More

    1.5 ಕೆಜಿ ಮೀನಿನ ಬೆಲೆ ಬರೋಬ್ಬರಿ 15 ಸಾವಿರ ರೂಪಾಯಿ! ಏನಿದರ ಮೀನಿಂಗೂ?

    ವಿಜಯವಾಡ: ಮೀನುಗಳ ರಾಜನೆಂದೇ ಹೆಸರಾಗಿರುವ ಹಿಲ್ಸಾ (ಸ್ಥಳೀಯವಾಗಿ ಪುಲಾಸ) ಮೀನು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕೆಲವು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಬಾರಿ ಮೀನಿನ ಬೆಲೆ ಕೇಳಿದರೆ ಕಣ್ಣೀರು ಬರುವಂತಿದೆ. ಈ ಭಾಗದಲ್ಲಿ ಪುಲಾಸ ಮೀನು ಹಿಡಿಯುವುದು ಕ್ಷೀಣಿಸುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.

    ಕೆಲ ದಿನಗಳ ಹಿಂದಷ್ಟೇ ಪುಲಾಸ ಮೀನು ಪೂರ್ವ ಗೋದಾವರಿಯ ಮಮಿಡಿಕುಡುರು ಮಂಡಲ ವ್ಯಾಪ್ತಿಯ ಪಸರ್ಲಪುದಿ ಏರಿಯಾದಲ್ಲಿ 2.5 ಕೆ.ಜಿ.ಗೆ 21 ಸಾವಿರ ರೂ.ಗೆ ಮಾರಾಟವಾಗಿ ಎಲ್ಲರ ಹುಬ್ಬೇರಿಸಿತ್ತು. ಸ್ಥಳೀಯ ರಾಜಕಾರಣಿ ಕೆ. ಕೊಂಡಲಾ ರಾವ್​ ಹರಾಜಿನ ವೇಳೆ ಪುಲಾಸ ಮೀನನ್ನು ಖರೀದಿಸಿದ್ದರು.

    ಇದನ್ನೂ ಓದಿ: 1982ರಲ್ಲಿ ಹೆಂಡ್ತಿನೇ ಇರ್ಲಿಲ್ಲಾ, ಹಾಗಿದ್ರೆ… ಜೂಜುಅಡ್ಡೆ ವಿಷ್ಯದಲ್ಲಿ ಟ್ರೋಲ್​ ಆಗ್ತಿದ್ದಾರೆ ಎಚ್​ಡಿಕೆ!

    ಇದೀಗ ಮತ್ತೊಮ್ಮೆ ಪುಲಾಸ ಮೀನು ಭಾರಿ ಬೆಲೆಗೆ ಮಾರಾಟವಾಗಿದೆ. ಪೂರ್ವ ಗೋದಾವರಿಯ ಯಾನಮ್​ ಏರಿಯಾದಲ್ಲಿ 1.5 ಕೆ.ಜಿ.ಗೆ 15 ಸಾವಿರ ರೂ.ಗೆ ಮಾರಾಟವಾಗಿದೆ. ಸಾಮಾನ್ಯವಾಗಿ ಈ ಮೀನು ಕೆ.ಜಿ.ಗೆ 3 ರಿಂದ 6 ಸಾವಿರವರೆಗೂ ಮಾರಾಟವಾಗುತ್ತದೆ.

    ಗೋದಾವರಿ ಪ್ರದೇಶದಲ್ಲಿ ಪುಲಾಸ ಮೀನು ಹಿಡಿಯುವುದು ಕ್ಷೀಣಿಸುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಅಂದಹಾಗೆ ಪುಲಾಸ ಮೀನು ಗೋದಾವರಿ ನದಿಯಲ್ಲಿ ಜುಲೈ-ಸೆಪ್ಟೆಂಬರ್​ ತಿಂಗಳಲ್ಲಿ ಮಾತ್ರ ದೊರೆಯುತ್ತದೆ. ಹೀಗಾಗಿ ಪುಲಾಸ ಮೀನಿಗೆ ಭಾರಿ ಬೇಡಿಕೆ ಇದೆ. (ಏಜೆನ್ಸೀಸ್​)

    ಸತ್ತ ಮೇಲೇಕೆ ಕರೊನಾ ಪರೀಕ್ಷೆ? ಬೇಡ ಬಿಡಿ ಎಂದ ಆರೋಗ್ಯ ಇಲಾಖೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts