More

    ಗಿಡಗಂಟಿ ಸ್ವಚ್ಛಗೊಳಿಸಲು ಸೂಚನೆ

    ಗಜೇಂದ್ರಗಡ: ಖಾಲಿ ಸೈಟ್​ಗಳ ಮಾಲೀಕರು ತಮ್ಮ ಜಾಗದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಪುರಸಭೆಯಿಂದ ನೋಟಿಸ್ ಜಾರಿ ಮಾಡಲಾಗುವುದು ಎಂದು ಪುರಸಭೆ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ ಹೇಳಿದರು.

    ‘ಜನರ ಮನೆ ಬಾಗಿಲಿಗೆ ಪುರಸಭೆ’ ಆಡಳಿತ ಎಂಬ ವಿಶಿಷ್ಟ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ 1 ಮತ್ತು 2ನೇ ವಾರ್ಡ್ ನಿವಾಸಿಗಳ ಅಹವಾಲುಗಳಿಗೆ ಸ್ಥಳದಲ್ಲೇ ಸ್ಪಂದಿಸಿ, ಕೆಲ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಗಡುವು ನೀಡಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣವನ್ನಾಗಿಸುವ ಉದ್ದೇಶದಿಂದ ಪ್ರತಿ ದಿನ 2 ವಾರ್ಡ್​ಗಳಿಗೆ ಭೇಟಿ ನೀಡಿ ಆಯಾ ಬಡಾವಣೆಯಲ್ಲಿನ ಕುಡಿಯುವ ನೀರು, ಕಸ ವಿಲೇವಾರಿ, ಚರಂಡಿ ಸ್ವಚ್ಛತೆ, ರಸ್ತೆ ನಿರ್ಮಾಣ ಸೇರಿ ಇತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

    ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಹಾಗೂ ಶಾಸಕ ಕಳಕಪ್ಪ ಬಂಡಿ ಅವರ ಸೂಚನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಮಸ್ಯೆ ಹೊತ್ತು ಪುರಸಭೆಗೆ ಬರುವ ಮುನ್ನ ಅವರಿದ್ದಲ್ಲಿಗೆ ತೆರಳಿ ಪರಿಹಾರ ಒದಗಿಸಲು ಪುರಸಭೆ ಆಡಳಿತ ಕೆಲಸ ನಿರ್ವಹಿಸಲಿದೆ ಎಂದರು. ಸುಲಭ ಶೌಚಗೃಹಕ್ಕೆ 3 ದಿನದೊಳಗೆ ನೀರಿನ ವ್ಯವಸ್ಥೆ ಕಲ್ಪಿಸಲು ಹಾಗೂ 1ನೇ ವಾರ್ಡ್​ನ ಈಶ್ವರ ದೇವಸ್ಥಾನ ಬಳಿಯ ಹೈಮಾಸ್ಟ್ ವಿದ್ಯುತ್ ದೀಪ ಹಾಗೂ ಸೋಲಾರ್ ಲೈಟ್ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲು ಪುರಸಭೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

    ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಇಮಾಮ್ ಕಾಲಾನಾಯಕ, ರಾಘವೇಂದ್ರ ಮಂತಾ, ಪುರಸಭೆ ಸದಸ್ಯ ರಾದ ರಾಜು ಸಾಂಗ್ಲೀಕರ, ಯಮನೂರ ತಿರಕೋಜಿ, ಶ್ರೀನಿವಾಸ ಸವದಿ, ಗುಲಾಂ ಹುನಗುಂದ, ಚನ್ನಪ್ಪ ಸೋಂಪುರ, ನಾಗರಾಜ ಸವದಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts