More

    ಇಸ್ರೇಲ್-ಗಾಜಾ ಯುದ್ಧ…ಭಾರತ ವ್ಯೂಹಾತ್ಮಕ ವೈಖರಿ

    ನವದೆಹಲಿ: ಇಸ್ರೇಲ್-ಗಾಜಾ ಯುದ್ಧ ಕುರಿತಾದ ಭಾರತದ ಎರಡನೇ ಪ್ರಕಟಣೆ ವ್ಯೂಹಾತ್ಮಕವಾಗಿದೆ. ವಿದೇಶಾಂಗ ಸಚಿವಾಲಯ ಗುರುವಾರ ಕೊಟ್ಟ ಪ್ರಕಟಣೆಗೂ, ಪ್ರಧಾನಿ ಮೋದಿ ಅವರು ಕೊಟ್ಟ ಪ್ರಕಟಣೆಗೂ ಸ್ವಲ್ಪ ಮಟ್ಟಿಗೆ ವ್ಯತ್ಯಾಸವಿದೆಯಾದರೂ ಇಸ್ರೆಲ್​ ಪರ ದೃಢವಾಗಿ ನಿಂತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಪ್ಯಾಲೆಸ್ತಾನ್ ನಲ್ಲಿ ಸಹ ಶಾಂತಿ ನೆಲೆಸಬೇಕೆಂದು ಆಶಿಸುತ್ತಿದೆ.

    ಇಸ್ರೇಲ್ ಮೇಲೆ ಹಮಾಸ್​ ಉಗ್ರರು ದಾಳಿ ನಡೆಸಿದ ಪ್ರಾರಂಭದಲ್ಲಿ ಪ್ರಧಾನಿ ಮೋದಿಯವರು ಇಸ್ರೆಲ್​ಗೆ ಬೆಂಬಲಿಸಿದ್ದರು. ಆದರೆ ಅರಿಂದಮ್ ಬಾಗ್ಚಿ ಕೊಟ್ಟ ಹೇಳಿಕೆಯಲ್ಲಿ ಪ್ರಧಾನಿಯವರ ಹೇಳಿಕೆಗೆ ಸ್ವಲ್ಪ ಮಟ್ಟಿಗೆ ವೈರುದ್ಧತೆ ಇತ್ತು. ಪ್ರಧಾನಿ ಮೋದಿ ಪ್ಯಾಲೆಸ್ತೇನ್​ ಹೆಸರನ್ನು ಸಹ ಎತ್ತದೆ ಇಸ್ರೇ​ಲ್ ಗೆ ಬೆಂಬಲ ವ್ಯಕ್ತಪಡಿಸಿದ್ದರು. ಹಮಾಸ್​ ದಾಳಿಗಳನ್ನು ಉಗ್ರರ ದಾಳಿಗಳಾಗಿ ಪ್ರಸ್ತಾಪಿಸಿದ್ದರು. ಆಗ ಪ್ರತಿಪಕ್ಷ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು.

    ಇದನ್ನೂ ಓದಿ: ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಹಮಾಸ್​ ವಾಯುಪಡೆಯ ಮುಖ್ಯಸ್ಥ ಸಾವು

    ಇನ್ನು ವಿದೇಶಾಂಗ ವಕ್ತಾರ ಅರಿಂದಮ್ ಬಾಗ್ಚಿ, ಪ್ಯಾಲೆಸ್ತಾನ್ ಸಾರ್ವಭೌಮ ಮತ್ತು ಸ್ವತಂತ್ರ ರಾಜ್ಯವಾಗಬೇಕು. ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ವಿಚಾರದಲ್ಲಿ ಭಾರತದ ನಿಲುವು “ಸ್ಥಿರ”. ಇಸ್ರೇಲ್‌ನೊಂದಿಗೆ ಶಾಂತಿಯಿಂದ ವಾಸಿಸುವ ಪ್ಯಾಲೆಸ್ತೀನ್ ರಾಜ್ಯ ನೋಡಲು ಭಾರತ ಬಯಸುತ್ತದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಪಾಲಿಸುವ ಬಾಧ್ಯತೆಯ ಬಗ್ಗೆ ಭಾರತಕ್ಕೆ ತಿಳಿದಿದೆ ಎಂದು ಹೇಳಿದ್ದರು.

    ವಿದೇಶಾಂಗ ಸಚಿವಾಲಯ, ಪ್ರಧಾನಿ ಮೋದಿ ಅಭಿಪ್ರಾಯಗಳಲ್ಲಿ ಉಗ್ರವಾದಕ್ಕೆ ವಿರುದ್ಧವಾದ ಅಂಶಗಳಿವೆಯಾದರೂ, ಸ್ವತಂತ್ರ ಪ್ಯಾಲೇಸ್ತಾನ್​ ವಿಷಯವನ್ನು ಇದರೊಂದಿಗೆ ಸೇರಿಸಿ ಸಮತೋಲನ ಸಾಧಿಸುವ ರೀತಿ ವ್ಯವಹರಿಸಿದೆ. ಪಶ್ಚಿಮ ಏಷ್ಯಾದೊಂದಿಗೆ ಸಂಬಂಧಗಳು ಮುರಿದುಕೊಳ್ಳದಂತೆ ವ್ಯವಹರಿಸಿದೆ. ಯುದ್ಧ ಪ್ರಾರಂಭದಲ್ಲಿ ಇಸ್ರೇಲ್​ನಲ್ಲಿ ಮೃತರ ಸಂಖ್ಯೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲೇ ನೆತನ್ಯಾಹು ಅವರ ಜತೆ ಇದ್ದ ಉತ್ತಮ ಸಂಬಂಧದಿಂದಾಗಿ ಪ್ರಧಾನಿ ಮೋದಿ ಅವರು ಇಸ್ರೇಲ್​ ಕಡೆಗೇ ಬೆಂಬಲ ಘೋಷಿಸಿದ್ದರು. ಗಾಜಾ ಮೇಲೆ ನಡೆಯುತ್ತಿರುವ ದಾಳಿಗಳ ಮೇಲೆ ಅರಬ್​ ರಾಷ್ಟ್ರಗಳು ತುಟಿಬಿಚ್ಚಿದ್ದರಿಂದ ಭಾರತ ವಿದೇಶಾಂಗ ಶಾಖೆ ಪ್ಯಾಲೆಸ್ತೇನ್​ ಅಂಶದ ಮೇಲೆ ಸಹ ಪ್ರತಿಕ್ರಿಯಿಸಿ ಸಮನ್ವಯತೆ ಸಾಧಿಸಲಾಗಿದೆ.

    ಅರಬ್ ರಾಷ್ಟ್ರಗಳೊಂದಿಗೆ ಭಾರತವು ಬಹು ಕಾರ್ಯತಂತ್ರ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿತಾಸಕ್ತಿಗಳನ್ನು ಹೊಂದಿದೆ. ಭಾರತವು ಇರಾಕ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇನ್ನು ಪ್ಯಾಲೆಸ್ತೇನ್‌ ಅನ್ನು ಕಾನೂನು ಬದ್ಧವಾಗಿ ಗೌರವಿಸಲು 1974 ರಲ್ಲಿ ಭಾರತವು ಒತ್ತಾಯಿಸಿತ್ತು. 2016 ರಲ್ಲಿ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಪ್ಯಾಲೆಸ್ತೀನ್‌ಗೆ ಭೇಟಿ ನೀಡಿದ್ದರು. 2017 ರಲ್ಲಿ ಅಂದಿನ ಪ್ಯಾಲೆಸ್ತೇನ್ ಅಧ್ಯಕ್ಷ ಮಹಮೂದ್ ಅಬಾಸ್ ಭಾರತಕ್ಕೆ ಭೇಟಿ ನೀಡಿದ್ದರು. 1977 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಧ್ಯಪ್ರಾಚ್ಯ ಸಮಸ್ಯೆಯನ್ನು ಪರಿಹರಿಸಲು “ಇಸ್ರೇಲ್ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ಯಾಲೆಸ್ತೀನ್ ಭೂಮಿಯನ್ನು ಖಾಲಿ ಮಾಡಬೇಕು” ಎಂದು ಹೇಳಿದ್ದರು.

    ಅಲ್ಲದೆ, ಭಾರತದ ಇದುವರೆಗಿನ ಭಾರತದ ಪ್ರತಿಕ್ರಿಯೆಗಳು ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಗೊಳಿಸುವುದಾಗಿದ್ದು, ಈ ಹಿನ್ನೆಲೆಯಲ್ಲಿ ವ್ಯೂಹಾತ್ಮಕವಾಗಿ ವ್ಯವಹರಿಸಿದೆ.

    ಇಸ್ರೇಲ್-ಹಮಾಸ್ ಯುದ್ಧ: ‘ನಾನು ಇಲ್ಲೇ ಹುಟ್ಟಿದ್ದೀನಿ, ಇಲ್ಲಿಯೇ ಸಾಯುತ್ತೇನೆ’: ಇಸ್ರೇಲ್​​​​ನ ಈ ನಿರ್ಧಾರಕ್ಕೆ ಯುವಕನ ಪ್ರತಿಕ್ರಿಯೆ

    ಕಳೆದ ಶನಿವಾರ ಪ್ರಾರಂಭವಾದ ಯುದ್ಧದಲ್ಲಿ ಇದುವರೆಗೆ 3200ಜನ ಮೃತಪಟ್ಟಿದ್ದಾರೆ. ಇಸ್ರೆಲ್​ ಕಡೆ 1300, ಪ್ಯಾಲೇಸ್ತಾನ್​ನಲ್ಲಿ 1900ಮಂದಿ ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts