ಆರೆಸ್ಸೆಸ್ ಕಾರ್ಯಾಲಯಕ್ಕೆ ಬಾಂಬ್ ದಾಳಿಮಾಡಿದ್ದ ಇಬ್ಬರ ಸೆರೆ

1 Min Read
ಆರೆಸ್ಸೆಸ್ ಕಾರ್ಯಾಲಯಕ್ಕೆ ಬಾಂಬ್ ದಾಳಿಮಾಡಿದ್ದ ಇಬ್ಬರ ಸೆರೆ


ಕಾಸರಗೋಡು: ಪಯ್ಯನ್ನೂರಿನ ಆರೆಸ್ಸೆಸ್ ಕಾರ್ಯಾಲಯಕ್ಕೆ ಬಾಂಬ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಿಪಿಎಂ ಬೆಂಬಲಿಗರನ್ನು ಪಯ್ಯನ್ನೂರು ಡಿವೈಎಸ್‌ಪಿ ಕೆ.ಇ ಪ್ರೇಮಚಂದ್ರನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಪಯ್ಯನ್ನೂರ್ ಕಾರಮೇಲ್ ನಿವಾಸಿ ಕಶ್ಯಪ್ ಮತ್ತು ಕರಿವೆಳ್ಳುರ್ ಪೇರಳ ನಿವಾಸಿ ಟಿ.ಸಿ ಗನಿಲ್ ಬಂಧಿತರು. ಜುಲೈ 12ರಂದು ಬೈಕಿನಲ್ಲಿ ಆಗಮಿಸಿದ್ದ ತಂಡ ಆರೆಸ್ಸೆಸ್ ಕಚೇರಿಗೆ ಎರಡು ಸ್ಟೀಲ್ ಬಾಂಬುಗಳನ್ನು ಎಸೆದಿದ್ದರು.

ಪರಿಣಾಮ ಕಟ್ಟಡದ ಕಿಟಕಿ, ಗಾಜು, ಪೀಠೋಪಕರಣ ಹಾನಿಗೀಡಾಗಿತ್ತು. ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಈ ಪ್ರದೇಶದ 80ಕ್ಕೂ ಹೆಚ್ಚು ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಫೋನ್ ಕರೆಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಗುರುತು ಪತ್ತೆಹಚ್ಚುವ ಪರೇಡ್ ನಡೆಸಲೂ ಪೊಲೀಸರು ತೀರ್ಮಾನಿಸಿದ್ದಾರೆ.

See also  ಆಸ್ಪತ್ರೆಗಳಿಗೂ ಹುಸಿ ಬಾಂಬ್ ಇಮೇಲ್
Share This Article