More

    104 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಮೇಲ್ದರ್ಜೆಗೆ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿಕೆ

    ಹೊಸಪೇಟೆ: ನಗರದ ಸಾರ್ವಜನಿಕ ಆಸ್ಪತ್ರೆಯನ್ನು 100ರಿಂದ 250 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು 104 ಕೋಟಿ ರೂ. ಪ್ರಸ್ತಾವನೆ ಸಿದ್ಧಗೊಂಡಿದೆ. ಕ್ಯಾಬಿನೆಟ್ ಅನುಮತಿ ಬಳಿಕ ಕಾರ್ಯಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.

    ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಶಾಸಕ ಆನಂದ ಸಿಂಗ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಸ್ಪತ್ರೆ ಮೇಲ್ದರ್ಜೆ ಯೋಜನೆ ಪೂರ್ವಭಾವಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಡಿಎಂಎಫ್ ಅನುದಾನದಿಂದ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲಾಗುವುದು. ಪ್ರಸ್ತುತ ನೂರು ಹಾಸಿಗೆ ಆಸ್ಪತ್ರೆ ಯಥಾಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆಸ್ಪತ್ರೆ ಹಿಂಭಾಗದಲ್ಲಿ ನಾಲ್ಕು ಮಹಡಿ ಕಟ್ಟಡ ನಿರ್ಮಿಸಲು ಯೋಜನೆ ಸಿದ್ಧಗೊಂಡಿದೆ. ಮೂರು ಮಾದರಿಯಲ್ಲಿ ಕೆಎಚ್‌ಆರ್‌ಡಿಪಿ ಇಂಜಿನಿಯರ್ಸ್ ನೀಲಿನಕ್ಷೆ ಸಿದ್ಧಗೊಳಿಸಿದ್ದಾರೆ. ಮುಂದಿನ 20 ವರ್ಷದವರೆಗಿನ ಜನಸಂಖ್ಯೆ ಆಧರಿಸಿ ಯೋಜನೆ ರೂಪಿಸಲಾಗಿದೆ. ಸದ್ಯಕ್ಕೆ ಎಂಬಿಬಿಎಸ್ ವೈದ್ಯರು ಸೇವೆ ಸಲ್ಲಿಸಲು ಮುಂದಾದರೆ ಕೂಡಲೇ ನೇಮಿಸಲಾಗತ್ತದೆ. ಪ್ರಸ್ತುತ 100 ಹಾಸಿಗೆ ಆಸ್ಪತ್ರೆಯಲ್ಲಿ ತಿಂಗಳಿಗೆ 200 ಹೆರಿಗೆ ಆಗುತ್ತಿವೆ. ಅಗತ್ಯ ಉಪಕರಣ ಖರೀದಿಸಲು 50 ಲಕ್ಷ ರೂ. ಡಿಎಂಎಫ್ ಅನುದಾನ ನೀಡಲಾಗಿದೆ. ಉತ್ತಮ ಚಿಕಿತ್ಸೆಗೆ ಇನ್ನೂ ಉಪಕರಣಗಳು ಅಗತ್ಯವಿದ್ದರೆ ಅನದಾನ ನೀಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts