More

    ಎತ್ತ ಆಲಿಸಿದರೂ ಮದ್ದುಗುಂಡುಗಳು ಸದ್ದು: ಇಸ್ರೇಲ್​ ಯುದ್ಧದ ಭಯಾನಕ ಅನುಭವ ಬಿಚ್ಚಿಟ್ಟ ವಿದ್ಯಾರ್ಥಿನಿ

    ಕೊಚ್ಚಿ​: ಆಪರೇಷನ್​ ಅಜಯ್​ ಹೆಸರಿನ ಕಾರ್ಯಾಚರಣೆಯಲ್ಲಿ ಯುದ್ಧಪೀಡಿತ ಇಸ್ರೇಲ್​ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗುತ್ತಿದೆ. ಈಗಾಗಲೇ ಎರಡು ವಿಶೇಷ ವಿಮಾನಗಳು ಆಗಮಿಸಿವೆ. ಮೊದಲ ವಿಮಾನದಲ್ಲಿ 212 ಮತ್ತು ಎರಡನೇ ವಿಮಾನದಲ್ಲಿ 235 ಭಾರತೀಯರನ್ನು ಕರೆತರಲಾಗಿದ್ದು, ಅದರಲ್ಲಿ ಕೆಲವರು ಇಸ್ರೇಲ್​ ಯುದ್ಧ ಕರಾಳತೆಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.​

    ಎಂಎಸ್​ಸಿ ಕೃಷಿ ಮತ್ತು ಜೈವಿಕ ತಂತ್ರಜ್ಞಾನ ಅಧ್ಯಯನಕ್ಕೆಂದು ಇಸ್ರೇಲ್​ಗೆ ತೆರಳಿದ್ದ ಕೇರಳ ಮೂಲದ ವಿದ್ಯಾರ್ಥಿನಿ ಗೋಪಿಕಾ ಶಿಬು ತಾನು ಅನುಭವಿಸಿದ ಕಹಿ ಅನುಭವವನ್ನು ತಿಳಿಸಿದ್ದಾರೆ. ಎತ್ತ ಕಿವಿ ಆಲಿಸಿದರೂ ಘೋರ ಸ್ಫೋಟದ ಸದ್ದೇ ಕೇಳಿಸುತ್ತಿತ್ತು. ಅದನ್ನು ಕೇಳಿ ನಾವು ಬಂಕರ್​ ಒಳಗೆ ಓಡಿ ಆಶ್ರಯ ಪಡೆಯುತ್ತಿದ್ದೆವು. ಎರಡು ಗಂಟೆಗಳ ಕಾಲ ನಾನು ಜೀವವನ್ನು ಕೈಯಲ್ಲಿ ಹಿಡಿದುಕೊಂಡಿದ್ದೆ ಎಂದು ಗೋಪಿಕಾ ಶಿಬು ತಿಳಿಸಿದರು.

    ಗೋಪಿಕಾ ಅವರು ಇಸ್ರೇಲ್​ನ ಬೀರ್ಶೆಬಾ ಏರಿಯಾದಲ್ಲಿ ನೆಲೆಸಿದ್ದರು. ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ದಾಳಿಯ ಸಂಭವದ ಬಗ್ಗೆ ಸೈರನ್​ ಮೊಳಗಿತು. ಆದರೆ, ಇತ್ತೀಚಿನ ದಿನಗಳಲ್ಲಿ ಯಾವುದೇ ದಾಳಿ ನಡೆಯದ ಕಾರಣ ಯಾರೂ ಆತಂಕಕ್ಕೆ ಒಳಗಾಗಲಿಲ್ಲ. ಆದರೆ, ಮತ್ತೆ ಸೈರನ್ ಮೊಳಗಿದಾಗ ಮತ್ತು ಕಿರುಚಾಟದ ಶಬ್ದ ಕೇಳಿದಾಗ ಎಲ್ಲರೂ ಬಂಕರ್​ ಒಳಗೆ ಓಡಿ ಹೋಗಿ ಆಶ್ರಯ ಪಡೆದರು. ಸುಮಾರು ಎರಡು ಗಂಟೆಗಳ ಕಾಲ ಎತ್ತ ಆಲಿಸಿದರೂ ಬರೀ ಮದ್ದುಗುಂಡುಗಳ ಸದ್ದೇ ಕೇಳಿಸುತ್ತಿತ್ತು. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಳೆದೆವು. ಯಾವಾಗ ಏನಾಗುತ್ತದ್ದೋ ಎಂಬ ಅತೀವ ಭಯವಿತ್ತು. ಆದರೆ, ಅದೇ ದಿನ ಸಂಚಾರ ಮತ್ತು ದೈನಂದಿನ ಜೀವನ ಸಹಜ ಸ್ಥಿತಿಗೆ ಮರಳಿತು. ಆದರೆ, ಮನೆಯವರ ಒತ್ತಾಯದ ಮೇರೆಗೆ ಮನೆಗೆ ಮರಳಲು ನಿರ್ಧರಿಸಬೇಕಾಯಿತು ಎಂದು ಗೋಪಿಕಾ ಹೇಳಿದರು.

    ಗೋಪಿಕಾ ಬೀರ್ಶೆಬಾದಲ್ಲಿರುವ ಬೆನ್​ ಗುರಿಯಾನ್​ ವಿಶ್ವವಿದ್ಯಾಲಯದಲ್ಲಿ ಎಂಎಸ್​ಸಿ ಮಾಡುತ್ತಿದ್ದರು. ಒಂದು ವರ್ಷದ ಹಿಂದಷ್ಟೇ ಇಸ್ರೇಲ್​ಗೆ ತೆರಳಿದ್ದರು. ಗೋಪಿಕಾ, ಶಿಬು ಅವರ ಕುಟುಂಬದ ಹಿರಿಯ ಮಗಳು. ಇವರು ಕೇರಳದ ಕೊಲ್ಲಂ ಮೂಲದವರು. ಆಪರೇಷನ್​ ಅಜಯ್​ ಕಾರ್ಯಾಚರಣೆಯಿಂದ ಭಾರತಕ್ಕೆ ಮರಳಿದ ಗೋಪಿಕಾ, ನಿನ್ನೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇಸ್ರೇಲ್​ನಲ್ಲಿ ಸದ್ಯ ಯುದ್ಧದ ಕಾರ್ಮೋಡ ಕವಿದಿರುವುದರಿಂದ ಸಮಿಸ್ಟರ್​ ಪರೀಕ್ಷೆಯನ್ನು ಮುಂದಿನ ನವೆಂಬರ್​ ತಿಂಗಳಿಗೆ ಮುಂದೂಡಲಾಗಿದೆ.

    ಇದನ್ನೂ ಓದಿ: ಅತಿಯಾದ ಟೊಮ್ಯಾಟೊ ಬಳಕೆಯಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಾ?

    ಸಿಎಂ ಪಿಣರಾಯಿ ವಿಜಯನ್​ ಪತ್ರ
    ತಮ್ಮ ರಾಜ್ಯದಿಂದ ಸುಮಾರು 7 ಸಾವಿರ ಮಂದಿ ಇಸ್ರೇಲ್​ನಲ್ಲಿ ಸಿಲುಕಿದ್ದು, ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಅವರ ಸುರಕ್ಷತೆಯನ್ನು ಖಚಿತಪಡಿಸಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಮಂಗಳವಾರ (ಅ.10) ವಿದೇಶಾಂಗ ಸಚಿವ ಜೈಶಂಕರ್​ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.

    ಭಾರತೀಯರಿಗೆ ಸಹಾಯವಾಣಿ
    ಇಸ್ರೇಲ್ – ಹಮಾಸ್ ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತೀಯರಿಗೆ ನೆರವು ನೀಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ 24 ಗಂಟೆಗಳ ಸಹಾಯ ವಾಣಿ ಸ್ಥಾಪಿಸಿದೆ. 1800118797 (ಟೋಲ್ ಫ್ರೀ), +91-11 23012113, +91-11-23014104, +91-11-23017905 ಮತ್ತು +919968291988ಗೆ ಸಂಪರ್ಕ ಮಾಡಬಹುದು. ಅಥವಾ room.gov ಗೆ ಇ ಮೇಲ್ ಮಾಡಬಹುದು. ಟೆಲ್ ಅವಿವ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹ 24 ಗಂಟೆಗಳ ಸಹಾಯವಾಣಿ ಸ್ಥಾಪಿಸಿದೆ. ಅಗತ್ಯ ಇರುವವರು +972- 35226748, +972-543278392ಗೆ ಸಂರ್ಪಸಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?
    ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.

    ಗಾಜಾ ಪಟ್ಟಿ ಎಂದರೇನು? : ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ. (ಏಜೆನ್ಸೀಸ್​)

    Assembly Elections 2023: ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದವರಿವರು!

    ಇಸ್ರೇಲ್-ಗಾಜಾ ಯುದ್ಧ…ಭಾರತ ವ್ಯೂಹಾತ್ಮಕ ವೈಖರಿ

    ಮೆಟ್ರೋದಲ್ಲಿ ಪ್ರಯಾಣಿಸಿದ ನಟ ಹೃತಿಕ್ ರೋಷನ್; ಸೆಲ್ಫಿಗೆ ಮುಗಿ ಬಿದ್ದ ಫ್ಯಾನ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts