More

    ಮುಂದಿನ ವಾರ ರಷ್ಯಾದ ಕೋವಿಡ್-19 ಚುಚ್ಚುಮದ್ದು ಪ್ರಾಯೋಗಿಕ ಬಳಕೆಗೆ ಬಿಡುಗಡೆ

    ಮಾಸ್ಕೋ: ವಿಶ್ವದಾದ್ಯಂತ ಕೋವಿಡ್​-19 ರೋಗನಿರೋಧ ಚುಚ್ಚುಮದ್ದು ಸಂಶೋಧನೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಇದೇ ವೇಳೆ ತಾನು ಈಗಾಗಲೆ ಕೋವಿಡ್​-19 ರೋಗನಿರೋಧ ಚುಚ್ಚುಮದ್ದು ಸಿದ್ಧಪಡಿಸಿದ್ದು, ಅದಕ್ಕೆ ಅನುಮೋದನೆಯನ್ನೂ ಪಡೆದುಕೊಳ್ಳಲಾಗಿದೆ. ಕೋವಿಡ್​-19 ಸೋಂಕಿತರಿಗೆ ಮುಂದಿನ ವಾರದಿಂದ ಈ ಚುಚ್ಚುಮದ್ದನ್ನು ಕೊಡಲು ಆರಂಭಿಸಲಿರುವುದಾಗಿ ರಷ್ಯಾ ಹೇಳಿಕೊಂಡಿದೆ.

    ಅವಿಫಾವಿರ್​ ಎಂದು ಈ ಕೋವಿಡ್​-19 ನಿರೋಧಕ ಚುಚ್ಚುಮದ್ದಿಗೆ ಹೆಸರು ನೀಡಲಾಗಿದೆ. ಈ ಚುಚ್ಚುಮದ್ದುಗಳನ್ನು ರಷ್ಯಾದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಕರೊನಾ ಸೋಂಕಿತರಿಗೆ ಜೂ.11ರಿಂದ ಇದನ್ನು ಕೊಡಲಾಗುವುದು ಎಂದು ರಷ್ಯಾ ತಿಳಿಸಿದೆ.

    ಫವಿಪಿರಾವಿರ್​ ಎಂಬ ಮೂಲಧಾತುವನ್ನು ಹೊಂದಿರುವ ಅವಿಫಾವಿರ್​ ಎಂಬ ಹೆಸರಿನ ಈ ಚುಚ್ಚುಮದ್ದನ್ನು ಜಪಾನ್​ನ ಕಂಪನಿಯೊಂದು 1990ರಲ್ಲಿ ಸಿದ್ಧಪಡಿಸಿತ್ತು. ತನ್ನ ವಹಿವಾಟನ್ನು ಔಷಧ ವ್ಯವಹಾರಗಳಿಗೆ ವಿಸ್ತರಿಸಿಕೊಂಡ ನಂತರದಲ್ಲಿ ಫ್ಯೂಜಿಫಿಲಂ ಈ ಔಷಧವನ್ನು ತನ್ನದಾಗಿಸಿಕೊಂಡಿತ್ತು.

    ಇದನ್ನೂ ಓದಿ: ಕರೊನಾ ಸೋಂಕಿನ ಭೀತಿ: ಮುಖ್ಯಮಂತ್ರಿ ಹಾಗೂ ಸಚಿವರು ಕ್ವಾರಂಟೈನ್​ಗೆ

    ಇದೀಗ ಆ ಔಷಧಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿ, ಕಾರ್ಯಕ್ಷಮತೆ ಹೆಚ್ಚಿಸುವಂತೆ ಮಾಡಿ ಕೋವಿಡ್​-19 ಚಿಕಿತ್ಸೆಗಾಗಿ ಬಿಡುಗಡೆ ಮಾಡುತ್ತಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಅಲ್ಲದೆ, ಈ ಫಾರ್ಮುಲಾವನ್ನು ಇನ್ನೆರಡು ವಾರಗಳಲ್ಲಿ ಹಂಚಿಕೊಳ್ಳಲು ಸಿದ್ಧವಿರುವುದಾಗಿಯೂ ತಿಳಿಸಿದೆ.

    ಸದ್ಯ ವಿಶ್ವದಲ್ಲಿ ಎಲ್ಲಿಯೂ ಕೂಡ ಕರೊನಾ ಸೋಂಕು ತಡೆಗಟ್ಟುವ ರೋಗನಿರೋಧಕ ಚುಚ್ಚುಮದ್ದುಗಳು ಲಭ್ಯವಿಲ್ಲ. ವಿವಿಧ ರಾಷ್ಟ್ರಗಳಲ್ಲಿ ಇಂಥ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಅವನ್ನು ಮನುಷ್ಯರ ಮೇಲೆ ಪ್ರಯೋಗಿಸಿ, ಕೋವಿಡ್​-19 ಚಿಕಿತ್ಸೆಯಲ್ಲಿ ಅವು ಎಷ್ಟು ಪರಿಣಾಮಕಾರಿ ಎಂಬುದನ್ನು ಅರಿತುಕೊಳ್ಳಬೇಕಿದೆ.

    ಗಿಲ್​ಲೀಡ್​ ಎಂಬ ಹೆಸರಿನ ರೆಮಿಡೆಸಿವಿರ್​ ಎಂಬ ರೋಗನಿರೋಧಕ ಚುಚ್ಚುಮದ್ದು ಪ್ರಾಯೋಗಿಕವಾಗಿ ಪ್ರೋತ್ಸಾಹಕಾರಿ ಪರಿಣಾಮವನ್ನು ಒಗದಿಸಿದೆ. ತುಂಬಾ ತುರ್ತು ಹಾಗೂ ಮಾನವೀಯತೆ ದೃಷ್ಟಿಯಿಂದ ಮಾತ್ರ ಈ ಚುಚ್ಚುಮದ್ದನ್ನು ಬಳಸುವಂತೆ ಸೂಚಿಸಿ, ವಿವಿಧ ರಾಷ್ಟ್ರಗಳಿಗೆ ರವಾನಿಸಲಾಗಿದೆ.

    ಎಂಟು ಜಿಲ್ಲೆಗಳಲ್ಲಿ ಅಧಿಕ ಕರೊನಾ ಸೋಂಕಿತರು: 13 ಜಿಲ್ಲೆಗಳು ದಿನದ ಮಟ್ಟಿಗೆ ಶಾಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts