More

    ಸಚಿವ ಎಂ.ಬಿ. ಪಾಟೀಲರ ವಿರುದ್ಧ ವಿಜುಗೌಡ ಪರೋಕ್ಷ ವಾಗ್ದಾಳಿ, ಪ್ರಬುದ್ಧ ಎನ್ನಿಸಿಕೊಂಡವರಿಂದ ಚಿಲ್ಲರೆ ರಾಜಕಾರಣ…!

    ವಿಜಯಪುರ: ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಮತಗಳು ಬಂದಿವೆ ಎಂಬ ಕಾರಣಕ್ಕೆ ತಿಕೋಟಾ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ದೂರವಿಡುವ ಮೂಲಕ ಪ್ರಬುದ್ಧರೆನ್ನಿಸಿಕೊಂಡವರು ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆಂದು ಬಿಜೆಪಿ ಮುಖಂಡ, ಬೀಜ ಮತ್ತ ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಪರೋಕ್ಷವಾಗಿ ಸಚಿವ ಎಂ.ಬಿ. ಪಾಟೀಲರ ವಿರುದ್ಧ ಹರಿಹಾಯ್ದರು.

    ತಿಕೋಟಾ ತಾಲೂಕು ವ್ಯಾಪ್ತಿಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿವೆ. ಹೀಗಾಗಿ ಕ್ಷೇತ್ರದ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಆ ಭಾಗದ ಜನರ ಮೇಲೆ ಹಗೆತನ ಸಾಧಿಸುತ್ತಿದ್ದಾರೆ. ಬರ ಘೋಷಣೆಯಾದರೆ ಈ ಭಾಗದ ಜನರಿಗೆ ಸರ್ಕಾರದಿಂದ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಬರಪಟ್ಟಿಯಿಂದ ತಿಕೋಟಾ ದೂರವಿರಿಸಿದ್ದಾರೆಂದು ಬುಧವಾರ ಸುದ್ದಿಗಾರರಿಗೆ ಅವರು ತಿಳಿಸಿದರು.

    ಸುಳ್ಳು ಹೇಳಿಕೆ ಕೊಟ್ಟು ಜನರಿಗೆ ಮೋಸ ಮಾಡಿ ಮತ ಪಡೆದುಹೋಗುವವರಿಗೆ ಭಗವಂತನೇ ನೋಡಿಕೊಳ್ಳುತ್ತಾನೆ. ತಿಕೋಟಾ ಜನರಿಗೆ ಮೋಸ ಮಾಡುವ ಉದ್ದೇಶದಿಂದ ಬರ ಪೀಡಿತ ಪಟ್ಟಿಯಿಂದ ವಂಚಿತಗೊಳಿಸಿದ್ದಲ್ಲದೇ ಕಾಲುವೆ ನೀರು ಸಹ ಸಮರ್ಪಕವಾಗಿ ಹರಿಸುತ್ತಿಲ್ಲ. ಲೋಗಾಂವ ಗ್ರಾಮದಲ್ಲಿ ಕಟ್ಟಾ ಕಾಂಗ್ರೆಸ್ ಮನುಷ್ಯ ಬಿಜೆಪಿಗೆ ಬಂದಿದ್ದಾನೆಂದು ಕಾಲುವೆ ನೀರು ಬೇಕಾಬಿಟ್ಟಿಯಾಗಿ ಹರಿಸಿ ಆರು ಎಕರೆ ದ್ರಾಕ್ಷಿ ಹಾಳು ಮಾಡಿದ್ದಾರೆ. ಎಲ್ಲಿ ತಮ್ಮ ಕಾರ್ಯಕರ್ತರು ಇದ್ದಾರೋ ಅಲ್ಲಿ ನೀರು ಬರುತ್ತದೆ. ಇನ್ನುಳಿದ ಕಡೆ ನೀರು ಹರಿಸಲ್ಲ. ಇಟ್ಟಂಗಿಹಾಳದಲ್ಲಿ ನೀರಿಲ್ಲವೆಂದು ರೈತರು ರಸ್ತೆ ತಡೆ ನಡೆಸಿದರು. ವಿವಿಧೆಡೆ ರೈತರು ಪ್ರತಿಭಟನೆ ನಡೆಸಿದರೂ ಸ್ಪಂದಿಸಲಿಲ್ಲ. ರೈತರ ಜೊತಗೂಡಿ ನಾನು ಸಹ ಹೋರಾಟ ಮಾಡಿದ್ದೇನೆ. ಈ ಮೊದಲು ನೀರಿದ್ದರೆ ವಿದ್ಯುತ್ ಇಲ್ಲ, ವಿದ್ಯುತ್ ಇದ್ದರೆ ನೀರಿಲ್ಲ ಎಂಬ ಸ್ಥಿತಿ ಇತ್ತು. ಇದೀಗ ಎರಡೂ ಸಿಗುತ್ತಿಲ್ಲ. ಗ್ರಾಮೀಣ ಜನ ಹೈರಾಣಾಗಿದ್ದಾರೆ. ಹಾವುಗಳು ಕತ್ತಲೆಯಲ್ಲಿ ಮನೆಗೆ ನುಸುಳುತ್ತಿವೆ. ವಿದ್ಯಾರ್ಥಿಗಳಿಗೆ ಓದಲು ಸಮಸ್ಯೆಯಾಗುತ್ತಿದೆ. ಬೇಕಾದರೆ ಉಸ್ತುವಾರಿ ಮಂತ್ರಿ ಹೋಗಿ ನೋಡಲಿ ಎಂದು ವಿಜುಗೌಡರು ಆಗ್ರಹಿಸಿದರು.

    ಈಗಾಗಲೇ ತಿಕೋಟಾ ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸಿಎಂ ಮತ್ತು ಡಿಸಿಎಂಗೆ ಪತ್ರ ಬರೆದಿದ್ದೇನೆ. ಸಭೆ ನಡೆಸಿ ತೀರ್ಮಾನ ಕೈಗೊಳ್ಳುವರೆಂಬ ನಿರೀಕ್ಷೆಯೂ ಹುಸಿಯಾಗಿದೆ. ಶೀಘ್ರದಲ್ಲೇ ಬಿಜೆಪಿ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಮುಂದಿನ ಹೋರಾಟ ರೂಪಿಸುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts