More

    2 ಲಕ್ಷ ರೂ.ಉಳಿತಾಯ ಬಜೆಟ್

    ಬೈಲಹೊಂಗಲ: ಪುರಸಭೆಯ 2020-21ನೇ ಸಾಲಿನ 2.02 ಲಕ್ಷ ರೂ.ಉಳಿತಾಯ ಆಯವ್ಯಯವನ್ನು ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಶುಕ್ರವಾರ ಮಂಡಿಸಿದರು.

    ಪುರಸಭೆಗೆ ಬರತಕ್ಕಂತಹ ಸಂಪನ್ಮೂಲಗಳನ್ನು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳ ಮತ್ತು ಅಭಿವೃದ್ಧಿಗಾಗಿ ಬಿಡುಗಡೆಯಾಗುತ್ತಿರುವ ಅನುದಾನಗಳನ್ನು ಕ್ರೋಡೀಕರಿಸಿ ಪಟ್ಟಣ ಪ್ರದೇಶದ ನಾಗರಿಕರಿಗೆ ಮೂಲ ಸೌಕರ್ಯ ಸಮರ್ಪಕವಾಗಿ ಒದಗಿಸುವ ಕುರಿತು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಹಾಗೂ ಇತರ ಹಿಂದುಳಿದ ವರ್ಗದ ಜನರಿಗಾಗಿ ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡು ಆಯ-ವ್ಯಯ ಪತ್ರಿಕೆ ತಯಾರಿಸಲಾಯಿತು.

    ಪುರಸಭೆಯ ಆಡಳಿತಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಜರುಗಿದ ಸಭೆಯಲ್ಲಿ ಒಟ್ಟು ಆದಾಯ 25.08 ಕೋಟಿ ರೂ.ಗಳಲ್ಲಿ ಒಟ್ಟು ಖರ್ಚು 25.06 ಕೋಟಿ ರೂ.ಗಳಲ್ಲಿ 2.02 ಲಕ್ಷ ರೂ.ಉಳಿತಾಯದ ಅಂದಾಜು ಪತ್ರಿಕೆ ತಯಾರಿಸಲಾಯಿತು. ಅಂದಾಜು ಪತ್ರಿಕೆಗೆ ಪುರಸಭೆ ಆಡಳಿತಾಧಿಕಾರಿ ಮಂಜೂರಾತಿ ನೀಡಿದರು.

    ಆಯವ್ಯಯದಲ್ಲಿ ಎಸ್.ಎಫ್.ಸಿ. ಮತ್ತು ಸ್ಥಳೀಯ ನಿಧಿಯಡಿ ಶೇ. 29.00ರಡಿ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) 31.7 ಲಕ್ಷ ರೂ.ಗಳನ್ನು ಕಾಯ್ದಿರಿಸಿದ್ದು, ಶೇ. 7.25ರಡಿ (ಇತರ ಹಿಂದುಳಿದ ವರ್ಗಗಳ ಬಡತನ ನಿರ್ಮೂಲನೆ) ಕಾರ್ಯಕ್ರಮಕ್ಕಾಗಿ 6.23 ಲಕ್ಷ ರೂ.ಗಳನ್ನು ಹಾಗೂ ಶೇ.5ರಡಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕಾಗಿ 4.30 ಲಕ್ಷ ರೂ. ಅನುದಾನವನ್ನು ಕಾಯ್ದಿರಿಸಲಾಗಿದೆ. ಪುರಸಭೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಾದ ರಸ್ತೆ, ಚರಂಡಿಗೆ ರೂ. 451.74 ಲಕ್ಷ ರೂ.ಗಳನ್ನು ನೀರು ಸರಬರಾಜು ನಿರ್ವಹಣೆಗೆ 262.90 ಲಕ್ಷ ರೂ.ಗಳನ್ನು ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಹಾಗೂ ನಿರ್ವಹಣೆ ಸಲುವಾಗಿ 45.87 ಲಕ್ಷ ರೂ., ಘನತ್ಯಾಜ್ಯ ವಸ್ತು ನಿರ್ವಹಣೆಗೆ 213.82 ಲಕ್ಷ ರೂ., ಬೀದಿ ದೀಪದ ನಿರ್ವಹಣೆಗೆ 96.82 ಲಕ್ಷ ರೂ.ಗಳನ್ನು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ 1.52 ಲಕ್ಷ ರೂ.ಗಳನ್ನು ಕಾಯ್ದಿರಿಸಿ ಪುರಸಭೆಯ ಸರ್ವಾಂಗೀಣ ಅಭಿವೃದ್ಧಿಗೊಳಿಸಲು ವ್ಯಯಿಸಲಾಗುವುದು. ವಿಶೇಷ ಅನುದಾನ 3.00 ಕೋಟಿ ರೂ.ಬಿಡುಗಡೆಯಾಗಿದ್ದು, ಅನುದಾನದಲ್ಲಿ ರಸ್ತೆ ಮತ್ತು ಗಟಾರ ನಿರ್ಮಾಣದ ಕಾಮಗಾರಿ ಕೈಗೊಳ್ಳಲಾಗುವುದು.

    ಪುರಸಭೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಪುರಸಭೆಯ 2020-21ನೇ ಸಾಲಿನ ಅಂದಾಜು ಆಯ-ವ್ಯಯ ಪತ್ರಿಕೆಯನ್ನು ಪರಿಶೀಲಿಸಿ ಮಂಜೂರಾತಿ ನೀಡಿದರು. ವ್ಯವಸ್ಥಾಪಕ ಎಂ.ಐ.ಕುತ್ರಿ, ಕಂದಾಯ ಅಧಿಕಾರಿ ಉಮಾ ಬೆಟಗೇರಿ, ಲೆಕ್ಕಪಾಲಕಿ ಸೋನಾಲಿ ಬುಬನಾಳೆ, ಪ್ರಥಮ ದರ್ಜೆ ಸಹಾಯಕ ಬಿ.ಐ.ಗುಡಿಮನಿ, ಸೋಮನಿಂಗ ದೊಡವಾಡ, ಗಿರೀಶ ಜಿಗಜಿನ್ನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts