More

    ರೂ. 17500 ಕೋಟಿ ಮೊತ್ತದ ಹಲವು ಕಾಮಗಾರಿ ಆದೇಶ: ಕಂಪನಿಯ ಷೇರಿಗೆ ಡಿಮ್ಯಾಂಡು

    ಮುಂಬೈ: ಭಾರೀ ವಿದ್ಯುತ್ ಉಪಕರಣಗಳಿಗೆ ಸಂಬಂಧಿಸಿದ ಕಂಪನಿಯಾದ ಕೆಇಸಿ ಇಂಟರ್‌ನ್ಯಾಷನಲ್ ಲಿಮಿಟೆಡ್ (KEC International Ltd.) ಷೇರುಗಳ ಬೆಲೆ ಶುಕ್ರವಾರ ಶೇ. 2ರಷ್ಟು ಏರಿಕೆ ಕಂಡಿತು.

    ಕಂಪನಿಯು 1004 ಕೋಟಿ ರೂಪಾಯಿ ಮೌಲ್ಯದ ಹೊಸ ಕಾಮಗಾರಿ ಆರ್ಡರ್‌ಗಳನ್ನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಷೇರು ಬೆಲೆ ಏರಿಕೆಯಾಗಿದೆ. ಇದರೊಂದಿಗೆ ಕೆಇಸಿ ಇಂಟರ್‌ನ್ಯಾಷನಲ್‌ನ ಕಾಮಗಾರಿ ಆರ್ಡರ್‌ಗಳು ವರ್ಷದಿಂದ ವರ್ಷಕ್ಕೆ ಸರಿಸುಮಾರು 17500 ಕೋಟಿ ರೂ. ಮೊತ್ತಕ್ಕೆ ತಲುಪಿವೆ.

    ಜಾಗತಿಕ ಇನ್‌ಫ್ರಾ ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಸಂಸ್ಥೆಯು ಪ್ರಸರಣ ಮತ್ತು ವಿತರಣೆ (ಟಿ & ಡಿ), ಸಿವಿಲ್ ನಿರ್ಮಾಣ, ರೈಲ್ವೆ ಮತ್ತು ಕೇಬಲ್‌ಗಳ ವಿಭಾಗಗಳು ಸೇರಿದಂತೆ ತನ್ನ ವಿವಿಧ ವ್ಯವಹಾರಗಳಲ್ಲಿ ರೂ. 1004 ಕೋಟಿ ಮೌಲ್ಯದ ಹೊಸ ಆರ್ಡರ್‌ಗಳನ್ನು ಪಡೆದುಕೊಂಡಿದೆ ಎಂದು ಕೆಇಸಿ ಇಂಟರ್‌ನ್ಯಾಶನಲ್ ಲಿಮಿಟೆಡ್ ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ.

    ಪ್ರಸರಣ ಮತ್ತು ವಿತರಣೆ (T&D) ವ್ಯಾಪಾರ ವಿಭಾಗದಲ್ಲಿ, KEC ಇಂಟರ್‌ನ್ಯಾಶನಲ್ ಭಾರತದಲ್ಲಿ ಹಾಗೂ ಅಮೆರಿಕದಲ್ಲಿ ಆರ್ಡರ್‌ಗಳನ್ನು ಗೆದ್ದಿದೆ. ಭಾರತದಲ್ಲಿ ಪ್ರಸರಣ ಮಾರ್ಗಗಳು, ಸಬ್‌ಸ್ಟೇಷನ್‌ಗಳು ಮತ್ತು ಭೂಗತ ಕೇಬಲ್‌ಗಳ ನಿರ್ಮಾಣ ಹಾಗೂ ಯುಎಸ್‌ನಲ್ಲಿ ಟವರ್‌ಗಳು, ಹಾರ್ಡ್‌ವೇರ್ ಮತ್ತು ಪೋಲ್‌ಗಳ ಪೂರೈಕೆಗೆ ಆರ್ಡರ್​ ದೊರೆತಿದೆ.

    KEC ಇಂಟರ್‌ನ್ಯಾಶನಲ್‌ನ ಕೇಬಲ್ ವ್ಯವಹಾರವು ಸರ್ಕಾರಿ ಕಂಪನಿಯಿಂದ ವಿದ್ಯುತ್ ಪ್ರಸರಣ ವಾಹಕಗಳ (ACSR ಮತ್ತು AL-59) ಪೂರೈಕೆಗಾಗಿ ತನ್ನ ಮೊದಲ ಆರ್ಡರ್​ ಪಡೆದುಕೊಂಡಿದೆ. ಇದರೊಂದಿಗೆ ವಿವಿಧ ರೀತಿಯ ಕೇಬಲ್ ಪೂರೈಕೆಗೆ ಮತ್ತೊಂದು ಆರ್ಡರ್​ ಬಂದಿದೆ. ವಿದ್ಯುತ್ ಪ್ರಸರಣ ವಾಹಕಗಳ ಪೂರೈಕೆಗಾಗಿ ಕಂಪನಿಯು ಮಹತ್ವದ ಆರ್ಡರ್​ ಸ್ವೀಕರಿಸಿದೆ. ಕೆಇಸಿ ಇಂಟರ್‌ನ್ಯಾಶನಲ್‌ನ ಎಂಡಿ ಮತ್ತು ಸಿಇಒ ವಿಮಲ್ ಕೇಜ್ರಿವಾಲ್, “ಮಿಷನ್ ರಫ್ತಾರ್’ ಅಡಿಯಲ್ಲಿ ಅರೆ-ಹೈ-ಸ್ಪೀಡ್ ರೈಲಿಗೆ ರೈಲ್ವೆಯ ಆರ್ಡರ್​ನಿಂದ ನಾವು ಉತ್ಸುಕರಾಗಿದ್ದೇವೆ ಎಂದು ಕಂಪನಿ ಹೇಳಿದೆ.

    ವಾರದ ಕೊನೆಯ ವಹಿವಾಟು ದಿನವಾದ ಶುಕ್ರವಾರ ಈ ಕಂಪನಿಯ ಷೇರಿನ ಬೆಲೆ ವಹಿವಾಟಿನ ಅಂತ್ಯಕ್ಕೆ 1.43%ರಷ್ಟು ಏರಿಕೆಯಾಗಿ 673.10 ರೂ. ತಲುಪಿದೆ. ಮಾರ್ಚ್ 11, 2024 ರಂದು ಈ ಷೇರಿನ ಬೆಲೆ ರೂ 769 ತಲುಪಿತ್ತು. ಇದು 52 ವಾರಗಳ ಗರಿಷ್ಠ ಬೆಲೆಯಾಗಿದೆ.

     

    ರಜಾ ದಿನಗಳಾದ ಶನಿವಾರ, ಭಾನುವಾರವೂ ಬ್ಯಾಂಕ್​ಗಳು ಕಾರ್ಯನಿರ್ವಹಿಸಲಿವೆ ಏಕೆ? ಆರ್​ಬಿಐ ಏನು ಹೇಳಿದೆ?

    ಸತತ 3ನೇ ದಿನ ಗೂಳಿಯ ಗುಟುರು: ದಾಖಲೆ ಏರಿಕೆ ಕಂಡ ಅಮೆರಿಕ ಷೇರು ಪೇಟೆ, ಭಾರತೀಯ ಮಾರುಕಟ್ಟೆಯಲ್ಲೂ ಚೇತರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts