More

    ಭೂ ಸುಧಾರಣೆಗೆ ಆರೆಸ್ಸೆಸ್ ಆಕ್ಷೇಪ

    ಬೆಂಗಳೂರು: ಕೃಷಿಭೂಮಿ ಖರೀದಿಗೆ ಇದ್ದ ಮಿತಿ ತೆರವುಗೊಳಿಸುವ ರಾಜ್ಯ ಸರ್ಕಾರದ ಭೂಸುಧಾರಣೆ ತಿದ್ದುಪಡಿ ಕಾನೂನಿಗೆ ಆರೆಸ್ಸೆಸ್​ನ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಪರಿವಾರದ ಸಂಘಟನೆಗಳಾದ ಭಾರತೀಯ ಕಿಸಾನ್ ಸಂಘ , ಸ್ವದೇಶಿ ಜಾಗರಣ ಮಂಚ್ ಮತ್ತು ಕೃಷಿ ಪ್ರಯೋಗ ಪರಿವಾರದ ಪ್ರಮುಖರು ಭಾನುವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವಿರೋಧ ವ್ಯಕ್ತಪಡಿಸಿದರು.

    ಸಿಎಂ ಭರವಸೆ: ನೀರಾವರಿ ಕೃಷಿ ಭೂಮಿ, ಮಳೆ ಆಧಾರಿತ ಕೃಷಿ ಭೂಮಿ ಮತ್ತು ಮುಂದಿನ 5 ವರ್ಷಗಳಲ್ಲಿ ನೀರಾವರಿ ಯೋಜನೆಗಳಿಂದ ಲಾಭ ಪಡೆಯುವ ಕೃಷಿಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ನೀಡದಂತೆ ತಿದ್ದುಪಡಿ ತರಲಾಗುವುದು ಎಂದು ನಿಯೋಗಕ್ಕೆ ಸಿಎಂ ಭರವಸೆ ನೀಡಿದರು.

    ಸರ್ಕಾರದ ಪ್ರಸ್ತಾಪ ಕೈಗಾರಿಕೆಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪೂರಕ ಎಂಬ ವಾದದ ಕುರಿತು ರೈತ ಪರವಾಗಿ ಸ್ಪಷ್ಟ ನಿಲುವು ಪ್ರಕಟಿಸದಿರುವುದು ಆತಂಕಕಾರಿ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವೀರೇಂದ್ರ ಪಾಟೀಲರು, ದೇವೇಗೌಡರ ನಂತರ ರೈತ ಕುಟುಂಬದಿಂದ ಅಧಿಕಾರಕ್ಕೆ ಬಂದವರಾಗಿ ಕೃಷಿಭೂಮಿಯ ಕಾಯ್ದೆ ತಿದ್ದುಪಡಿ ವಿಷಯದಲ್ಲಿ ರೈತರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧರಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಕೃಷಿಭೂಮಿ ಪಡೆದವರು ಅಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಯನ್ನೇ ಮಾಡಬೇಕು. ಕೈಗಾರಿಕಾ ಉದ್ದೇಶಕ್ಕೆ ಈ ಭೂಮಿ ಬಳಸಬಾರದು ಮತ್ತು ಮುಂದೆ ಸದರಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಮಾರುವ ಅವಕಾಶವೂ ಇರಬಾರದು.

    ಇದನ್ನೂ ಓದಿ: ಕ್ವಾರಂಟೈನ್ ಕಟ್ಟೆಚ್ಚರಕ್ಕೆ ಜನಬಲ

    ಕಾಯ್ದೆಗೆ ತಿದ್ದುಪಡಿಗೆ ತರುವ ಮೊದಲು ರೈತ ಸಂಘಟನೆಗಳೊಂದಿಗೆ ರ್ಚಚಿಸಬೇಕು. ಪರಿಣತರ ಸಮಿತಿ ರಚಿಸಿ ಸಲಹೆ ಪಡೆಯಬೇಕು ಎಂಬುದು ಸೇರಿ ಅನೇಕ ಮನವಿ ಮಾಡಲಾಯಿತು. ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ, ಸ್ವದೇಶಿ ಜಾಗರಣ ಮಂಚ್ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಜಗದೀಶ್ ಮತ್ತು ಅಖಿಲ ಭಾರತ ಸಂಯೋಜಕ ಪೊ›.ಬಿ.ಎಂ. ಕುಮಾರಸ್ವಾಮಿ, ಕೃಷಿ ಪ್ರಯೋಗ ಪರಿವಾರದ ಅರುಣ ನಿಯೋಗದಲ್ಲಿದ್ದರು.

    9 ಪಿಡಿಒಗಳ ವಿರುದ್ಧ ಎಸಿಬಿ ತನಿಖೆ ಸಿಇಒಗೆ ಚಿನ್ನ, ಬೆಳ್ಳಿ ಉಡುಗೊರೆ ನೀಡಿದ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts