More

    ಪುಟಿನ್​​​ಗೆ ಪ್ರಶ್ನೆ ಕೇಳಿದ ಪುಟಿನ್! ತದ್ರೂಪಿಯನ್ನು ನೋಡಿ ರಷ್ಯಾ ಅಧ್ಯಕ್ಷ ಶಾಕ್​,​ ಅಸಲಿಗೆ ನಡೆದಿದ್ದೇನು?

    ಮಾಸ್ಕೋ: ಪರದೆಯ ಮೇಲೆ ಥೇಟ್​ ತನ್ನಂತೆ ಇರುವ ವ್ಯಕ್ತಿಯನ್ನು ನೋಡಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಒಂದು ಕ್ಷಣ ಶಾಕ್​ ಆದ ಘಟನೆ ನಡೆದಿದೆ. ಅಷ್ಟಕ್ಕೂ ಆ ವ್ಯಕ್ತಿ ಪುಟಿನ್​ ಅವರ ತದ್ರೂಪಿ ಅಂತೂ ಅಲ್ಲ. ಬದಲಿಗೆ ಕೃತಕ ಬುದ್ಧಿಮತ್ತೆ (ಎಐ)ಯಿಂದ ಸೃಷ್ಟಿಯಾದ ಪುಟಿನ್ ವರ್ಸನ್​​ ಎಂಬುದೇ ಸತ್ಯ.

    ಅಂದಹಾಗೆ ಕೃತಕ ಬುದ್ಧಿಮತ್ತೆ (AI- ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​) ಸಾಧನ​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಂಡಿದ್ದು, ಹಲವಾರು ಮಂದಿ ಇದನ್ನು ಬಳಸುತ್ತಿದ್ದಾರೆ. AI ಎಷ್ಟು ಆಧುನಿಕವಾಗಿದೆ ಅಂದರೆ ಜನರು ಹೆಚ್ಚು ಶ್ರಮವಹಿಸದೇ ಎಲ್ಲ ಬಗೆಯ ಫೋಟೋ, ವಿಡಿಯೋಗಳನ್ನು ರಚಿಸಬಹುದು. ತಮ್ಮ ಕಲ್ಪನೆ ಹಾಗೂ ಇಷ್ಟದ ಪಾತ್ರವನ್ನು ಅಥವಾ ಪ್ರಮುಖ ವ್ಯಕ್ತಿಗಳನ್ನು ಎಐ ಮೂಲಕ ಸೃಷ್ಟಿಸಬಹುದು. ಆದರೆ, ಇತ್ತೀಚೆಗೆ ಎಐ ಕುಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಅನೇಕ ದಿಗ್ಗಜರು ಕೂಡ ಭವಿಷ್ಯದಲ್ಲಿ ಎಐ ಟೆಕ್ನಾಲಜಿಯ ಅಪಾಯವನ್ನು ಬಿಚ್ಚಿಟ್ಟಿದ್ದಾರೆ.

    ವಾರ್ಷಿಕ ಕಾರ್ಯಕ್ರಮದ ವೇಳೆ ಸಾರ್ವಜನಿಕರ ಪ್ರಶ್ನೋತ್ತರದ ಸಮಯದಲ್ಲಿ ವ್ಲಾಡಿಮಿರ್​ ಪುಟಿನ್​ ಅವರು ಅನಿರೀಕ್ಷಿತವಾಗಿ ತಮ್ಮ ಎಐ ಆವೃತ್ತಿಯನ್ನು ನೋಡಿ ದಂಗಾದರು. ಸೆಂಟ್​ ಪೀಟರ್ಸ್​ಬರ್ಗ್​ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಪುಟಿನ್​ ಅವರ ಎಐ ವರ್ಸನ್ ಮೂಲಕವೇ ಕೃತಕ ಬುದ್ಧಿಮತ್ತೆ ಎಷ್ಟು ಅಪಾಯಕಾರಿ? ಎಂಬ ಪ್ರಶ್ನೆಯನ್ನು ಪುಟಿನ್​ಗೆ ಕೇಳಿದರು.

    ಕಾರ್ಯಕ್ರಮದಲ್ಲಿ ಭಾಗಿಯಾದ್ದ ಜನರು ಪುಟಿನ್ ಅವರ​ ಎಐ ವರ್ಷನ್​ ನೋಡಿ, ಒಂದು ಕ್ಷಣ ನಗೆಗಡಲಲ್ಲಿ ತೇಲಿದರು. ಪುಟಿನ್ ಅವರು AI ವರ್ಸನ್​ಗೆ ಪ್ರತಿಕ್ರಿಯಿಸುವ ಮೊದಲು ಸ್ವಲ್ಪ ವಿರಾಮವನ್ನು ನೀಡಿದರು. ಹಾಸ್ಯಾತ್ಮಕ ವಾತಾವರಣದ ಹೊರತಾಗಿಯೂ ಪುಟಿನ್ ತಮ್ಮ ಗಂಭೀರವಾದ ಅಭಿವ್ಯಕ್ತಿಯನ್ನು ಉಳಿಸಿಕೊಂಡು ಮಾತನಾಡಿದರು. ನೀವು ನನ್ನನ್ನು ಹೋಲುತ್ತೀರಿ ಮತ್ತು ನನ್ನ ಧ್ವನಿಯೊಂದಿಗೆ ಮಾತನಾಡುವುದನ್ನು ನೋಡಿದೆ. ಆದರೆ, ಒಬ್ಬ ವ್ಯಕ್ತಿ ಮಾತ್ರ ನನ್ನಂತೆ ಇರಬೇಕು ಮತ್ತು ನನ್ನ ಧ್ವನಿಯೊಂದಿಗೆ ಮಾತನಾಡಬೇಕು ಮತ್ತು ಅದು ನಾನೇ ಆಗಿರಬೇಕು ಎಂದು ನಾನು ನಿರ್ಧರಿಸಿದೆ ಎಂದು ಹೇಳಿದರು. ಅಲ್ಲದೆ, ಇದೇ ನನ್ನ ಮೊದಲ ದ್ವಿಪಾತ್ರ ಎಂದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್​ ಆಗಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ.

    ಎಐ ಎಂದರೇನು?
    ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಂಪ್ಯೂಟರ್ ವಿಜ್ಞಾನದ ಶಾಖೆಯಾಗಿದೆ. ಮನುಷ್ಯರಂತೆ ಯೋಚಿಸಿ, ಕೆಲಸ ಮಾಡುವ ಬುದ್ಧಿವಂತ ಯಂತ್ರಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ. ಚೆಸ್ ಆಡುವ ಕಂಪ್ಯೂಟರ್​ಗಳು, ಸ್ವಯಂಚಾಲಿತ ಕಾರ್​ಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಸಾರಿಗೆ, ಉತ್ಪಾದನೆ, ಹಣಕಾಸು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಲಾಗುತ್ತಿದೆ. ಯಾಂತ್ರೀಕರಣ, ಚಾಣಾಕ್ಷತನದ ನಿರ್ಧಾರ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ, ಪುನರಾವರ್ತಿತ ಕೆಲಸದ ಸುಲಭ ನಿರ್ವಹಣೆ ಮುಂತಾದವುಗಳು ಎಐನ ಪ್ರಯೋಜನಗಳಾಗಿವೆ. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕ್ ಕಾರ್ತಿ ಅವರನ್ನು ‘ಕೃತಕ ಬುದ್ಧಿಮತ್ತೆಯ ಜನಕ’ ಎಂದು ಗುರುತಿಸುತ್ತಾರೆ. (ಏಜೆನ್ಸೀಸ್​)

    ಪ್ರೇಯಸಿಯನ್ನು ರೇಪ್​ ಮಾಡಿ, 111 ಬಾರಿ ಇರಿದು ಕೊಂದ ಪ್ರಿಯಕರನನ್ನು ಬಿಡುಗಡೆ ಮಾಡಿದ ಪುಟಿನ್​! ಕಾರಣ ಹೀಗಿದೆ…

    ಪುಟಿನ್​ ಹತ್ಯೆ ಯತ್ನದಿಂದ ಭೀಕರ ನೈಸರ್ಗಿಕ ವಿಕೋಪಗಳವರೆಗೆ! 2024ಕ್ಕೆ ಬಾಬಾ ವಂಗಾರ 7 ಭವಿಷ್ಯವಾಣಿಗಳಿವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts