More

    ರುದ್ರಭೂಮಿ ವ್ಯವಸ್ಥೆಗೆ ಶ್ರೀಗಳ ಮೆಚ್ಚುಗೆ

    ಚಿಕ್ಕೋಡಿ: ಚಿಕ್ಕೋಡಿ ಪಟ್ಟಣದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿರುವ ವೀರಶೈವ ರುದ್ರಭೂಮಿ ಸಕಲ ಸೌಲಭ್ಯ ಹೊಂದಿದೆ ಎಂದು ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.

    ಪಟ್ಟಣದ ಬಸವ ಸರ್ಕಲ್ ಸಮೀಪದ ವೀರಶೈವ ರುದ್ರಭೂಮಿಗೆ ಶುಕ್ರವಾರ ಭೇಟಿ ನೀಡಿ ಅವರು ಮಾತನಾಡಿದರು. ಈ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರಕ್ಕೆ ಬರುವ ಜನರಿಗೆ ಒದಗಿಸಿರುವ ಸೌಲಭ್ಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ಶವ ಸಂಸ್ಕಾರಕ್ಕೆ ಸಕಲ ವ್ಯವಸ್ಥೆಯನ್ನು ವೀರಶೈವ ಸಮಾಜ ಮಾಡುತ್ತದೆ. ಮನೆಯಿಂದ ರುದ್ರಭೂಮಿಗೆ ಪಾರ್ಥಿವ ಶರೀರ ಸಾಗಿಸಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಶವಸಂಸ್ಕಾರಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಪಟಾಕಿ ಹಾರಿಸುವುದನ್ನು ನಿಲ್ಲಿಸಲಾಗಿದೆ. ಸ್ಮಶಾನದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ತಿಳಿಸಿದರು. ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶೇಖರ ಚಿತ್ತವಾಡಗಿ, ಪ್ರಕಾಶ ಲಂಗೋಟಿ, ಸತೀಶ ಕಪಲಿ, ವಿಜಯ ಕಿಲ್ಲೇದಾರ, ಸೋಮು ಗವನಾಳೆ, ಮಹಾಂತೇಶ ವಾಡೇದ, ದಯಾನಂದ ಮಾಳಿ, ಪ್ರಶಾಂತ ಕಾಳಿಂಗೆ, ಸಂತೋಷ ಉದೋಶಿ, ಶಿವಾ ಹಾಲಬಾವಿ, ಮಹಾಂತೇಶ ನೀಲಕಂಠಣ್ಣವರ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts