಆಗಿದೆ.

    ಇದನ್ನೂ ಓದಿ: ಅಪ್ರಾಪ್ತರ ಸೆಕ್ಸ್ ನಿರಪರಾಧಗೊಳಿಸಬೇಕೆ?: ಸಾರ್ವಜನಿಕ ಹಿತಾಸಕ್ತಿ ಪ್ರಕರಣದಲ್ಲಿ ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್

    ಚಂದ್ರಯಾನ-3 ನೌಕೆ ಸ್ಥಿರ 

    ಇಸ್ರೋ ಕಳುಹಿಸಿರುವ ಚಂದ್ರಯಾನ 3 ನೌಕೆಯ ಸ್ಥಿತಿ ಸದ್ಯ ಸ್ಥಿರವಾಗಿದೆ. ಚಂದ್ರನ ಅಂಗಳದಲ್ಲಿ ಇಳಿಯಲು ಇನ್ನು ಮೂರೇ ದಿನ ಬಾಕಿ ಇದೆ. ಚಂದ್ರಯಾನ 3 ಕಕ್ಷೆಯನ್ನು ಕಡಿತಗೊಳಿಸುವಲ್ಲಿ ಇಸ್ರೋ ಯಶಸ್ವಿಯಾಗಿದ್ದು, ಲ್ಯಾಂಡರ್​ ಮಾಡ್ಯೂಲ್​ (ಎಲ್​ಎಂ) ಅನ್ನು ಇನ್ನಷ್ಟು ಚಂದ್ರನ ಸಮೀಪ ತಂದಿದ್ದಾರೆ. ಆ. 23ರ ಸಂಜೆ 5 ಗಂಟೆಯ ಬಳಿಕ ಚಂದ್ರಯಾನ 3 ಚಂದ್ರನ ಮೇಲ್ಮೈ ಸ್ಪರ್ಶಿಸಿರುವ ನಿರೀಕ್ಷೆ ಇದೆ.

    ಎರಡನೇ ಮತ್ತು ಅಂತಿಮ ಡೀಬೂಸ್ಟಿಂಗ್ (ನಿಧಾನಗೊಳಿಸುವಿಕೆ) ಕಾರ್ಯಾಚರಣೆಯು ಯಶಸ್ವಿಯಾಗಿ ಲ್ಯಾಂಡರ್​ ಮಾಡ್ಯೂಲ್​ ಕಕ್ಷೆಯನ್ನು 25 ಕಿಮೀ x 134 ಕಿಮೀಗೆ ಇಳಿಸಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗುತ್ತದೆ ಮತ್ತು ಗೊತ್ತುಪಡಿಸಿದ ಲ್ಯಾಂಡಿಂಗ್ ಸೈಟ್‌ನಲ್ಲಿ ಸೂರ್ಯೋದಯಕ್ಕಾಗಿ ಕಾಯುತ್ತಿದೆ. ಆ. 23 ರಂದು ಲ್ಯಾಂಡಿಂಗ್​ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಇಸ್ರೋ ಎಕ್ಷ್​​ನಲ್ಲಿ ತಿಳಿಸಿದೆ. (ಏಜೆನ್ಸೀಸ್​)

    ಚಂದ್ರನ ದಕ್ಷಿಣ ಧ್ರುವ ಯಾನದಲ್ಲಿ ಭಾರತ-ರಷ್ಯಾ ಸ್ಪರ್ಧೆ: ಇಸ್ರೊ ನೌಕೆಗಿಂತ ತಿಂಗಳು ತಡವಾಗಿ ಉಡಾವಣೆ; 2 ದಿನ ಮೊದಲೇ ಲೂನಾ-25 ಲ್ಯಾಂಡಿಂಗ್ ಸಾಧ್ಯತೆ

    ವಿನಾಕಾರಣ ಪ್ರಾಣತೆತ್ತ ದಂಪತಿ: ಆ ಕ್ಷಣ ಅಂಕಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts