More

    ಆರ್​ಎಸ್​ಎಸ್​​ ಏನು ಅಂತ ಕಾಶ್ಮೀರ-ಕನ್ಯಾಕುಮಾರಿವರೆಗೆ ಗೊತ್ತಿದೆ; ಸಿದ್ದು ಹೇಳಿಕೆಗೆ ಸಚಿವ ಕಾರಜೋಳ ತಿರುಗೇಟು

    ಬಾಗಲಕೋಟೆ: ದೇಶದ ಜನರಿಗೆ ಆರ್​​ಎಸ್​ಎಸ್​​ ಅಂದರೆ ಏನು ಅಂತ ಗೊತ್ತಿದೆ ಎನ್ನುವ ಮೂಲಕ ಆರ್​ಎಸ್ಎಸ್ ನವರನ್ನು ಪ್ರಶ್ನೆ ಕೇಳಿದರೆ ಬರಿ ಬಿಜೆಪಿ ನಾಯಕರೇ ಉತ್ತರ ಕೊಡ್ತಾರೆ ಎಂಬ ಸಿದ್ದು ಹೇಳಿಕೆಗೆ ಸಚಿವ ಗೋವಿಂದ‌ ಕಾರಜೋಳ ತಿರುಗೇಟು ನೀಡಿದರು.

    ಸಿದ್ದರಾಮಯ್ಯ ನವರು ಒಂದು ಸತ್ಯ ಅರ್ಥ ಮಾಡಿಕೊಳ್ಳಬೇಕು. ಆರ್ಎಸ್ಎಸ್ ನವರು ರಾಜಕಾರಣಿಗಳಲ್ಲ. ಆರ್​​ಎಸ್ಎಸ್ ನವರು ದೇಶ ಭಕ್ತರು. ದೇಶದಲ್ಲಿ ಶರಣರು, ಸಂತರು, ಸೂಫಿ ಸಂತರು ಹೇಗೆ ಆಗಿ ಹೋಗಿದ್ದಾರೋ, ಆ ರೀತಿ ದೇಶದ ಬಗ್ಗೆ ಗೌರವ ಇಟ್ಟುಕೊಂಡು ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡತಕ್ಕಂತಹ ದೇಶ ಭಕ್ತರು ಇರುವಂತಹ ಸಂಸ್ಥೆ ಆರ್​​ಎಸ್ಎಸ್​​.

    ಇದನ್ನು ರಾಜಕೀಕರಣಗೊಳಿಸಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಆರ್​​ಎಸ್ಎಸ್ ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಫಲ ಸಿಗುವ ಸಾಧ್ಯತೆ ಇಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ 130 ಕೋಟಿ ಜನರಿಗೆ ಆರ್ ಎಸ್ ಎಸ್ ಅಂದರೆ ಏನು ಅಂತ ಗೊತ್ತಿದೆ ಎಂದರು.

    ಎಲ್ಲೆಲ್ಲೂ ಪಠ್ಯಪುಸ್ತಕ ಪರಿಷ್ಕರಣೆ ಪರ-ವಿರೋಧ, ಈ ಶಾಲೆಯಲ್ಲಿ ಊರ ಹೆಸರಿನದ್ದೇ‌ ವಿವಾದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts