More

    ಗ್ರಾಮೀಣ ಸಂಗೀತ ಪ್ರತಿಭೆಗಳಿಗೆ ವೇದಿಕೆ ಅಗತ್ಯ

    ಲಕ್ಷ್ಮೇಶ್ವರ: ಸ್ಟಾರ್ ಆಫ್ ಲಕ್ಷ್ಮೇಶ್ವರ, ಶಾರದಾ ಸಂಗೀತ ಪಾಠಶಾಲೆ, ನೇತಾಜಿ ಯುವಕ ಮಂಡಳದ ಸಹಯೋಗದಲ್ಲಿ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಸರಿಗಮಪ ರಾಗ ರಂಜಿನಿ ಗಾಯನ ಸ್ಪರ್ಧೆಯ ಧ್ವನಿ ಪರೀಕ್ಷೆ ಜರುಗಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅನೇಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.

    ಗಾಯನ ಸ್ಪರ್ಧೆ ಉದ್ಘಾಟಿಸಿದ ಸಾಹಿತಿ ಜಯಲಕ್ಷ್ಮೀ ಗಡ್ಡದೇವರಮಠ ಮಾತನಾಡಿ, ಸಂಗೀತ ಎಲ್ಲರಿಗೂ ಇಷ್ಟ, ಸಂಗೀತ ಮನಸನ್ನು ಮುದಗೊಳಿಸುತ್ತದೆ. ಇತ್ತಿಚೀನ ದಿನಗಳಲ್ಲಿ ದೂರದರ್ಶನಗಳಲ್ಲಿ ಬರುವ ಅನೇಕ ರಿಯಾಲಿಟಿ ಶೋಗಳಿಂದ ಸಂಗೀತ, ನೃತ್ಯಗಳತ್ತ ನಗರಗಳ ಮಕ್ಕಳು ಒಲವು ತೋರುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿರುವ ಅನೇಕ ಪ್ರತಿಭೆಗಳು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳಲು ಆಗದಿರುವುದರಿಂದ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಿಲ್ಲದಂತಾಗುತ್ತದೆ. ನಮ್ಮಲ್ಲಿಯ ಮಕ್ಕಳು ಸಾಕಷ್ಟು ಉತ್ತಮ ಪ್ರತಿಭೆ ಹೊಂದಿದ್ದಾರೆ. ಅವರಿಗೆ ಪ್ರೋತ್ಸಾಹ ಕೊಡುವ ಕಾರ್ಯ ಮಾಡಬೇಕಾಗಿದೆ ಎಂದರು.

    ಸಂಗೀತಗಾರ ಮೆಹಬೂಬ್ ಮಾತನಾಡಿ, ಅನೇಕ ಟಿವಿಗಳಲ್ಲಿ ಬರುವ ರಿಯಾಲಿಟಿ ಶೋಗಳಲ್ಲಿ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತವೆ. ಆದರೆ, ಗ್ರಾಮೀಣ ಮಕ್ಕಳು ಅವುಗಳಿಂದ ವಂಚಿತರಾಗುತ್ತಿದ್ದಾರೆ. ಇವರಿಗೆ ಮಾಹಿತಿ ಕೊರತೆ, ಪ್ರೋತ್ಸಾಹ, ಸೂಕ್ತ ತರಬೇತಿ ಇಲ್ಲದಿರುವುದು ಅವಕಾಶ ಕಳೆದುಕೊಳ್ಳುವುದಕ್ಕೆ ಕಾರಣವಾಗಿದೆ ಎಂದರು.

    ಧ್ವನಿ ಪರೀಕ್ಷೆಯಲ್ಲಿ ಆಯ್ಕೆಯಾದವರನ್ನು ಆ. 15ರಂದು ಅಂತಿಮ ಸುತ್ತಿನ ಪರೀಕ್ಷೆ ನಡೆಸಿ ವಿಜೇತರನ್ನು ಘೋಷಿಸಲಾಗುವುದು. ಇವರಿಗೆ ರಿಯಾಲಿಟಿ ಶೋಗಳಲ್ಲಿ ಅವಕಾಶ ದೊರೆಯುವಂತೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

    ಗಾಯಕಿ ಗೌರಮ್ಮ ಹುಲಗೂರ, ಲಕ್ಷ್ಮಣ ತಳವಾರ, ರಾಘವೇಂದ್ರ ಕ್ಷತ್ರಿ ನಿರ್ಣಾಯಕರಾಗಿ ಆಗಮಿಸಿದ್ದರು. ಸೋಮೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಜಯಕ್ಕ ಅಂದಲಗಿ, ಮಹೇಶ ಹೊಗೆಸೊಪ್ಪಿನ, ಡಾ. ದೀಪಾ ಬಿಂಕದಕಟ್ಟಿ, ಶೈಲಾ ಆದಿ, ಕುಮಾರಸ್ವಾಮಿ ಬಳ್ಳಾರಿ, ಬಸವಣ್ಣೆಪ್ಪ ನಂದೆಣ್ಣವರ, ಎಂ.ಕೆ. ಕಳ್ಳಿಮಠ, ಮಾಂತೇಶ ತೋಟದ, ಶಾರದಾ ಮಹಾಂತಶೆಟ್ಟರ, ಮಂಗಳಾ ಸತ್ಯಪ್ಪನವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts