More

    ಸರ್ಕಾರದಿಂದ ಹೆಸ್ಕಾಂಗೆ ರೂ.100 ಕೋಟಿ ಅನುದಾನ, ವಿದೇಶದಿಂದ 2 ಲಕ್ಷ ಟನ್ ಕಲ್ಲಿದ್ದಲು ಆಮದಿಗೆ ಟೆಂಡರ್, ರಾಜ್ಯದ ರೈತರಿಗಿನ್ನು 6 ಗಂಟೆ ವಿದ್ಯುತ್ ಪೂರೈಕೆ, ಸಚಿವ ಎಂ.ಬಿ. ಪಾಟೀಲರಿಂದ ಸಿಹಿ ಸುದ್ದಿ


    ವಿಜಯಪುರ: ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಬೇಡಿಕೆ ಹೆಚ್ಚಾಗಿದ್ದು, ಸರ್ಕಾರ 5 ಗಂಟೆಯ ಬದಲಿಗೆ 6 ಗಂಟೆ ತ್ರಿಪೇಸ್ ನೀಡುವ ಮೂಲಕ ರೈತರ ಬೇಡಿಕೆಗೆ ಸ್ಪಂದಿಸಿದೆ. ಹೀಗಾಗಿ ರೈತರು ವಿದ್ಯುತ್ ಸದುಪಯೋಗ ಪಡಿಸಿಕೊಳ್ಳಬೇಕೆಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

    ರಾಜ್ಯದಲ್ಲಿ ಈ ಹಿಂದೆ ಇದೇ ಅವಧಿಯಲ್ಲಿ 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಇದೀಗ ಬೇಡಿಕೆ ಹೆಚ್ಚಾಗಿದ್ದು, 16 ಸಾವಿರ ಮೆಗಾ ವ್ಯಾಟ್‌ಗೆ ಹೆಚ್ಚಿದೆ. ಬಹುಶಃ ಬರದ ಕಾರಣ ಬೇಡಿಕೆ ಹೆಚ್ಚಾಗಿರಬಹುದು. ಆದರೆ, ವ್ಯತಿರಿಕ್ತ ಎಂಬಂತೆ ಉತ್ಪಾದನೆಯಾಗುತ್ತಿದ್ದ 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಪೈಕಿ 4-5 ಸಾವಿರ ಮೆಗಾ ವ್ಯಾಟ್ ಕಡಿಮೆಯಾಗಿದೆ. ಈ ಹಿಂದೆ ಪವನ ಶಕ್ತಿಯಿಂದ 6 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಇದೀಗ 200 ಮೆಗಾ ವ್ಯಾಟ್‌ಗೆ ಇಳಿಕೆಯಾಗಿದೆ. ಕಲ್ಲಿದ್ದಲು ಘಟಕಗಳಿಂದಲೂ ಸುಮಾರು 2400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ಮಳೆ ಅಭಾವದಿಂದ ಜಲ ವಿದ್ಯುತ್ ಉತ್ಪಾದನೆಯೂ ಕಡಿಮೆಯಾಗಿದೆ. ಕೇವಲ ಸೋಲಾರನಿಂದ ಮಾತ್ರ ನಮಗೆ ಸ್ವಲ್ಪ ವಿದ್ಯುತ್ ಸಿಗುತ್ತಿದ್ದು, ಅಷ್ಟರಲ್ಲಿಯೇ ಬೇಡಿಕೆ ಪೂರೈಸಲಾಗುತ್ತಿದೆ. ಹೀಗಾಗಿ ರೈತರು ಸಹಕರಿಸಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಕೊರತೆಯ ನಡುವೆಯೂ ಮುಖ್ಯಮಂತ್ರಿಗಳು 5 ಗಂಟೆಗಳ ಕಾಲ ವಿದ್ಯುತ್ ಪೂರೈಸಲು ಸೂಚಿಸಿದ್ದರು. ಇದೀಗ ಮತ್ತೆ 1ಗಂಟೆ ಹೆಚ್ಚಿಸಿ ಒಟ್ಟು 6 ಗಂಟೆ ವಿದ್ಯುತ್ ಪೂರೈಕೆಗೆ ಸೂಚಿಸಿದ್ದಾರೆ. ಕೆಲವು ಕಡೆ ಆರು ಗಂಟೆ ಸತತವಾಗಿ ವಿದ್ಯುತ್ ನೀಡಲು ಆಗದೆ ಇರಬಹುದು. ಹೀಗಾಗಿ ಹಗಲು 4 ಗಂಟೆ ಹಾಗೂ ರಾತ್ರಿ 2 ಗಂಟೆ ಕೊಡಲು ಸಾಧ್ಯವಾಗಲಿದೆ. ಜನರ ಮನವಿ ಮೇರೆಗೆ ಸಮಯದ ಬದಲಾವಣೆ ಮಾಡಲಾಗುತ್ತಿದೆ. ಇನ್ನೂ ಕೆಲವೆಡೆ ಸಮಯದ ಬದಲಾವಣೆ ಸ್ಟೇಶನ್‌ಗಳ ಮೇಲೆ ಅವಲಂಬಿಸಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದರು.

    ಸಕ್ಕರೆ ಕಾರ್ಖಾನೆಗಳಿಂದಲೂ ವಿದ್ಯುತ್ ಉತ್ಪಾದನೆಯಾಗಲಿದ್ದು, ನ. 1ರಿಂದ ವಿದ್ಯುತ್ ಕಾರ್ಖಾನೆ ಆರಂಬಿಸಲು ಸೂಚಿಸಲಾಗಿದೆ. ಹೀಗಾಗಿ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಲಭ್ಯವಾಗುತ್ತಿದ್ದಂತೆ ಬೇಡಿಕೆ ಪ್ರಮಾಣ ಕಡಿಮೆಯಾಗಲಿದೆ ಎಂದರು.

    ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಡಿಸಿ ಮಹಾದೇವ ಮುರಗಿ, ಜಿಪಂ ಸಿಇಒ ರಾಹುಲ್ ಶಿಂಧೆ, ಎಎಸ್‌ಪಿ ಶಂಕರ ಮಾರಿಹಾಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts